ತಂದೆ ತಾಯಿಗಳೇ ನಿಜವಾದ ನಾಯಕರು

KannadaprabhaNewsNetwork |  
Published : Jan 17, 2025, 12:45 AM IST
ಗುಬ್ಬಿ ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ  ಸೇವಾ ಸದನ ಶಿಕ್ಷಣ ಸಂಸ್ಥೆಯಿಂದ  ಏರ್ಪಡಿಸಿದ್ದ ಚಿದಂಬರ ಸಂಭ್ರಮ ಮತ್ತು ಗುರುಸ್ಮರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ  ಖ್ಯಾತ ಅಂಕಣಕಾ ಮತ್ತು ಸಾಮಾಜಿಕ ಕಾರ್ಯಕರ್ತ ಆದರ್ಶ ಗೋಖಲೆ. | Kannada Prabha

ಸಾರಾಂಶ

ಸಿನಿಮಾದಲ್ಲಿ ಬರುವ ನಟರು ಜೀವನದಲ್ಲಿ ನಾಯಕರಲ್ಲ, ಮನೆಯಲ್ಲಿ ಇರುವ ತಂದೆ ತಾಯಿಗಳು ಜೀವನದಲ್ಲಿ ನಿಜವಾದ ನಾಯಕರು ಮತ್ತು ಹೀರೊಗಳು ಎಂದು ಖ್ಯಾತ ಅಂಕಣಕಾರ ಮತ್ತು ಸಾಮಾಜಿಕ ಕಾರ್ಯಕರ್ತ ಆದರ್ಶ ಗೋಖಲೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸಿನಿಮಾದಲ್ಲಿ ಬರುವ ನಟರು ಜೀವನದಲ್ಲಿ ನಾಯಕರಲ್ಲ, ಮನೆಯಲ್ಲಿ ಇರುವ ತಂದೆ ತಾಯಿಗಳು ಜೀವನದಲ್ಲಿ ನಿಜವಾದ ನಾಯಕರು ಮತ್ತು ಹೀರೊಗಳು ಎಂದು ಖ್ಯಾತ ಅಂಕಣಕಾರ ಮತ್ತು ಸಾಮಾಜಿಕ ಕಾರ್ಯಕರ್ತ ಆದರ್ಶ ಗೋಖಲೆ ತಿಳಿಸಿದರು.

ಗುಬ್ಬಿ ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಸೇವಾ ಸದನ ಶಿಕ್ಷಣ ಸಂಸ್ಥೆಯಿಂದ ಏರ್ಪಡಿಸಿದ್ದ ಚಿದಂಬರ ಸಂಭ್ರಮ ಮತ್ತು ಗುರುಸ್ಮರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ಎಲ್ಲದಕ್ಕಿಂತಲೂ ಅತ್ಯಂತ ಪವಿತ್ರವಾಗಿರುವ ತೀರ್ಥಕ್ಷೇತ್ರ ಯಾವುದಾದರೂ ಒಂದು ಇದ್ದರೆ ಅದು ತಾಯಿಯ ಮಡಿಲು. ಹುಟ್ಟಿನಿಂದ ದೊಡ್ಡವರಾಗತನಕ‌ ಮಕ್ಕಳ ಎಷ್ಟು ತೊಂದರೆ ಕೊಟ್ಟರು ಸಹಿಸಿಕೊಂಡು ಲಾಲನೆ ಪಾಲನೆ ಮಾಡಿಕೊಂಡು ಸಾಕುತ್ತಾರೆ. ಅದ್ದರಿಂದ ಅಮ್ಮನೇ ಜಗತ್ತಿನ ಸರ್ವಶ್ರೇಷ್ಠ ಮೊಟ್ಟ ಮೊದಲ ದೇವರು ಅಂತ ಹೇಳಿಕೊಟ್ಟದ್ದೇ ಭಾರತೀಯ ಪರಂಪರೆ ಅದನ್ನ ಮಾತೃದೇವೋಭವ ಅಂತ ಕರೆಯುತ್ತಾರೆ.ಮೂರು ಗಂಟೆಯ ಸಿನಿಮಾದಲ್ಲಿ ಬಡಿದಾಡುವಂತಹ ಸಿನಿಮಾ ನಟರು ನಮ್ಮ ಮಕ್ಕಳ ಹೀರೋಗಳಲ್ಲ. ಬಿಗ್ ಬಾಸ್ ಸ್ಪರ್ಧಿಗಳು ನಮ್ಮ ಮಕ್ಕಳ ಹೀರೋಗಳಲ್ಲ, ನಿಜವಾಗಿರುವ ಹೀರೋಗಳು ಅಂತ ಯಾರಾದರೂ ಇದ್ದರೆ, ಅದು ಈ ದೇಶದ ಸೈನಿಕನೇ ನಮ್ಮ ಮಕ್ಕಳ ನಿಜವಾಗಿರುವಂತಹ ಹೀರೋ ಮತ್ತು ನಾಯಕ. ದೇಶದ ಗಡಿಯಲು ಕೆಲಸ ಮಾಡುವಂತಹ ಸೈನಿಕ ಮಾತ್ರ ಅಂತಹ ಸೈನಿಕರನ್ನು ನಮ್ಮ ಮಕ್ಕಳಿಗೆ ಹೀರೋಗಳನ್ನಾಗಿ ತೋರಿಸುವಂತಹ ಒಂದು ದೊಡ್ಡ ಜವಾಬ್ದಾರಿ ಎಲ್ಲ ಪೋಷಕರು ಕೂಡ ಮಾಡಬೇಕು.ಸೇವಾ ಸದನ ಶಿಕ್ಷಣ ಸಂಸ್ಥಯ ಶ್ರೀ ಚಿದಂಬರಾಶ್ರಮದ ಅಧ್ಯಕ್ಷ ಡಾ.ಸಚ್ಚಿದಾನಂದ ಶರ್ಮಾ ಮಾತನಾಡಿ, ಮಹಾತ್ಮರು ಮಾಡಿದ ಸಾಧನೆಗಳನ್ನು ಇಂದಿನ ಯುವ ಜನತೆ ಸ್ಮರಿಸಿಕೊಂಡು ಪಾಲನೆ ಮಾಡಿದಾಗ ಉತ್ತಮ ಸಮಾಜ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಕ್ಷ್ಮೀಕಾಂತ್, ಗ್ರಾಪಂ ಸದಸ್ಯೆ ಅರುಣಾಕುಮಾರಿ, ಸಿಆರ್ ಪಿ ಲೋಕೇಶ್, ಅಶ್ರಮದ ನಾರಾಯಣ್, ಶಿಕ್ಷಕರಾದ ಅನಂತರಾಜು, ಎ.ಬಿ ಜಗದೀಶ್, ನೇತ್ರಾವತಿ, ನಳಿನ ಕುಮಾರಿ,ರಾ ಯವಾರದ ಅಪ್ಪಿ, ಸೇವಾ ಸದನ ಶಿಕ್ಷಣ ಸಂಸ್ಥೆಯ ಶಿಕ್ಷಕ ವರ್ಗ, ಸಿಬ್ಬಂದಿವರ್ಗ ಮತ್ತು ಶಾಲಾ ವಿದ್ಯಾರ್ಥಿಗಳು ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ