ಹೆತ್ತ ತಂದೆ-ತಾಯಿ, ಗುರುವನ್ನು ಗೌರವದಿಂದ ಕಾಣಿ: ಡಿ.ಎಂ.ಪೈಲ್

KannadaprabhaNewsNetwork | Published : Dec 6, 2024 8:56 AM

ಸಾರಾಂಶ

ಅನಾವಶ್ಯಕ ಸಮಯ ಹಾಳುಮಾಡದೇ ಅಭ್ಯಾಸದ ಕಡೆ ಗಮನ ಹರಸಿ ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಬಳಸಿಕೊಂಡು ಜೀವನದಲ್ಲಿ ಸಾಧನೆ ಮಾಡಿ.

ಕನ್ನಡಪ್ರಭ ವಾರ್ತೆ ಬಾದಾಮಿ

ಪ್ರತಿಯೂಬ್ಬರಲ್ಲಿ ವಿಶಿಷ್ಟ ಪ್ರತಿಭೆ ಇದ್ದು, ಅದನ್ನು ಆಸಕ್ತಿಯಿಂದ ಹೊರಹಾಕುವ ಪ್ರಯತ್ನ ಮಾಡಬೇಕು. ಹೆತ್ತ ತಂದೆ-ತಾಯಿ ಮತ್ತು ಗುರುಗಳಿಗೆ ಯಾರು ಗೌರವದಿಂದ ಕಾಣುತ್ತಾರೆ, ಅವರು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಎಸ್‌ಜಿಎಂಕೆ ಕಾಲೇಜು ಚೇರಮನ್‌ ಡಿ.ಎಂ.ಪೈಲ್ ತಿಳಿಸಿದರು.

ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆ ಬಸವ ಮಂಟಪದಲ್ಲಿ ಹಮ್ಮಿಕೊಂಡ ಎಸ್.ಬಿ.ಮಮದಾಪೂರ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ಪದವಿ ಮಾಹಾವಿದ್ಯಾಲಯ 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.

ನಿರ್ದೇಶಕರಾದ ಜೆ.ಎಸ್.ಮಮದಾಪೂರ ಮಾತನಾಡಿ, ನಮ್ಮಲಿರುವ ಕಲೆ ಪ್ರದರ್ಶಿಸಿದಾಗ ಮಾತ್ರ ನಮ್ಮ ಪ್ರತಿಭೆ ಗೊತ್ತಾಗುತ್ತದೆ. ಆಗ ಉನ್ನತ ಮಟ್ಟದಲ್ಲಿ ಬೆಳೆದು ಕೀರ್ತಿ ಹೆಚ್ಚಿಸಲು ಸಾಧ್ಯ. ಆದರೆ ಬೇರೊಬ್ಬರ ಮಾತು ಕೇಳಿ ಅಪಹಾಸ್ಯಕ್ಕೆ ಈಡಾಗುತ್ತೇನೆ ಎಂಬ ಭಾವನೆ ಇಟ್ಟುಕೊಂಡರೆ ಜೀವನದಲ್ಲಿ ಮುಂದೆ ಬರಲು ಸಾದ್ಯವಿಲ್ಲ. ಕೆಲವು ಬದುಕಿನಲ್ಲಿ ಸಹಜವಾಗಿ ಜರುಗುವ ಮಹತ್ವದ ದೃಶ್ಯಗಳನ್ನು ಜಾಲತಾಣದ ವಿಡಿಯೋಗಳಲ್ಲಿ ಬರುವ ಸನ್ನಿವೇಶಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಸಾಧನೆ ಮಹತ್ವ ವಿವರಿಸಿದರು.

ಸಾನ್ನಿಧ್ಯ ವಹಿಸಿದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಅನಾವಶ್ಯಕ ಸಮಯ ಹಾಳುಮಾಡದೇ ಅಭ್ಯಾಸದ ಕಡೆ ಗಮನ ಹರಸಿ ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಬಳಸಿಕೊಂಡು ಜೀವನದಲ್ಲಿ ಸಾಧನೆ ಮಾಡಿ. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ಇಂತಹ ಸಮಯ ಹಾಳು ಮಾಡಿಕೊಳ್ಳದೆ ಶ್ರದ್ಧೆಯಿಂದ ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು ಆಗ ನಿಮ್ಮ ಬದುಕು ಸಾರ್ಥಕವಾಗುವುದು ಎಂದರು.

ಸಂಸ್ಥೆ ಅಧ್ಯಕ್ಷ ಎ.ಸಿ.ಪಟ್ಟಣದ ಎಸ್.ಡಿ. ಪತ್ತೇಪೂರ, ಪಿ.ಬಿ.ಕಾಚಟ್ಟಿ, ಪ್ರಾಚಾರ್ಯ ಆರ್.ಎಸ್.ಮೂಲಿಮನಿ, ಮಾರುತಿ ಬಿಂಗೇರಿ, ಸುಶಾಂತ ಮುಗಜೋಳ ವೇದಿಕೆಮೇಲೆ ಇದ್ದರು. ಕಾಲೇಜಿನ ಹಳೆ ವಿದ್ಯಾರ್ಥಿಗಳಲ್ಲಿ ಸಾಧನೆಗೈದವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಪ್ರಾಚಾರ್ಯ ರವೀಂದ್ರ ಮೂಲಿಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಪಕರಾದ ಎ.ಎ.ತೊಪ್ಪಲಕಟ್ಟಿ ಸ್ವಾಗತಿಸಿ, ಶಿವುಕುಮಾರ ಅಂಗಡಿ ನಿರೂಪಿಸಿ, ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದರು.

Share this article