ಕನ್ನಡಪ್ರಭ ವಾರ್ತೆ ಮುಗಳಖೋಡ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಿ ಕೊಡುವ ಸಂಸ್ಥೆಗಳು ಆರ್ಥಿಕ ಸಂಕಷ್ಟದ ಜತೆಗೆ ಅನೇಕ ತೊಂದರೆಗಳನ್ನು ಅನುಭವಿಸುವಂತಹ ದಿನಗಳಲ್ಲಿ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯು ಹೆತ್ತ ತಂದೆ-ತಾಯಿಗಳಿಗೆ ಗುರುಗಳಿಗೆ ಪಾದಪೂಜೆ ಮಾಡಿಸುವ ಕಾರ್ಯ ಶ್ಲಾಘನೀಯವಾದದ್ದು, ಎಲ್ಲರೂ ಹೆತ್ತ ತಂದೆ-ತಾಯಿಗಳನ್ನು ಗೌರವಿಸಬೇಕು ಎಂದರು. ರಾಯಬಾಗ ಮಾಜಿ ಶಾಸಕ ಬಿ.ಸಿ.ಸರಿಕರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.ಆಚಲೇರಿ-ಜಿಡಗಾಮಠದ ಬಸವರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಶೋಕ ಕೊಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಸಿದ್ಧಾರೂಢ ಈಟಿ ಅಧ್ಯಕ್ಷತೆ ವಹಿಸಿದರು. ಕಬಡ್ಡಿ ಹಾಗೂ ಕ್ರೀಡಾಕೂಟ ಮತ್ತು ರಾಣಿ ಚನ್ನಮ್ಮ ಯೂನಿವರ್ಸಿಟಿಗೆ ರ್‍ಯಾಂಕ್ ವಿಜೇತರಿಗೆ ಸಿದ್ದರಾಮೇಶ್ವರ ಸ್ಟಾರ್ ಅವಾರ್ಡ್ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಎಂ.ಬಿ.ಸಾಯನ್ನವರ, ಶಿಕ್ಷಕ ರಾಜು ಬಾಬಣ್ಣವರ, ವಿಜಯ ಕೊಪ್ಪದ, ಬಿ.ಐ.ಹುಣಸಿಕಟ್ಟಿ, ಮುಪ್ಪಯ್ಯ ಹಿರೇಮಠ, ಮಲ್ಲಪ್ಪ ದ್ಯಾಶಾಳ, ಜೈ ಜವಾನ್ ಜೈ ಕಿಸಾನ್ ಬ್ಯಾಂಕಿನ ಉಪಾಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ಮುಖಂಡ ಆನಂದ ತುಳಜವ್ವಗೊಳ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಹೊನ್ನಪ್ಪ ಲಗಳೆ, ಮುತ್ತಪ್ಪ ಬಾಳೋಜಿ, ದೈಹಿಕ ಶಿಕ್ಷಣ ಉಪನ್ಯಾಸಕ ಬಿ.ಬಿ.ಬಂಡಿಗಣಿ, ಗುರು ಜಂಬಗಿ ಇತರರು ಇದ್ದರು.
ವಿ.ಎಂ.ಕರಡಿ ಸ್ವಾಗತಿಸಿದರು. ಎ.ಎಲ್.ಪೂಜಾರಿ, ಪರಶುರಾಮ ಕೆಳಗಡೆ ನಿರೂಪಿಸಿದರು. ಶಿವಾನಂದ ಹಂಚಿನಾಳ ವಂದಿಸಿದರು.