ಮಕ್ಕಳಿಗೆ ಪಾಲಕರು ಒತ್ತಡ ಹಾಕಬೇಡಿ: ಶಾಸಕ ಪಾಟೀಲ

KannadaprabhaNewsNetwork |  
Published : May 10, 2026, 02:15 AM IST
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾಸಲಾಯಿತು. | Kannada Prabha

ಸಾರಾಂಶ

ಒತ್ತಡದಿಂದ ಗುರಿ ಮುಟ್ಟಲು ಅಸಾಧ್ಯ ಎಂದ ಅವರು, ಎಸ್‌ಎಸ್‌ಎಲ್‌ಸಿ ಆರಂಭಿಕ ಹಂತವಾಗಿದ್ದು ಪಿಯುಸಿ ಜೀವನದ ಮುಖ್ಯ ಘಟ್ಟವಾಗಿದೆ. ಅದನ್ನು ಶ್ರಮ ಪಟ್ಟು ಮುಗಿಸಿ ಜೀವನ ರೂಪಿಸಿಕೊಳ್ಳಬೇಕು.

ನರಗುಂದ:

ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳಾಗಿದ್ದು ಅವರ ಆಸಕ್ತಿಗೆ ಅನುಗುಣವಾಗಿ ಪಾಲಕರು, ಶಿಕ್ಷಕರು ಶಿಕ್ಷಣ ನೀಡಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆಯ ಲಯನ್ಸ್ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಪಾಲಕರು ಮಕ್ಕಳಿಗೆ ಎಂಜಿನಿಯರ್‌ ಆಗಿ, ಡಾಕ್ಟರ್‌ ಆಗಿ ಎಂದು ಒತ್ತಡ ಹೇರದೇ ಅವರ ಮನದಾಳ ಅರಿಯಬೇಕು ಎಂದರು.

ಒತ್ತಡದಿಂದ ಗುರಿ ಮುಟ್ಟಲು ಅಸಾಧ್ಯ ಎಂದ ಅವರು, ಎಸ್‌ಎಸ್‌ಎಲ್‌ಸಿ ಆರಂಭಿಕ ಹಂತವಾಗಿದ್ದು ಪಿಯುಸಿ ಜೀವನದ ಮುಖ್ಯ ಘಟ್ಟವಾಗಿದೆ. ಅದನ್ನು ಶ್ರಮ ಪಟ್ಟು ಮುಗಿಸಿ ಜೀವನ ರೂಪಿಸಿಕೊಳ್ಳಬೇಕು. ಲಯನ್ಸ್‌ ಶಿಕ್ಷಣ ಸಂಸ್ಥೆ ನಾಲ್ಕು ದಶಕಗಳಿಂದ ಗುಣಾತ್ಮಕ ಶಿಕ್ಷಣ ನೀಡಿದೆ. ಅದಕ್ಕೆ ಸಾಕ್ಷಿಯಾಗಿ ವಿದ್ಯಾರ್ಥಿನಿ ಮೇಘಾ ಜೈನ ಐಎಎಸ್ ಪಾಸಾಗಿ ತ್ರಿಪುರಾ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಪಾಲಕರು, ಶಿಕ್ಷಕರು ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿಸಬೇಕೆಂದರು.

ಈ ವೇಳೆ ತಾಲೂಕಿಗೆ ಪ್ರಥಮ ಸ್ಥಾನ ಫಡೆದ ಲಿಖಿತಾ ಹಿರೇಮಠ, ದ್ವಿತೀಯ ಸ್ಥಾನ ಪಡೆದ ಕೇತನ ರಾಮಣ್ಣವರ, ಶಾಲೆಗೆ ತೃತೀಯ ಸ್ಥಾನ ಪಡೆದ ಮಣಿಕಂಠ ಆನೇಗುಂದಿ, ಶೇ.95ಕ್ಕೂ ಹೆಚ್ಚು ಅಂಕ ಪಡೆದ ರಿಜವಾನಾ ನದಾಫ್, ತನಿಷಾ ಪುರೋಹಿತ , ಚಂದನ ಕವಲೂರು , ಪ್ರೀತಂ ಪಟ್ಟಣಶೆಟ್ಟಿ , ಶಾರದಾ ಸವದಿ , ಶ್ರೇಯಾ ಬೇಲೇರಿ, ಶ್ರೇಯಾ ಕುರುಬಗಟ್ಟಿ, ಪಿಯುಸಿಯಲ್ಲಿ ರಾಜ್ಯಕ್ಕೆ 9ನೇ ರ್‍ಯಾಂಕ್‌ ಪಡೆದ ಹಳೆಯ ವಿದ್ಯಾರ್ಥಿ ಶ್ರೀನಿಕಾ ಗುಡಿಸಾಗರವರ ತಂದೆ ವೆಂಕಟೇಶ ಗುಡಿಸಾಗರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ಪ್ರಭು ನಂದಿ, ಉಪಾಧ್ಯಕ್ಷ ಉಮೇಶಗೌಡ ಪಾಟೀಲ, ಸಹಕಾರ್ಯದರ್ಶಿ ವಿಜಯಕುಮಾರ ಬೇಲೇರಿ, ನಿರ್ದೇಶಕರಾದ ಜಿ.ಟಿ. ಗುಡಿಸಾಗರ, ಜಿ.ಬಿ. ಕುಲಕರ್ಣಿ, ಡಾ. ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ಎಸ್.ಎಸ್. ಪಾಟೀಲ, ಜೆ.ವಿ. ಕಂಠಿ, ರಾಘವೇಂದ್ರ ಆನೇಗುಂದಿ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಇದ್ದರು.

ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ ಸ್ವಾಗತಿಸಿದರು. ಡಾ. ಬಸವರಾಜ ಹಲಕುರ್ಕಿ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ: ಕನಕ ಶ್ರೀ
ತೆಗ್ಗಿನಮಠದಿಂದ ಅನ್ನ, ಅಕ್ಷರ ಜತೆ ಧರ್ಮಕಾರ್ಯ: ಸಂಸದ ಇ.ತುಕಾರಾಂ