ಮಕ್ಕಳಲ್ಲಿನ ಮೊಬೈಲ್‌ ಗೀಳು ತಡೆಯಲು ಪಾಲಕರು ಗಮನ ಕೊಡಬೇಕು

KannadaprabhaNewsNetwork |  
Published : Apr 28, 2026, 02:00 AM IST
ಹಾನಗಲ್ಲ ತಾಲೂಕು ಶಿರಗೋಡ ಸರ್ಕಾರಿ ಹಿರಿಯ ಹಾಗೂ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಇದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪಾಲಕರು ಗಮನ ಕೊಡಬೇಕು ಎಂದು ಶಿಕ್ಷಕ ಸಿ.ಎಂ. ಪತ್ತಾರ ಹೇಳಿದರು.

ಹಾನಗಲ್ಲ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಇದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪಾಲಕರು ಗಮನ ಕೊಡಬೇಕು ಎಂದು ಶಿಕ್ಷಕ ಸಿ.ಎಂ. ಪತ್ತಾರ ಹೇಳಿದರು.

ತಾಲೂಕಿನ ಚಿಕ್ಕಾಂಶಿಹೊಸೂರು ಸಮೀಪದ ಶಿರಗೋಡ ಗ್ರಾಮದ ಸರ್ಕಾರಿ ಹಿರಿಯ ಹಾಗೂ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೊಬೈಲ್‌ ಮತ್ತು ಟವಿ ಹುಚ್ಚು ಮಕ್ಕಳಲ್ಲಿ ಹೆಚ್ಚುತ್ತಿದೆ. ಇದನ್ನು ತಪ್ಪಿಸಿ ಓದಿನತ್ತ ಗಮನ ಕೊಡುವಂತೆ ಮಾಡಬೇಕು ಎಂದು ಹೇಳಿದರು.

ಗುರುವಿನ ಮಹತ್ವ ಕುರಿತು ಉಪನ್ಯಾಸ ನೀಡಿದ ಶ್ರೀಕಾಂತ ಹುಲಮನಿ, ಪ್ರಸ್ತುತ ಸಮಾಜದಲ್ಲಿ ಯಾರಿಗೂ ಯಾರ ಭಯವಿಲ್ಲದಂತಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಜ್ಞಾನ, ವಿನಯ, ಸಹೋದರತೆ ಭಾವನೆ ತುಂಬಲು ಉತ್ತಮ ಗುರುವಿನ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಂಗಾಧರ ರೇವಣಕರ, ಇಂದಿನ ದಿನದಲ್ಲಿ ಮಕ್ಕಳು ತಂದೆತಾಯಿಯರನ್ನು ಅವರ ಸಂಧ್ಯಾಕಾಲದಲ್ಲಿ ಅತ್ಯಂತ ಗೌರವಯುತವಾಗಿ ನಡೆಸಿಕೊಂಡು ಪಾಲನೆ ಪೋಷಣೆ ಮಾಡಿದರೆ ಅದರ ಪುಣ್ಯ ನಿಮಗೆ ಸಲ್ಲುತ್ತದೆ ಎಂದು ಕಿವಿಮಾತು ಹೇಳಿದರು.

ನಿವೃತ್ತ ಗುರುಗಳಾದ ಎನ್‌.ಜಿ. ಪೂಜಾರ ಅಧ್ಯಕ್ಷತೆ ವಹಿಸಿದ್ದರು.

ಧಾರವಾಡ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯ ಆರ್.ಆರ್. ಬಾರಾಟ, ಸ್ವಂತ ನೆಲೆ ಇಲ್ಲದೆ ಸಂಚಾರಿಯಾಗಿದ್ದ ಪ್ರೌಢಶಾಲೆಗೆ ಎರಡು ಎಕರೆ ಜಾಗವನ್ನು ಗ್ರಾಮಸ್ಥರ ಮನವೊಲಿಸಿ ದಾನವಾಗಿ ಪಡೆದು ಸ್ವಂತ ಕಟ್ಟಡ ಮಾಡಿದ್ದೇವೆ. ದಯವಿಟ್ಟು ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಿ ಇದೇ ಊರಿನಲ್ಲಿ ಮುಂದೆ ಕಾಲೇಜು ಸ್ಥಾಪನೆಯಾಗುವವರೆಗೂ ತಾವು ವಿರಮಿಸಬೇಡಿ ಎಂದು ಸಲಹೆ ನೀಡಿದರು. ಸನ್ಮಾನ ಸ್ವೀಕರಿಸಿದ ಬಿ.ಎಲ್ ನಾಯ್ಕ, ಮಂಜುಳಾ ದೇವಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗುರುವಂದನ ಸವಿನೆನಪಿಗಾಗಿ ಹಳೆ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ನಡೆಸಲಾಯಿತು. ಮಾಲತೇಶ ಸಕನಳ್ಳಿ ನಿರೂಪಿಸಿದರು. ಅಶೋಕ ಕೆ. ಸ್ವಾಗತಿಸಿದರು. ಚನ್ನಬಸಪ್ಪ ಸಂಗಣ್ಣನವರ್ ಪ್ರಾಸ್ತಾವಿಕ ನುಡಿಯಾಡಿದರು. ಚೇತನ ಲಕ್ಕೊಳ್ಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಅಂಬೇಡ್ಕರ್‌ ಸಮಾನತೆ ನೀಡಿದ ಮಹಾ ನಾಯಕ: ರಾಘವೇಂದ್ರ ಹಿಟ್ನಾಳ
ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಶಿವರಾಜ ತಂಗಡಗಿ