ಪರಿಷತ್‌ಗೆ ವಿದ್ಯಾವಂತರು, ವಾಗ್ಮಿಗಳ ಅವಶ್ಯವಿದೆ: ಎಚ್.ಹಾಲಪ್ಪ

KannadaprabhaNewsNetwork |  
Published : May 29, 2024, 12:47 AM IST
ಮಾಜಿ ಸಚಿವ ಹೆಚ್.ಹಾಲಪ್ಪ ಮತಯಾಚಿಸಿದರು | Kannada Prabha

ಸಾರಾಂಶ

ಸಾಗರ ತಾಲೂಕಿನಲ್ಲಿ ಪದವೀಧರ ಕ್ಷೇತ್ರಕ್ಕೆ ೧೯೪೬ ಮತದಾರರು, ಶಿಕ್ಷಕ ಕ್ಷೇತ್ರಕ್ಕೆ ೪೬೬ ಮತದಾರರು ನೋಂದಣಿ ಮಾಡಿಸಿದ್ದು ಎಲ್ಲ ಮತದಾರರನ್ನು ಒಂದು ಬಾರಿ ಭೇಟಿಯಾಗಿ ಮತಯಾಚಿಸಲಾಗಿದೆ. ಮತದಾರರಿಗೆ ಕೆಲವು ಪ್ರಮುಖರಿಂದ ದೂರವಾಣಿ ಮೂಲಕ ಸಂಪರ್ಕಿಸಿ ಮತಯಾಚಿಸಲಾಗಿದೆ. ಬುಧವಾರ ಡಾ.ಧನಂಜಯ ಸರ್ಜಿ ಮತ್ತು ಭೋಜೇಗೌಡರು ಸಾಗರ, ಆನಂದಪುರ, ರಿಪ್ಪನ್‌ಪೇಟೆ, ನಗರ, ಹೊಸನಗರದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ

ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಹಾಗೂ ಭೋಜೇಗೌಡ ಸುಲಭವಾಗಿ ಜಯಗಳಿಸುತ್ತಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಕ್ಕೂ ಮಾರ್ಗದರ್ಶನ ನೀಡುವ ಮಹತ್ತರ ಹೊಣೆಗಾರಿಕೆ ವಿಧಾನ ಪರಿಷತ್‌ಗೆ ಇರುತ್ತದೆ. ಅಂತಹ ವಿಧಾನ ಪರಿಷತ್‌ಗೆ ವಿದ್ಯಾವಂತರು, ವಾಗ್ಮಿಗಳು ಆಯ್ಕೆಯಾಗಬೇಕು. ನಮ್ಮ ಇಬ್ಬರೂ ಅಭ್ಯರ್ಥಿಗಳು ಅರ್ಹರಾಗಿದ್ದು, ಶೇ.೬೦ರಷ್ಟು ಮತಗಳ ಪಡೆದು ಗೆಲ್ಲುತ್ತಾರೆ ಎಂದರು.

ಸಾಗರ ತಾಲೂಕಿನಲ್ಲಿ ಪದವೀಧರ ಕ್ಷೇತ್ರಕ್ಕೆ ೧೯೪೬ ಮತದಾರರು, ಶಿಕ್ಷಕ ಕ್ಷೇತ್ರಕ್ಕೆ ೪೬೬ ಮತದಾರರು ನೋಂದಣಿ ಮಾಡಿಸಿದ್ದು ಎಲ್ಲ ಮತದಾರರನ್ನು ಒಂದು ಬಾರಿ ಭೇಟಿಯಾಗಿ ಮತಯಾಚಿಸಲಾಗಿದೆ. ಮತದಾರರಿಗೆ ಕೆಲವು ಪ್ರಮುಖರಿಂದ ದೂರವಾಣಿ ಮೂಲಕ ಸಂಪರ್ಕಿಸಿ ಮತಯಾಚಿಸಲಾಗಿದೆ. ಬುಧವಾರ ಡಾ.ಧನಂಜಯ ಸರ್ಜಿ ಮತ್ತು ಭೋಜೇಗೌಡರು ಸಾಗರ, ಆನಂದಪುರ, ರಿಪ್ಪನ್‌ಪೇಟೆ, ನಗರ, ಹೊಸನಗರದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಹೊಸ ಪಿಂಚಣಿ ಪದ್ಧತಿ, ಪದವೀಧರರ ಸಮಸ್ಯೆ, ಶಿಕ್ಷಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಇಬ್ಬರೂ ಅಭ್ಯರ್ಥಿಗಳು ಅರಿವು ಹೊಂದಿದ್ದು ಸರ್ಕಾರದ ಹಂತದಲ್ಲಿ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಪಕ್ಷದ ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಸತೀಶ್ ಕೆ., ಹು.ಭಾ.ಅಶೋಕ್, ರಮೇಶ್ ಹಾರೆಗೊಪ್ಪ, ಚಂದ್ರಕಾಂತ್, ರಾಯಲ್ ಸಂತೋಷ್ ಹಾಜರಿದ್ದರು.ಇಂದು ಶಿಕಾರಿಪುರದಲ್ಲಿ ಅಭ್ಯರ್ಥಿಗಳ ಪ್ರಚಾರ

ಬಿಜೆಪಿ ನೈಋತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಗಳ ಕಣಕ್ಕೆ ಇಳಿಸಿದೆ. ಬುಧವಾರ ಬೆಳಿಗ್ಗೆ ೯ಗಂಟೆಗೆ ಶಿಕಾರಿಪುರದಿಂದ ಅಭ್ಯರ್ಥಿಗಳು ಪ್ರಚಾರ ಆರಂಭಿಸಲಿದ್ದಾರೆ. ಇಬ್ಬರೂ ಅಭ್ಯರ್ಥಿಗಳ ಬಗ್ಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿರುವ ೨೭ಸಾವಿರ ಮತದಾರರ ಪೈಕಿ ಈಗಾಗಲೆ ೧೬ ಸಾವಿರ ಮತದಾರರ ಸಂಪರ್ಕಿಸಲಾಗಿದೆ. ಇಬ್ಬರೂ ಅಭ್ಯರ್ಥಿಗಳಿಗೆ ಐತಿಹಾಸಿಕ ಗೆಲುವು ದೊರೆಯಲಿದೆ.

ಟಿ.ಡಿ.ಮೇಘರಾಜ್, ಬಿಜೆಪಿ ಜಿಲ್ಲಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''