ಉದ್ಯಾನವನ ಅಕ್ರಮ ಖಾತೆ ಮಾಡಿ ಮಾರಾಟ

KannadaprabhaNewsNetwork |  
Published : Mar 07, 2026, 12:15 AM IST
ಪೊಟೊ-6ಕೆ ಎನ್ ಎಲ್ ಎಮ್ 1- ನೆಲಮಂಗಲ ನಗರಸಭೆಯಲ್ಲಿ ಅಕ್ರಮವಾಗಿ ಸಾರ್ವಜನಿಕರ ಉದ್ಯಾನವನವನ್ನುಖಾತೆ ಮಾಡಿರುವುದನ್ನು ಈ ಕೂಡಲೇ ವಜಾ ಗೊಳಸಲು ನೆಲಮಂಗಲ  ಕೆ ಆರ್ ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹನುಮಂತರಾಜು ಮನವಿ ಪತ್ರ ನೀಡಿದರು. ಸಂದರ್ಭದಲ್ಲಿ ಉಪಾಧ್ಯಕ್ಷ ಯತೀಶ್ ಕಾರ್ಯದರ್ಶಿ ಕುಮಾರ್ ಪ್ರಧಾನ ಕಾರ್ಯದರ್ಶಿ ಶಿವರಾಜು ನಗರಾಧ್ಯಕ್ಷ ಕುಮಾರ್ ಇದ್ದರು. | Kannada Prabha

ಸಾರಾಂಶ

ನೆಲಮಂಗಲ: ನಗರದಲ್ಲಿ ಖಾಸಗಿ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟಿರುವ ಉದ್ಯಾನವನವನ್ನು ಅಕ್ರಮವಾಗಿ ಖಾತೆ ಮಾಡಿ ನಿವೇಶನಗಳ ವಿಂಗಡಿಸಿ ಮಾರಾಟ ಮಾಡಿರುವುದನ್ನು ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಹನುಮಂತರಾಜು ಖಂಡಿಸಿದ್ದಾರೆ

ನೆಲಮಂಗಲ: ನಗರದಲ್ಲಿ ಖಾಸಗಿ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟಿರುವ ಉದ್ಯಾನವನವನ್ನು ಅಕ್ರಮವಾಗಿ ಖಾತೆ ಮಾಡಿ ನಿವೇಶನಗಳ ವಿಂಗಡಿಸಿ ಮಾರಾಟ ಮಾಡಿರುವುದನ್ನು ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಹನುಮಂತರಾಜು ಖಂಡಿಸಿದ್ದಾರೆ. ನಗರಸಭಾ ವ್ಯಾಪ್ತಿಯ ಜಕ್ಕಸಂದ್ರ ಗ್ರಾಮದ ಸರ್ವೆ ನಂ. 8 ಮತ್ತು 9 ರಲ್ಲಿ ಖಾತಾ ನಂಬರ್ 966/ 54/1ರ ಖಾತೆಯನ್ನು ಅಕ್ರಮ ಇ ಖಾತೆ ಮಾಡಿ 2026 ಜ. 21ರಂದು ನೆಲಮಂಗಲ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಎನ್‌.ಕೆ.ರಂಗನಾಥ್ ಅವರಿಂದ ವೇದಾವತಿಗೆ ಅಕ್ರಮವಾಗಿ ಕ್ರಯಪತ್ರ ನೋಂದಣಿ ಮಾಡಿರುತ್ತಾರೆ. ಕೂಡಲೇ ಸದರಿ ಅಕ್ರಮ ನಿವೇಶನದ ಖಾತೆಯನ್ನು ವಜಾಗೊಳಿಸಿ ಸಾರ್ವಜನಿಕ ಉದ್ಯಾನವನವನ್ನು ರಕ್ಷಿಸಿ ತಂತಿಬೇಲಿ ಹಾಕಿ ಸಾರ್ವಜನಿಕರ ಉಪಯೋಗಕ್ಕೆ ಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಲಾರ ವೈದ್ಯಕೀಯ ಕಾಲೇಜು, ರೈತ ಮಾಲ್‌ ಸ್ಥಾಪನೆ
ಭದ್ರಾ ಮೇಲ್ದಂಡೆ ಯೋಜನೆಗೆ ಮತ್ತೆ ಮಹಾದ್ರೋಹ