ಪರ್ಕಳ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ನಾಗರಿಕರಿಂದ ಪ್ರತಿಭಟನೆ, ಆಕ್ರೋಶ

KannadaprabhaNewsNetwork |  
Published : Jul 07, 2025, 11:48 PM IST
06ಪರ್ಕಳ | Kannada Prabha

ಸಾರಾಂಶ

ಪರ್ಕಳ - ಮಣಿಪಾಲ ನಡುವೆ ನಾಲ್ಕೈದು ವರ್ಷ ಕಳೆದರೂ, ಜನಪ್ರತಿನಿಧಿಗಳ ನಿರಾಸಕ್ತಿ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ರಾಷ್ಟ್ರೀಯ ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳದೇ ಸ್ಥಗಿತಗೊಂಡಿದ್ದು, ಇದರಿಂದ ಈ ಭಾಗದಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ,

ಕನ್ನಡಪ್ರಭ ವಾರ್ತೆ ಉಡುಪಿ

ಖ್ಯಾತ ಮನೋವೈದ್ಯರಾದ ಡಾ. ಪಿ. ವಿ. ಭಂಡಾರಿ ನೇತೃತ್ವದಲ್ಲಿ ಇಲ್ಲಿನ ಪರ್ಕಳ ಹಾಗೂ ಹೆರ್ಗ ಗ್ರಾಮಸ್ಥರು ಭಾನುವಾರ ಪರ್ಕಳ ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.ಪರ್ಕಳ - ಮಣಿಪಾಲ ನಡುವೆ ನಾಲ್ಕೈದು ವರ್ಷ ಕಳೆದರೂ, ಜನಪ್ರತಿನಿಧಿಗಳ ನಿರಾಸಕ್ತಿ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ರಾಷ್ಟ್ರೀಯ ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳದೇ ಸ್ಥಗಿತಗೊಂಡಿದ್ದು, ಇದರಿಂದ ಈ ಭಾಗದಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ, ಇದರಿಂದ ಬೇಸತ್ತ ನಾಗರಿಕರು, ರಸ್ತೆಯ ಬಳಕೆದಾರರು ಭಾನುವಾರ ಬೆಳಿಗ್ಗೆ 8 ಗಂಟೆಯಿಂದ 9.30 ಗಂಟೆಯ ತನಕ ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ಮಂಜುನಾಥ್ ಉಪಾಧ್ಯಾಯ, ಪಾಂಡುರಂಗ ಲಾಗ್ವಂಕರ್, ಸತೀಶ್ ಮಲ್ಯ, ಜೈ ವಿಠ್ಠಲ್, ಡಾ.ಸುಲತಾ, ರವಿರಾಜ್ ಎಚ್.ಪಿ., ರಾಘವೇಂದ್ರ ಪ್ರಭು ಕರ್ವಾಲು, ರಮೇಶ್ ಕಾಂಚನ್, ಸುಕೇಶ್ ಕುಂದರ್, ಅಮೃತ್ ಶೆಣೈ, ಸುಧಾಕರ್ ಪೂಜಾರಿ, ಅನ್ಸರ್ ಅಹ್ಮದ್, ಗಣೇಶ್ ರಾಜ್ ಸರಳೇಬೆಟ್ಟು, ಶ್ರೀನಿವಾಸ ಆಚಾರ್ಯ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಸ್ಥಳೀಯ ನಗರಸಭಾ ಸದಸ್ಯರು ಪ್ರತಿಭಟನೆಗೆ ಬಾರದಿರುವ ಅಥವಾ ಸ್ಥಳಕ್ಕೆ ಬಾರದಿರುವ ಬಗ್ಗೆ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ಮುಂದೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಈ ರಸ್ತೆಯ ದುರವಸ್ಥೆಯ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''