ರಿಯಾಜಅಹ್ಮದ ಎಂ. ದೊಡ್ಡಮನಿ ಡಂಬಳ
ಚುನಾವಣಾ ಆಯೋಗವು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವುದಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಆ್ಯಪ್‌ಗಳನ್ನು ಸಿದ್ಧಪಡಿಸಲಾಗಿದೆ.ಈ ಆ್ಯಪ್‌ಗಳು ಮತದಾನ ಪ್ರಕ್ರಿಯೆ ಸುಗಮಗೊಳಿಸಲು ಹಾಗೂ ಅಕ್ರಮ ತಡೆಯಲು ನೆರವಾಗುತ್ತಿವೆ.
ಅಂಗವಿಕಲರು ಹಾಗೂ ಹಿರಿಯರಿಗೆ ಗಾಲಿಕುರ್ಚಿ ವ್ಯವಸ್ಥೆ, ಆಸ್ಪತ್ರೆ, ಪೊಲೀಸ್ ಠಾಣೆ ಈ ಎಲ್ಲ ಇಲಾಖೆಗಳ ಮಾಹಿತಿ ಈ ಆ್ಯಪ್‌ಗಳಲ್ಲಿ ದೊರೆಯುತ್ತವೆ. ಚುನಾವಣೆಯ ಬಳಿಕವು ಆಸ್ಪತ್ರೆ, ಪೊಲೀಸ್ ಠಾಣೆ ವಿವರ ಸೇರಿ ಎಲ್ಲ ಉಪಯುಕ್ತವಾದ ಮಾಹಿತಿಗಳು ಸುಲಭವಾಗಿ ದೊರೆಯುತ್ತವೆ.ಗೂಗಲ್ ಪ್ಲೇಸ್ಟೋರ್: ಗೂಗಲ್ ಪ್ಲೇಸ್ಟೋರ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಭ್ಯವಿರುವ ಆ್ಯಪ್‍ಗಳು- ಸಿವಿಜಿಲ್, ಸುವಿಧಾ ಕ್ಯಾಂಡಿಡೇಟ್, ಕೆವೈಸಿ, ವೋಟರ್ ಹೆಲ್ಪ್‌ಲೈನ್, ವೋಟರ್ ಟರ್ನ್‌ಔಟ್, ಸಕ್ಷಮ ಮತ್ತು ಇಸಿಐ, ವೋಟರ್ ಆ್ಯಪ್‌ಗಳು ಮತದಾರರು ತಮ್ಮ ಕ್ಷೇತ್ರ, ಮತದಾನದ ಬೂತ್, ತಲುಪುವ ಕುರಿತು ಮಾಹಿತಿ ಪಡೆದುಕೊಳ್ಳಲು ಎಲ್ಲ ರೀತಿಯಿಂದ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ಚುನಾವಣಾ ಅಧಿಕಾರಿಗಳು.
ಸುವಿಧಾ ಆ್ಯಪ್: ಚುನಾವಣಾ ಆಯೋಗ ಸುವಿಧಾ ಅಭ್ಯರ್ಥಿ ಆ್ಯಪ್ ಮೂಲಕ ಬಿಡುಗಡೆ ಮಾಡಿದೆ. ಈ ಆ್ಯಪ್‌ನಲ್ಲಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಸುವ ಅವಕಾಶ ನೀಡಲಾಗಿದೆ. ಅಲ್ಲದೆ ಅಪ್ಲಿಕೇಶನ ಲಾಗ್‍ಇನ್ ಆದ ಮೇಲೆ ಅಭ್ಯರ್ಥಿಗಳು ಅಫಿಡವಿಟ್, ನಾಮನಿರ್ದೇಶನ, ಪ್ರಪೋಸರ್ ಮಾಹಿತಿ, ಅಭ್ಯರ್ಥಿಗಳು ತಮ್ಮ ನಾಮ ನಿರ್ದೇಶನದ ಸ್ಥಿತಿ, ಚುನಾವಣಾ ಪ್ರಚಾರಕ್ಕಾಗಿ ಕೋರಿರುವ ಅನುಮತಿಗಳ ಕುರಿತು ಮಾಹಿತಿ ತಿಳಿಯಬಹುದು.
ವೋಟರ್ ಹೆಲ್ಪ್‌ಲೈನ್ : ಈ ಆ್ಯಪ್ ಪ್ಯೂಚರ್ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮತ್ತು ಆಧಾರ ನೋಂದಣಿಯ ಮೂಲಕ ಮತದಾರರ ಐಡಿ ಲಿಂಕ್ ಮಾಡಬಹುದು.
ಅಂಗವಿಕಲ ಮತದಾರರು ಈಗ ಸುಲಭವಾಗಿ ಮತ ಚಲಾಯಿಸಬಹುದು. ಈ ಅಪ್ಲಿಕೇಶನ್ ಅಂಗವಿಕಲರಿಗೆ ಸಹಾಯ ಮಾಡುತ್ತದೆ. ಈ ಮೂಲಕ ಅಂಗವಿಕಲರು ನೋಂದಾಯಿಸಿಕೊಳ್ಳಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಆ್ಯಪ್ ಮೂಲಕ ಅಂಗವಿಕಲರು ತಮ್ಮ ಮನೆಯಲ್ಲಿಯೇ ಕುಳಿತು ತಮ್ಮ ಹಕ್ಕಾದ ಮತದಾನ ಮಾಡುವ ಸೌಲಭ್ಯ ಪಡೆಯಬಹುದು.
ಮನುಷ್ಯನಿಗೆ ಗಿಡದಿಂದ ಹೊರಸೂಸುವ ಆಮ್ಲಜನಕ ಎಷ್ಟು ಮುಖ್ಯವೋ ಪ್ರಜಾಪ್ರಭುತ್ವದ ನೆಲೆಗಟ್ಟನ್ನು ಗಟ್ಟಿಗೊಳಿಸುವ ಚುನಾವಣೆ ಅಷ್ಟೇ ಮುಖ್ಯ. ಮತದಾನದ ಪವಿತ್ರ ಹಬ್ಬದಲ್ಲಿ ಯುವಕರು, ಕಾರ್ಮಿಕರು, ರೈತರು, ಉದ್ಯೋಗಿಗಳು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಆಫ್‌ಎಫ್‌ಒ ವೀರೇಂದ್ರ ಮರಿಬಸನ್ನವರ ಹೇಳಿದರು.