ತರೀಕೆರೆ: ಸೋಲು ಗೆಲುವು ಮುಖ್ಯ ಅಲ್ಲ, ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯವಾದುದು ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ್ ಟಿ. ಹೇಳಿದ್ದಾರೆ.
ಕುವೆಂಪು ವಿ.ವಿ.ಅಂತರ ಕಾಲೇಜು ಪುರುಷರ ಜುಡೋ ಸ್ಪರ್ಧೆ ಕಾರ್ಯಕ್ರಮ
ತರೀಕೆರೆ: ಸೋಲು ಗೆಲುವು ಮುಖ್ಯ ಅಲ್ಲ, ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯವಾದುದು ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ್ ಟಿ. ಹೇಳಿದ್ದಾರೆ.ಸೋಮವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕುವೆಂಪು ವಿವಿಯಿಂದ ಕಾಲೇಜು ಸಭಾಂಗಣದಲ್ಲಿ ಪುರುಷರ ಜುಡೋ ಸ್ಪರ್ಧೆ 2025-26 ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆ ಪರಸ್ಪರ ಪ್ರೀತಿ ಬೆಳೆಸುತ್ತದೆ. ಸಮಾಜದಲ್ಲಿ ಪ್ರೀತಿ ಹರಡುವ ಸಮರ್ಥ ವಲಯ ಎಂದರೆ ಕ್ರೀಡೆ, ಕ್ರೀಡೆಗಳಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಜುಡೋ ಕ್ರೀಡೆಗಳು ಜಗತ್ತಿನಲ್ಲಿ ಜನಪ್ರಿಯತೆ ಗಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಜುಡೋ ಗಮನಾರ್ಹ ಕ್ರೀಡೆಯಾಗಿದೆ ಎಂದ ಅವರು ವಿಶ್ವವಿದ್ಯಾನಿಲಯಕ್ಕೆ ಸೀಮಿತ ವಾಗದೆ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಪದಕ ಗಳಿಸಲು ಸ್ಪರ್ಧಾಳುಗಳಿಗೆ ಶುಭ ಕೋರಿದರು.ಜುಡೋ ತರಬೇತಿದಾದ ರವಿಕುಮಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಡಾ.ಲಾವಣ್ಯ, ಡಾ.ಕಿರಣ್ ಜೆ. ವಸಂತ ಕುಮಾರ್ , ದತ್ತಾತ್ರೇಯ, ವಿವಿಧ ಕಾಲೇಜುಗಳಿಂದ ಜುಡೋ ಕ್ರೀಡೆಯಲ್ಲಿ ಐವತ್ತು ಸ್ಪರ್ಧಾಳುಗಳು ಭಾಗವಹಿಸಿದ್ದರು.
-
23ಕೆಟಿಆರ್.ಕೆ.5ಃ
ತರೀಕೆರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪು ವಿಶ್ವವಿದ್ಯಾನಿಲಯದಿಂದ ನಡೆದ ಕುವೆಂಪು ವಿವಿ ಅಂತರ ಕಾಲೇಜು ಪುರುಷರ ಜುಡೋ ಸ್ಪರ್ಧೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ್ ಟಿ. ಮತ್ತಿತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.