- ಹರಿಹರ ತಾಲೂಕು ಆಡಳಿತ ನೇತೃತ್ವದ ವಾಲ್ಮೀಕಿ ಜಯಂತಿಯಲ್ಲಿ ಬಿ.ಪಿ.ಹರೀಶ್
ಕನ್ನಡಪ್ರಭ ವಾರ್ತೆ ಹರಿಹರ
ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣ ಸೇರಿದಂತೆ ಹಲವಾರು ಅಮೂಲ್ಯ ಗ್ರಂಥಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ನಗರದ ಗುರುಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನುಕುಲಕ್ಕೆ ದಾರಿದೀಪವಾಗಿರುವ ರಾಮಾಯಣ ಮತ್ತು ಮಹಾಭಾರತದಂತಹ ಕೃತಿಗಳು ಇಂದಿಗೂ ಜನರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದರು.
ವಿದ್ಯೆಯೇ ಶಕ್ತಿಯ ಅಸ್ತ್ರ:
ಕ್ಷೇತ್ರ ಸಮನ್ವಯ ಅಧಿಕಾರಿ ಎಚ್.ಕೃಷ್ಣಪ್ಪ ಉಪನ್ಯಾಸ ನೀಡಿ, ವಾಲ್ಮೀಕಿ ಮಹರ್ಷಿ ಆರಂಭಿಕ ಹೆಸರು ರತ್ನಾಕರ. ದರೋಡೆಕೋರರಾಗಿದ್ದರೂ ನಾರದ ಮಹರ್ಷಿ ಮಾರ್ಗದರ್ಶನದಿಂದ ತಪಸ್ಸು ಮಾಡಿ, ಆಧ್ಯಾತ್ಮಿಕ ಜ್ಞಾನೋದಯ ಹೊಂದಿದರು. ಅವರ ಜೀವನ ಪಶ್ಚಾತ್ತಾಪ, ಭಕ್ತಿ ಮತ್ತು ರೂಪಾಂತರದ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ವಿವರಿಸಿದರು.
ಇದೇ ವೇಳೆ ವಾಲ್ಮೀಕಿ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ೧೨ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಪಂ ಇಒ ಸುಮಲತಾ ಎಸ್.ಪಿ. ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಡಿ., ನಗರ ವೃತ್ತ ನಿರೀಕ್ಷಕ ಆರ್.ಎಫ್. ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತಪ್ಪ ಲಮಾಣಿ, ಆರೋಗ್ಯ ಅಧಿಕಾರಿ ಡಾ. ಅಬ್ದುಲ್ ಖಾದರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನರ‍್ದೇಶಕಿ ಪ್ರಿಯದರ್ಶಿನಿ, ಪರಿಶಿಷ್ಟ ಪಂಗಡ ಮಹಿಳಾ ಘಟಕ ಅಧ್ಯಕ್ಷೆ ಪಾರ್ವತಿ ಬೋರಯ್ಯ, ಕೆ.ವಿ. ಮಂಜುನಾಥ್ ಇತರರು ಭಾಗವಹಿಸಿದ್ದರು.
(ಕೋಟ್) ರಾಮಾಯಣದ ಓದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೇ ಪ್ರತಿಯೊಬ್ಬರೂ ರೂಢಿಗತವಾಗಿ ಅಳವಡಿಸಿಕೊಳ್ಳಬೇಕು. ಇಂತಹ ಜಯಂತಿಗಳನ್ನು ಎಲ್ಲ ಸಮಾಜದವರು ಸೇರಿ ಆಚರಿಸಿದಾಗ ಅರ್ಥಪೂರ್ಣ ಆಗಿರುತ್ತದೆ.
- - -
ಹರಿಹರದ ಗುರುಭವನದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಶಾಸಕ ಬಿ.ಪಿ.ಹರೀಶ ಮಾತನಾಡಿದರು.