ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಭರತನಾಟ್ಯ ಪರೀಕ್ಷೆ ಯಶಸ್ವಿ

KannadaprabhaNewsNetwork |  
Published : Nov 17, 2026, 02:00 AM IST
15ಕೆಎಂಎನ್‌ಡಿ-4ಮಂಡ್ಯದ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಭರತನಾಟ್ಯ ಪರೀಕ್ಷೆಗಳನ್ನು ಗುರುದೇವ ಕುಟೀರದಲ್ಲಿ ನಡೆಸಿತು. | Kannada Prabha

ಸಾರಾಂಶ

ಭರತನಾಟ್ಯ ಪರೀಕ್ಷೆಯಲ್ಲಿ ಉತ್ತಮ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಲಿಖಿತ ಪರೀಕ್ಷೆಗೆ ಸುಮಾರು 137 ಅಭ್ಯರ್ಥಿಗಳು ಹಾಗೂ ಪ್ರಾರಂಭಿಕ ಹಂತದ ಪ್ರಾಯೋಗಿಕ ಪರೀಕ್ಷೆಗೆ 120 ಅಭ್ಯರ್ಥಿಗಳು ಹಾಜರಾಗಿ ತಮ್ಮ ಪ್ರತಿಭೆ ಮತ್ತು ಕಲಿಕೆಯ ಮಟ್ಟವನ್ನು ಪರೀಕ್ಷೆಗೆ ಒಳಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಯಿಂದ ಪುಣೆಯ ಗಂಧರ್ವ ಮಹಾ ವಿದ್ಯಾಲಯ ಮಾನ್ಯತೆಯೊಂದಿಗೆ ಭರತನಾಟ್ಯ ಪರೀಕ್ಷೆಗಳನ್ನು ಭಾನುವಾರ ಯಶಸ್ವಿಯಾಗಿ ನಡೆಸಲಾಯಿತು.

ಪರೀಕ್ಷೆಯ ಅಂಗವಾಗಿ ಪ್ರಾರಂಭಿಕ ಹಂತದ ಪ್ರಾಯೋಗಿಕ ಪರೀಕ್ಷೆಗಳನ್ನು ಗುರುದೇವ ಕುಟೀರದಲ್ಲಿ ಆಯೋಜಿಸಲಾಗಿತ್ತು. ಅದೇ ರೀತಿ ಲಿಖಿತ ಪರೀಕ್ಷೆಗಳನ್ನು ಗುರುದೇವ ಕುಟೀರದ ಜೊತೆಗೆ ನಗರದ ಡ್ಯಾಫೋಡಿಲ್ಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಸಹಕಾರದೊಂದಿಗೆ ಶಾಲಾ ಆವರಣದಲ್ಲಿಯೂ ನಡೆಸಲಾಯಿತು.

ಈ ಪರೀಕ್ಷೆಯಲ್ಲಿ ಉತ್ತಮ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಲಿಖಿತ ಪರೀಕ್ಷೆಗೆ ಸುಮಾರು 137 ಅಭ್ಯರ್ಥಿಗಳು ಹಾಗೂ ಪ್ರಾರಂಭಿಕ ಹಂತದ ಪ್ರಾಯೋಗಿಕ ಪರೀಕ್ಷೆಗೆ 120 ಅಭ್ಯರ್ಥಿಗಳು ಹಾಜರಾಗಿ ತಮ್ಮ ಪ್ರತಿಭೆ ಮತ್ತು ಕಲಿಕೆಯ ಮಟ್ಟವನ್ನು ಪರೀಕ್ಷೆಗೆ ಒಳಪಡಿಸಿದರು.

ಭರತನಾಟ್ಯದಂತಹ ಶಾಸ್ತ್ರೀಯ ಕಲೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದರ ಜೊತೆಗೆ, ಕಲಿಕೆಯ ಹಂತಗಳಿಗೆ ಅನುಗುಣವಾಗಿ ಶಿಸ್ತುಬದ್ಧ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಿ ಕಲಾವಿದರ ಮುಂದಿನ ಬೆಳವಣಿಗೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಯ ಈ ಪ್ರಯತ್ನ ಮಹತ್ವದ್ದಾಗಿದೆ.

ಮಿಮ್ಸ್‌ನಲ್ಲಿ ೪ ಲಕ್ಷ ರು. ವೆಚ್ಚದ ನವೀಕೃತ ಐಸಿಸಿಯು ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಡ್ಯಮಿಮ್ಸ್‌ನಲ್ಲಿ ಸುಮಾರು ೪ ಲಕ್ಷ ರು. ವೆಚ್ಚದಲ್ಲಿ ನವೀಕರಿಸಲಾಗಿರುವ ೯ ಹಾಸಿಗೆ ಸಾಮರ್ಥ್ಯದ ಹೃದ್ರೋಗಿಗಳ ತುರ್ತು ನಿಗಾ ಘಟಕ (ಐಸಿಸಿಯು)ಕ್ಕೆ ಚಾಲನೆ ನೀಡಲಾಯಿತು. ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಂ.ಸಿ.ರೇಖಾ ಅವರು ಘಟಕದ ಉದ್ಘಾಟನೆ ನೆರವೇರಿಸಿದರು. ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಎಂ.ಶಿವಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ವೀರಭದ್ರಪ್ಪ, ನರ್ಸಿಂಗ್ ಅಧಿಕಾರಿಗಳು, ಶುಶ್ರೂಷಕ ಅಧಿಕಾರಿಗಳು ಹಾಜರಿದ್ದರು. ಹೃದ್ರೋಗ ಸಂಬಂಧಿ ಸಮಸ್ಯೆಗೊಳಗಾಗುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಈ ಘಟಕವನ್ನು ತೆರೆಯಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.ನಾಳೆ ಪ್ರಕೃತಿ ಚಿಕಿತ್ಸಾ ದಿನಾಚರಣೆ

ಮಂಡ್ಯ:ಕೇಂದ್ರ ಆಯುಷ್ ಸಚಿವಾಲಯ, ಭಾರತ ಸರ್ಕಾರದ ವತಿಯಿಂದ ೯ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ-೨೦೨೬ರ ಕಾರ್ಯಕ್ರಮವನ್ನು ನ.೧೮ ರಂದು ಬೆಳಗ್ಗೆ ೧೦ ಗಂಟೆಗೆ ನಾಗಮಂಗಲದ ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ (ಸಿಆರ್‌ಐವೈಎನ್) ಆವರಣದಲ್ಲಿ ಆಯೋಜಿಸಲಾಗಿದೆ. ಈ ವರ್ಷದ ಪ್ರಕೃತಿ ಚಿಕಿತ್ಸಾ ದಿನಾಚರಣೆಯು ‘ಪ್ರಕೃತಿಕ ಚಿಕಿತ್ಸಾ, ಸ್ವಸ್ಥ ಭಾರತ್’ ಎಂಬ ಆಶಯದೊಂದಿಗೆ ನಡೆಯಲಿದ್ದು, ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನ.18 ರಂದು ಪೂರ್ವಭಾವಿ ಸಭೆಮಳವಳ್ಳಿ: ಕನಕ ಜಯಂತಿ ಆಚರಣೆ ಸಂಬಂಧ ನ.18ರಂದು ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ನ.27ರಂದು ನಡೆಸಲು ಉದ್ದೇಶಿಸಿರುವ ಕನಕ ಜಯಂತಿ ಅಂಗವಾಗಿ ಬುಧವಾರ ಬೆಳಗ್ಗೆ 11ಗಂಟೆಗೆ ನಡೆಯುವ ಪೂರ್ವಭಾವಿ ಸಭೆಗೆ ವಿವಿಧ ಸಂಘ-ಸಂಸ್ಥೆಗಳು ಪದಾಧಿಕಾರಿಗಳು ಭಾಗಿಯಾಗುವ ಮೂಲಕ ಸಲಹೆ ಸೂಚನೆಗಳನ್ನು ನೀಡಬೇಕು. ಅಲ್ಲದೇ, ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ