ಮಂಡ್ಯ:
ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯ ಪತ್ನಿಯಾಗಿದ್ದರೂ ಸರಳತೆ ಸಾಕಾರ ಮೂರ್ತಿಯಂತಿದ್ದ ಅವರು ದೇವೇಗೌಡರಂತೆಯೇ ದೈವಭಕ್ತರಾಗಿದ್ದರು. ತಮ್ಮ ಪತಿಯ ಪ್ರತಿಕ್ಷಣದ ಆಗು ಹೋಗು, ಒಳಿತು ಕೆಡಕು ಎಲ್ಲವೂ ಭಗವಂತನ ಇಚ್ಛೆ ಎಂದು ನಂಬಿದ್ದರು.
ಭಗವಂತನು ಚನ್ನಮ್ಮನವರ ಅಗಲಿಕೆಯಿಂದ ದುಃಖತಪ್ತರಾಗಿರುವ ಎಚ್.ಡಿ.ದೇವೇಗೌಡರು ಮತ್ತು ಅವರ ಇಡೀ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು, ಇಳೆಯ ಮೇಲಿನ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಂಡಿರುವ ಚನ್ನಮ್ಮರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಆಶಿಸುತ್ತೇನೆ.- ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು. ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠ.
ಕೆ.ಆರ್.ಪೇಟೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮರ ನಿಧನಕ್ಕೆ ಮಾಜಿ ಶಾಸಕ ಬಿ.ಪ್ರಕಾಶ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿತುಂಬು ಕುಟುಂಬಗಳಿಗೆ ಒಂದು ಆದರ್ಶ ಮಹಿಳೆಯಾಗಿದ್ದಾರೆ. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ಎಚ್.ಡಿ.ದೇವೇಗೌಡರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಬಿ.ಪ್ರಕಾಶ್ ಸಂತಾಪ ಸೂಚಿಸಿದ್ದಾರೆ. ಚನ್ನಮ್ಮ ನಿಧನಕ್ಕೆ ಕೆಟಿಎಸ್ ಭಾವುಕ
ನಮ್ಮೆಲ್ಲರ ಮೇಲೆ ತಾಯಿ ಪ್ರೀತಿ ತೋರುತ್ತಿದ್ದ ಚನ್ನಮ್ಮ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಮಾಜಿ ಶಾಸಕ ಕೆ.ಟಿ ಶ್ರೀಕಂಠೇಗೌಡ ಕಂಬನಿ ಮಿಡಿದಿದ್ದಾರೆ.
ದೇವೇಗೌಡರು ತಾಪಂನಿಂದ ವಿಧಾನಸಭೆಗೆ, ವಿಧಾನಸಭೆಯಲ್ಲಿ ಸಚಿವರಾಗಿ ಆನಂತರ ಮುಖ್ಯಮಂತ್ರಿಯಾಗಿ, ಆ ನಂತರ ಸಂಸದರಾಗಿ, ಪ್ರಧಾನ ಮಂತ್ರಿಯಾಗುವುದರಲ್ಲಿ ಇವರ ಅಪಾರ ಶ್ರಮ ಮತ್ತು ಕೊಡುಗೆ ಇದೆ ಎಂದು ನುಡಿದಿದ್ದಾರೆ.
ಶ್ರೀರಂಗಪಟ್ಟಣ:
ಕಳೆದ 38 ವರ್ಷಗಳಿಂದಲೂ ಮಾಜಿ ಪ್ರಧಾನಿ ದೇವೇಗೌಡರ ಆದರ್ಶದಲ್ಲಿ ನಾನು ಬೆಳೆದು ನನಗೆ ರಾಜಕೀಯದ ಗುರುವಾಗಿದ್ದರು. ಅವರ ಮನೆಗೆ ಹೋದ ವೇಳೆ ದೇವೇಗೌಡರು ಇಲ್ಲದ ಸಮಯದಲ್ಲೂ ಅವರ ಪತ್ನಿ ಚನ್ನಮ್ಮ ಅವರು ಚೆನ್ನಾಗಿ ಮಾತನಾಡಿಸಿ ತಿಂಡಿ, ಊಟ ನೀಡಿ ಕಳುಹಿಸಿ ಕೊಡುತ್ತಿದ್ದರು. ಇಂದು ನಮ್ಮನ್ನು ಅಗಲಿದ ಚನ್ನಮ್ಮರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಅವರ ಕುಟುಂಬದ ಸದಸ್ಯರಿಗೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.