ಚನ್ನಮ್ಮ ನಿಧನ: ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನಾಚರಣೆ

KannadaprabhaNewsNetwork |  
Published : Jul 20, 2026, 12:30 AM IST
19ಕೆಎಂಎನ್ ಡಿ28 | Kannada Prabha

ಸಾರಾಂಶ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ನಿಧನದಿಂದ ಮನಸ್ಸಿಗೆ ಆಘಾತ ಉಂಟು ಮಾಡಿದೆ. ಅವರು ದೇವೇಗೌಡರಿಗೆ ಬೆಂಬಲವಾಗಿ ನಿಂತು ಅವರು ಪ್ರಧಾನ ಮಂತ್ರಿಯಾಗುವುದಕ್ಕೂ ಕಾರಣರಾಗಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮರ ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಐದು ದೀಪದ ವೃತ್ತದಲ್ಲಿ ಜೆಡಿಎಸ್ ಪಕ್ಷ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಚನ್ನಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು.

ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ನಿಧನದಿಂದ ಮನಸ್ಸಿಗೆ ಆಘಾತ ಉಂಟು ಮಾಡಿದೆ. ಅವರು ದೇವೇಗೌಡರಿಗೆ ಬೆಂಬಲವಾಗಿ ನಿಂತು ಅವರು ಪ್ರಧಾನ ಮಂತ್ರಿಯಾಗುವುದಕ್ಕೂ ಕಾರಣರಾಗಿದ್ದರು. ದೇವೇಗೌಡರ ಹೇಳ್ಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೆ ಅಲ್ಲದೇ, ದೇವೇಗೌಡರ ಮನೆಗೆ ಯಾರೇ ಹೋದರು ಪ್ರೀತಿಯಿಂದ ಕಾಣುತ್ತಿದ್ದರು ಅಂತಹ ತಾಯಿಕಳೆದುಕೊಂಡು ಎಲ್ಲರಿಗೂ ದುಃಖ ಉಂಟಾಗಿದೆ ಎಂದು ವಿಷಾಧಿಸಿದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ವಯೋಸಹ ನಿಧನದಿಂದ ಪಕ್ಷದ ಮುಖಂಡರು, ನಾಯಕರು, ಕಾರ್ಯಕರ್ತರು ಸೇರಿದಂತೆ ನಾಡಿನ ಜನತೆಗೆ ನೋವುಂಟಾಗಿದೆ. ತಾಯಿಯನ್ನೇ ಕಳೆದುಕೊಂಡು ಭಾವನೆ ಮೂಡಿದೆ ಎಂದರು.

ಚನ್ನಮ್ಮ ಅವರು ಅತ್ಯಂತ ದೈವಭಕ್ತೆಯಾಗಿದ್ದರು. ಮನೆಯಲ್ಲಿ ಅನ್ನಪೂರ್ಣೇಶ್ವರಿಯಂತಿದ್ದರು. ಎಲ್ಲಾ ಅವರ ಬಗ್ಗೆ ಒಳ್ಳೆಯ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದರು. ಅವರ ಕುಟುಂಬಕ್ಕೆ ಚನ್ನಮ್ಮ ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲೆಂದು ಎಲ್ಲಾ ಜನತೆಯ ಪರವಾಗಿ ಪ್ರಾರ್ಥಿಸುತ್ತೇನೆ ಎಂದರು.

ಆರ್.ಸೋಮಶೇಖರ್ ಮಾತನಾಡಿ, ದೇವೇಗೌಡರು ಪಕ್ಷಾತೀತವಾದ ನಾಯಕರಾಗಿದ್ದರು, ಅವರು ಅಧಿಕಾರದಲ್ಲಿ ಇದ್ದಾಗ ಮಾಡಿದ ಎಲ್ಲಾ ಕೆಲಸ ಕಾರ್ಯಗಳ ಹಿಂದೆ ಅವರ ಪತ್ನಿ ಚನ್ನಮ್ಮ ಅವರ ಸಹಕಾರ, ಬೆಂಬಲ ಎಲ್ಲರು ಇತ್ತು. ಇಂದು ಅವರನ್ನು ಕಳೆದುಕೊಂಡು ದೇವೇಗೌಡರ ಕುಟುಂಬ ದುಃಖದಲ್ಲಿ ಇದೆ. ಭಗವಂತ ಚೆನ್ನಮ್ಮ ಅವರ ಅಗಲಿಕೆಯ ನೋವನ್ನು ಮೆರೆಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿದರು.

ಈ ವೇಳೆ ಪುರಸಭೆ ಮಾಜಿ ಸದಸ್ಯರಾದ ಆರ್.ಸೋಮಶೇಖರ್, ಎಂ.ಗಿರೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ಬಲರಾಮು, ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ವಿ.ಎಸ್.ನಿಂಗೇಗೌಡ, ಚಿಕ್ಕಾಡೆ ಪ್ರಸನ್ನಕುಮಾರ್, ಆದರ್ಶ, ಅಶ್ವಥ್‌ಕುಮಾರೇಗೌಡ, ಸಗಾಯಂ, ಬೊಮ್ಮರಾಜು, ವಾಸುದೇವ್, ಮಂಚೇಗೌಡ, ಚಂದ್ರಶೇಖರ್, ನವೀನ್, ಜಯರಾಮು, ಉಮೇಶ್, ಬಿ.ಎಸ್.ಜಯರಾಮು, ಚೇತನ್, ಶಶಿ, ಪ್ರಶಾಂತ್, ರಾಚಯ್ಯ, ಗುರು ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಷರ ದಾಸೋಹ ಸಿಬ್ಬಂದಿಯ ಆರೋಗ್ಯಕ್ಕೂ ಆದ್ಯತೆ
ನರರೋಗ ಸಮಸ್ಯೆ ಪರಿಹಾರಕ್ಕೆ ಸಲಕರಣೆಗಳ ನೆರವು: ಡಾ.ರಾಜೇಶ್