ಹಾನಗಲ್ಲ: ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಮೂಲಕ ಯುವಕರಲ್ಲಿ ಬಲವಾದ ದೇಶಪ್ರೇಮ ಬೆಳೆಸಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.
ಸ್ಕೌಟ್-ಗೈಡ್ಸ್ ತಾಲೂಕು ಆಯುಕ್ತೆ ನಂದಿನಿ ವಿರೂಪಣ್ಣನವರ ಮಾತನಾಡಿ, ಮಕ್ಕಳನ್ನು ಕ್ರಿಯಾಶೀಲರಾಗಿ ಬೆಳೆಸುವ ಅತ್ಯುತ್ತಮ ಯೋಜನೆ ಇದಾಗಿದೆ. ಕೇವಲ ಪಾಠಕ್ಕೆ ಮಕ್ಕಳನ್ನು ಸೀಮಿತಗೊಳಿಸದೆ ಆಟ-ಪಾಠಗಳೆರಡರಲ್ಲೂ ಸಮ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹಿಸಿ. ಸಾಂಸ್ಕೃತಿಕ ಮನಸ್ಸು ಮಕ್ಕಳಲ್ಲಿ ಜಾಗ್ರತವಾದರೆ ನೀತಿವಂತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಈ ಮೂಲಕ ಒಳ್ಳೆಯ ತರಬೇತಿ ನೀಡಿ ದೇಶ ಭಕ್ತಿಯನ್ನು ಜಾಗ್ರತಗೊಳಿಸಿ ಎಂದು ಕರೆ ನೀಡಿದರು.
ಸ್ಕೌಟ್-ಗೈಡ್ಸ್ ಕಾರ್ಯದರ್ಶಿ ಪಿ.ಆರ್. ಚಿಕ್ಕಳ್ಳಿ ವಾರ್ಷಿಕ ಯೋಜನೆ ಹಾಗೂ ವಾರ್ಷಿಕ ಲೆಕ್ಕಪತ್ರಗಳ ಕುರಿತು ಮಾಹಿತಿ ನೀಡಿದರು. ಸ್ಕೌಟ್ ಮತ್ತು ಗೈಡ್ಸ್ ಮಾರ್ಗದರ್ಶಿ ಶಿಕ್ಷಕರಾದ ಶೋಭಾ ಪಾಟೀಲ, ಸಂತೋಷ ದೊಡ್ಡಮನಿ, ಎನ್.ಆರ್. ಗಾಳಿ, ರೇಖಾ ಕಲಾಲ, ರತ್ನ ತಳವಾರ, ರಮೇಶ ಹರಬಾಳ, ಕೆ.ಟಿ. ಮಲ್ಲೇಶಪ್ಪ, ಬಿ.ಎಂ. ದಿಡಗೂರ, ಆರ್.ಬಿ. ರೆಡ್ಡಿ, ಕೆ.ಟಿ. ಪಾಟೀಲ ಇದ್ದರು.