ಕನ್ನಡಪ್ರಭ ವಾರ್ತೆ ಮಡಿಕೇರಿ
ಪಟ್ಟಡ ಮತ್ತು ಮುಕ್ಕಾಟಿರ (ಕುಂಬಳದಾಳು) ನಡುವಿನ ಪಂದ್ಯದಲ್ಲಿ ಪಟ್ಟಡ ತಂಡ 5-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಮಂಗೇರಿರ ಮತ್ತು ಅಕ್ಕಪಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಕ್ಕಪಂಡ ತಂಡ ಗೆಲುವು ದಾಖಲಿಸಿತು.ಮರುವಂಡ ಮತ್ತು ಮಾಣಿಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಣಿಪಂಡ ತಂಡ 4-3 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಬೊಜ್ಜಂಗಡ ಮತ್ತು ಪಟ್ರಪಂಡ ನಡುವಿನ ಪಂದ್ಯ ಯಾವುದೇ ಗೋಲು ಇಲ್ಲದೆ ಡ್ರಾ ಆಯಿತು. ನಂತರ ನಡೆದ ಟೈ ಬ್ರೇಕರ್‌ನಲ್ಲಿ ಬೊಜ್ಜಂಗಡ ತಂಡ 4 ಮತ್ತು ಪಟ್ರಪಂಡ ತಂಡ 2 ಗೋಲು ದಾಖಲಿಸಿದವು.
ಮೋಟನಾಳಿರ ಮತ್ತು ಬೊಳ್ತಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ತಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಚೆರಿಯಂಡ ಮತ್ತು ಪೂಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರಿಯಂಡ ತಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಕೋಡಿರ ಮತ್ತು ಕೊಡಂದೇರ ತಂಡಗಳ ನಡುವಿನ ವಾಕ್ ಓವರ್‌ನಲ್ಲಿ ಕೊಡಂದೇರ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಬಡುವಮಂಡ ಮತ್ತು ಮೇದುರ ತಂಡಗಳ ನಡುವಿನ ಪಂದ್ಯದಲ್ಲಿ ಬಡುವಮಂಡ 5-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಪಳಂಗೇಟಿರ ಮತ್ತು ಪೋತಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗೇಟಿರ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಚೊಟ್ಟೆರ ಮತ್ತು ಪಳಂಗಿಯಂಡ ನಡುವೆ ನಡೆದ ಪಂದ್ಯದಲ್ಲಿ ಚೊಟ್ಟೆರ ತಂಡ 5-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಉಳಿದಂತೆ ಅಲ್ಲಾಂಡ, ಕಂಬೇಯಂಡ, ಪಳೆಯಂಡ, ಮೂಕಳೇರ, ಕಲ್ಲೇಂಗಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿತು.