ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಾದಾಪುರ ಗ್ರಾಪಂನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಕನಿಷ್ಠ ವರ್ಷಕ್ಕೆ 3 ಬಾರಿಯಾದರೂ ನಡೆದರೆ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿದೆ. ಕಾಟಾಚಾರಕ್ಕೆ ಸಭೆ ನಡೆಸಬಾರದು ಎಂದರು.
ಜನರ ಸುರಕ್ಷತೆಗಾಗಿ ಗ್ರಾಮಗಳಲ್ಲಿ ಪೊಲೀಸರು ಬೀಟ್ ಹೆಚ್ಚಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಲು ಜಾಗ ಗುರ್ತಿಸಿ ಇ-ಸ್ವತ್ತಿಗೆ ಸತಾಯಿಸದಂತೆ ಗಮನ ಹರಿಸಬೇಕು. ಪ್ರಧಾನ ಮಂತ್ರಿಯವರ ಆಶಯದ ರೈತರಿಗೆ ವಿದ್ಯುತ್ ಸೌಲಭ್ಯಕ್ಕೆ ಸೌರವಿದ್ಯುತ್ ಘಟಕ ಸ್ಥಾಪನೆಗೆ 5 ಎಕರೆ ಸರ್ಕಾರಿ ಜಾಗವನ್ನು ಗುರ್ತಿಸಲು ಮುಂದಾಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಮಾದಾಪುರಕೊಪ್ಪಲು ಗ್ರಾಮದಲ್ಲಿನ ಗುರುಭವನ ಪಾಳು ಬಿದ್ದಿದೆ. ಅನೈತಿಕ ಚಟುವಟಿಕೆ ತಾಣವಾಗಿದೆ. ಲಕ್ಷಾಂತರ ರು ಗಳಿಂದ ನಿರ್ಮಿತವಾಗಿರುವ ಭವನದಲ್ಲಿ ಶಿಕ್ಷಕರು ವಾಸವಾಗಿಲ್ಲ. ಬಿಸಿಎಂ ಹಾಸ್ಟೆಲ್ ಕೊಠಡಿ ಬಾಡಿಗೆಯಲ್ಲಿ ನಡೆಯುತ್ತಿದೆ. ಈ ಸ್ಥಳಕ್ಕೆ ಸ್ಥಳಾಂತರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.