ಗದಗ: ರಾಜ್ಯದ ಹಾಗೂ ಜಿಲ್ಲೆಯ ರೈತರಿಗೆ ಬರುವ ಹಾಲಿನ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರಡಗಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಬರುವ ಹಾಲಿನ ಪ್ರೋತ್ಸಾಹಧನ ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಒಟ್ಟು ೮೦ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಇದರಿಂದ ೨೫ ಲಕ್ಷ ರೈತರಿಗೆ ₹೭೧೮ ಕೋಟಿಗಳಷ್ಟು ಪ್ರೋತ್ಸಾಹಧನ ದೊರಕಬೇಕಿತ್ತು. ಆದರೆ ಸರ್ಕಾರ ಕೊಡುತ್ತಿಲ್ಲ. ರೈತರಿಗೆ ಬರುವ ಗೌರವಧನ ನಿಲ್ಲಿಸಿದ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ. ರೈತರಿಗೆ ಬರುವ ಪ್ರೋತ್ಸಾಹಧನವನ್ನು ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.ಆನಂತರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಜಣ್ಣ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಮುಖಂಡರಾದ ಎಂ.ಎಸ್. ಕರೀಗೌಡ್ರ, ರವಿ ದಂಡಿನ, ಜಗನ್ನಾಥಸಾ ಭಾಂಡಗೆ, ಪ್ರೇಮನಾಥ ಬಣ್ಣದ, ಅಶೋಕ ಸಂಕಣ್ಣವರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ನಾಗರಾಜ ತಳವಾರ, ಶಂಕರ ಕಾಕಿ, ರಮೇಶ ಸಜ್ಜಗಾರ, ಶಂಕರ ಕರಿಬಿಷ್ಠಿ, ಕೆ.ಪಿ. ಕೋಟಿಗೌಡ್ರ, ಶಾರದಾ ಸಜ್ಜನರ, ಕಮಲಾಕ್ಷೀ ಗೊಂದಿ, ಸ್ವಾತಿ ಅಕ್ಕಿ, ಅಪ್ಪಣ್ಣ ಟೆಂಗಿನಕಾಯಿ, ಅಮರನಾಥ ಬೆಟಗೇರಿ, ಅಮರನಾಥ ಗಡಗಿ, ನಿರ್ಮಲಾ ಕೊಳ್ಳಿ, ಸಿದ್ದಪ್ಪ ಜೊಂಡಿ, ಸಿದ್ದಪ್ಪ ಬಾಗಾಪುರ, ಶಶಿಧರ ದಿಂಡೂರ, ಬೂದಪ್ಪ ಹಳ್ಳಿ, ಬಸವರಾಜ ಪೂಜಾರ, ವೆಂಕಟೇಶ ಹಬೀಬ, ಮಲ್ಲಪ್ಪ ಕರಿಬಿಷ್ಠಿ, ಮಂಜುನಾಥ ಶಾಂತಗೇರಿ, ಅಶೋಕ ಕರೂರ, ಸುಜೇಂದ್ರ ಗಲಗಲಿ, ವೈ.ಪಿ. ಅಡ್ನೂರ, ಮಂಜುನಾಥ ಸ್ವಾಮಿ, ಸಿದ್ದಪ್ಪ ಈರಗಾರ, ಮಂಜು ಲಕ್ಕುಂಡಿ, ನಾಗರಾಜ ಮುರುಡಗಿ, ದೇವಪ್ಪ ಇಟಗಿ, ಅಕ್ಕಮ್ಮ ವಸ್ತ್ರದ, ಪಾರ್ವತಿ ಪಟ್ಟಣಶೆಟ್ಟಿ, ಯೋಗೇಶ್ವರಿ, ವೆಂಕಟೇಶ ಕೋಣಿ ಇದ್ದರು.