ತಂದೆ, ತಾಯಿ, ಗುರುಗಳ ಋಣ ತೀರಿಸಿ: ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ

KannadaprabhaNewsNetwork |  
Published : Feb 28, 2024, 02:35 AM IST
ಸೂಲಿಬೆಲೆ ಸರ್ಕಾರಿ ಪದವಿಫೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿಎನ್.ಗೋಪಾಲಗೌಡ ಉದ್ಘಾಟಿಸಿದರು, ಪ್ರಾಚಾರ್ಯ ಸುಬ್ರಮಣಿ, ಗ್ರಾ.ಪಂ.ಅಧ್ಯಕ್ಷ ಜನಾರ್ಧನರೆಡ್ಡಿ ಇತರರು ಇದ್ದರು | Kannada Prabha

ಸಾರಾಂಶ

ತಂದೆ ತಾಯಿ ಹಾಗೂ ಗುರುಗಳಿಗೆ ಗೌರವ ಸಮರ್ಪಣೆ ಮಾಡಿ ಋಣ ತೀರಿಸಬೇಕು ಎಂದು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು. ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸೂಲಿಬೆಲೆ: ಜಗತ್ತಿನಲ್ಲಿ ಎಲ್ಲಾ ಋಣಗಳನ್ನು ತೀರಿಸಬಹುದು. ಆದರೆ ತಂದೆ, ತಾಯಿ ಹಾಗೂ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ಇಂತಹ ತಂದೆ ತಾಯಿ ಹಾಗೂ ಗುರುಗಳಿಗೆ ಗೌರವ ಸಮರ್ಪಣೆ ಮಾಡಿ ಋಣ ತೀರಿಸಬೇಕು ಎಂದು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು.

ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಜೀವನ ಹಸನಾಗಲು ತಮ್ಮ ಜೀವನವನ್ನೇ ಮುಡುಪಾಗಿಡುವ ತಂದೆ, ತಾಯಿಗೆ ಮಕ್ಕಳು ಉತ್ತಮ ಫಲಿತಾಂಶ ನೀಡಿ ಪೋಷಕರಿಗೆ ಹಾಗೂ ಉಪನ್ಯಾಸಕರಿಗೆ ಗೌರವ ಸಲ್ಲಿಸಬೇಕು ಎಂದರು.

ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಯುವ ಮುಖಂಡರಾದ ಜಿ.ನಾರಾಯಣಗೌಡ ಮತ್ತು ಬಿ.ಎನ್.ಗೋಪಾಲಗೌಡರು ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದ್ದರು.

ಪ್ರಾಚಾರ್ಯರಾದ ತ್ರಿವೇಣಿ, ಸುಬ್ರಹ್ಮಣಿ, ನಿವೃತ್ತ ಪ್ರಾಚಾರ್ಯ ಚನ್ನಪ್ಪ, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಉಪಾಧ್ಯಕ್ಷೆ ಷಾಜಿಯಾ ಖಾನಂಜಿಯಾವುಲ್ಲಾ, ಗ್ರಾಪಂ ಸದಸ್ಯರಾದ ಕೃಷ್ಣಪ್ಪ, ಸಬೀರ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಪ್ರಶಾಂತ್, ಉಪನ್ಯಾಸಕರಾದ ಮೃತ್ಯುಂಜಯ್‌, ಕುಮಾರ್, ವಿಜಯಗಂಗಾಧರ್, ನಾಗರಾಜ್, ಶ್ರೀಕೃಪಾ, ರೇಷ್ಮಾನಾಯಕ್, ಸರಸ್ವತಿ, ಅಶ್ವಿನಿ, ಸುಷ್ಮಾ, ರಮ್ಯಾ, ಬೆಟ್ಟಹಳ್ಳಿಗೋಪಿನಾಥ್, ಸಮಾಜ ಸೇವಕ ಎಂ.ಆರ್.ಉಮೇಶ್ ಇತರರಿದ್ದರು.

ಸೂಲಿಬೆಲೆ ಸರ್ಕಾರಿ ಪದವಿ ಫೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿಎನ್.ಗೋಪಾಲಗೌಡ ಉದ್ಘಾಟಿಸಿದರು. ಪ್ರಾಚಾರ್ಯ ಸುಬ್ರಹ್ಮಣಿ, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!
ಹೊಸ ವರ್ಷ: ದೇವಾಲಯಗಳಿಗೆ ಭಕ್ತರ ದಾಂಗುಡಿ