ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಮತ್ತು ವೀರನಾರಿಯರ ಸಂಘಗಳ ಜಂಟಿ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಯೋಜಿಸಲಾಗಿತ್ತು.
ಗದಗ: ಮಳೆ, ಗಾಳಿ, ಚಳಿ ಎನ್ನದೆ ದೇಶ ಕಾಯುವ ಭಾರತೀಯ ಯೋಧರ ಸೇವೆ ಅತ್ಯಂತ ಸ್ಮರಣೀಯ ಎಂದು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಮತ್ತು ವೀರನಾರಿಯರ ಸಂಘಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದರು.
ಪ್ಯಾರಾಮಿಲಿಟರಿ ಯೋಧರ ಸಂಘದ ಅಧ್ಯಕ್ಷ ನಾಗರಾಜ ಕುಂದರಗಿ ಹಾಗೂ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಗೂಳಯ್ಯ ಮಾಲಗಿತ್ತಿಮಠ, ಎಸ್.ಆರ್. ಪಾಟೀಲ, ಎಸ್.ಎಸ್. ಪೆಂಟಾ ಅವರು ಕಾರ್ಗಿಲ್ ಯುದ್ಧದ ಘಟನಾವಳಿಗಳನ್ನು ಸ್ಮರಿಸಿ, ಹುತಾತ್ಮರಿಗೆ ಸರ್ಕಾರಿ ಮಟ್ಟದಲ್ಲಿ ಗೌರವ ನಮನ ಸಲ್ಲಿಬೇಕೆಂದರು.
ಆರಂಭದಲ್ಲಿ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಹುತಾತ್ಮ ಯೋಧರ ಗೌರವಾರ್ಥ ಮೌನಾಚರಣೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಬಿ.ವಿ. ಅಬ್ಬಿಗೇರಿ, ಎ.ಎಂ. ತಹಶೀಲ್ದಾರ, ವಿ.ಬಿ. ಬಿಂಗಿ, ವಿಜಯ ಬಡಿಗೇರ, ಜಿ.ಬಿ. ಅರವಟಗಿಮಠ, ಮಹ್ಮದ್‌ಹನೀಫ್, ಎಸ್.ಎಫ್. ಹೊನ್ನಪ್ಪನವರ, ಮಲ್ಲಿಕಾರ್ಜುನ, ಮಹೇಶ ಆಶಿ, ಕೆ.ಎಸ್. ಹಿರೇಮಠ, ಎಸ್.ಬಿ. ಸರ್ವಿ, ಎಸ್.ಎಸ್. ವಡ್ಡಿನ, ಮಂಗಲೇಶ ವಸ್ತ್ರದ, ಎಫ್.ಎನ್. ಪಾಟೀಲ; ಪ್ಯಾರಾಮಿಲಿಟರಿ ಸಂಘದ ಬಸಯ್ಯ ಹಿರೇಮಠ, ಈಶ್ವರಪ್ಪ ಕರ್ಕಿಕಟ್ಟಿ, ಪ್ರಭಣ್ಣ ಮಾಕಾಪೂರ, ಮುತ್ತಣ್ಣ, ಬಸಪ್ಪ ಸಂದಿಮನಿ, ಮಲ್ಲಯ್ಯ ಕರವೀರಮಠ, ಶಂಭುಲಿಂಗಯ್ಯ ಹಾದಿಮನಿ, ಅಶೋಕ ಷಡಕ್ಷರಿ, ಅಂದಪ್ಪ ಅಬ್ಬಿಗೇರಿ, ಮಲ್ಲಿಕಾರ್ಜುನ ಮೇವುಂಡಿ, ವೀರನಾರಿಯರಾದ ಶಿವಲೀಲಾ ಬಾವಿಕಟ್ಟಿ, ಮೀನಾಕ್ಷಿ ಬದಿ, ರೇಣುಕಾ ಮರಡಿ, ಗೀತಾ ಪೂಜಾರ, ಶಿವಲೀಲಾ ಚಿಗರಿ, ಇಂದಿರಾ ಹೆಬಸೂರ ಹಾಗೂ ಪೋಲಿಸರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.ಇಂದು ಶರಣ ಸಾಹಿತ್ಯ ಪರಿಷತ್ತಿನಿಂದ ದತ್ತಿ ಉಪನ್ಯಾಸ
ಗದಗ: ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಜು. 28ರಂದು ಮಧ್ಯಾಹ್ನ 2ಕ್ಕೆ ಸಿದ್ಧಲಿಂಗ ನಗರದ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಲಿಂ. ಶರಣ ಬಸವರಾಜ ಅಯ್ಯಪ್ಪ ಅಂಗಡಿ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.ಕಾಲೇಜಿನ ಪ್ರಾಚಾರ್ಯ ಎಸ್.ಪಿ. ಗೌಳಿ ಅಧ್ಯಕ್ಷತೆ ವಹಿಸಲಿದ್ದಾರೆ. ವಚನ ಸಂಶೋಧನೆ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ 146ನೇ ಜಯಂತಿ ಅಂಗವಾಗಿ ನಿವೃತ್ತ ಪ್ರಾಚಾರ್ಯ ಹಾಗೂ ಶರಣತತ್ವ ಚಿಂತಕ ಶರಣ ಎನ್.ಎಂ. ಪವಾಡಿಗೌಡ್ರ ಅವರು ವಚನ ಸಾಹಿತ್ಯ ಸಂರಕ್ಷಣೆ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.ಅತಿಥಿಗಳಾಗಿ ಗದಗ ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬೂದಪ್ಪ ಅಂಗಡಿ ಹಾಗೂ ದತ್ತಿ ದಾನಿ ಸುರೇಶ ಅಂಗಡಿ ಭಾಗವಹಿಸಲಿದ್ದಾರೆ ಎಂದು ಪ್ರಕಾಶ ಅಸುಂಡಿ ಮತ್ತು ಸುಲೋಚನಾ ಐಹೊಳೆ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.