ಕನ್ನಡಪ್ರಭ ವಾರ್ತೆ ಕುಣಿಗಲ್ ಬರಗಾಲ ಆರಂಭವಾಗುವ ಮುನ್ನ ನನ್ನ ಜವಾಬ್ದಾರಿಯನ್ನು ಅರಿತು ರೈತರ ಸಮಸ್ಯೆ ಬಗ್ಗೆ ಹರಿಸುವ ಹಾಗೂ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಡಿಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರ ನೀಡುವ ವಿಮಾ ಕಂತಿನ ಪಾಲಿನ ಅರ್ಧದಷ್ಟು ನಾನು ಕಟ್ಟಲು ತಯಾರಿದ್ದೇನೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ.ಪಟ್ಟಣದ ತಾಲೂಕು ಪಂಚಾಯಿತಿ ಶಾಸಕರ ಕಚೇರಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು . ತಾಲೂಕಿನಲ್ಲಿ ಕೇವಲ 10% ರೈತರು ಮಾತ್ರ ರಾಗಿ ಬಿತ್ತನೆಗೆ ಮುಂದಾಗಿದ್ದಾರೆ. ಬಿತ್ತನೆ ಬೀಜ ಹಲವಾರು ರೈತ ಸೇವಾಕೇಂದ್ರಗಳಲ್ಲಿ ಖರೀದಿಗೆ ಹಾಗೂ ಉಚಿತ ವಿತರಣೆಗೆ ಸಿದ್ಧವಾಗಿದೆ. ರೈತರು ರಾಗಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬರವನ್ನು ಎದುರಿಸುವ ಉದ್ದೇಶದಿಂದ ಪ್ರತಿ ಎಕರೆಗೆ ವಿಮೆ ಮಾಡುವ ಅನಿವಾರ್ಯತೆ ಇದೆ. ರೈತರವಂತಿಕೆ 400 ಕಟ್ಟುವ ಬಾಬ್ತು ನನ್ನ ಸ್ವಂತ ಹಣದಿಂದ ಡಿಕೆ ಚಾರಿಟಬಲ್ ಟ್ರಸ್ಟ್ ಮುಖಾಂತರ 200 ರುಪಾಯಿಗಳನ್ನು ಪ್ರತಿ ರೈತರಿಗೆ ಸಹಾಯಧನವನ್ನಾಗಿ ನೀಡಲು 20 ಲಕ್ಷ ರು. ಕಾಯ್ದಿರಿಸಲಾಗಿದೆ ಎಂದರು.ವಿಮೆ ಮಾಡಲು ಆಗಸ್ಟ್ 14 ಕೊನೆಯ ದಿನಾಂಕವಾಗಿದೆ. ಆ ದಿನಾಂಕದ ಒಳಗಾಗಿ ನೀವು ವಿಮಾ ಪಾಲಿಸಿಯನ್ನು ಪಾವತಿಸಬೇಕಾಗುತ್ತದೆ. ರೈತರ ವಂತಿಕೆಯಲ್ಲಿ ಅರ್ಧದಷ್ಟು ಹಣವನ್ನು ನಾನು ನೀಡಲು ಸಿದ್ಧನಿದ್ದೇನೆ ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಮುಂದಿನ ದಿನಗಳಲ್ಲಿ ಬರುತ್ತಿರುವ ತೀವ್ರ ಬರಗಾಲವನ್ನು ಎದುರಿಸಲು ಎಲ್ಲಾ ಹಂತದಲ್ಲೂ ನಾವು ತಯಾರಿ ಮಾಡಿಕೊಳ್ಳಬೇಕಾಗಿದೆ. ರಾಗಿ ಬೆಳೆ ನಷ್ಟವಾದಾಗ 12 ರಿಂದ 15 ಸಾವಿರ ಸಂಪೂರ್ಣ ನಷ್ಟಕ್ಕೆ 20000 ಸರ್ಕಾರ ಪರಿಹಾರ ನೀಡುತ್ತದೆ. ರಾಗಿ ಬಿತ್ತನೆಗೂ ಮುನ್ನ ವಿಮೆ ಮಾಡಿಸಲು ಅವಕಾಶ ಇದೆ ರೈತರು ಉದಾಸಿನತೆ ಮಾಡಬಾರದೆಂದರು.ಸದ್ಯದಲ್ಲೇ ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವ ಸಾಧ್ಯತೆ ಇದೆ ಅಂತಹ ಸಂದರ್ಭದಲ್ಲಿ ಸರ್ಕಾರ ಪರಿಹಾರ ನೀಡಲಿದೆ ಎಂದರು. ಈ ಸಂದರ್ಭದಲ್ಲಿ ತಹಸಿಲ್ದಾರ್ ಕರಿಯ ನಾಯಕ್, ಕೃಷಿ ಸಹಾಯಕ ಅಧಿಕಾರಿ ನೂರ್ ಜುಮ್ ಜುಮ್, ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು,