- ಬಸವ ಪ್ರಭಾತ್ ಪೇರಿ ಜನಜಾಗೃತಿ ಪಾದಯಾತ್ರೆಯಲ್ಲಿ ದೂಡಾ ಅಧ್ಯಕ್ಷ ದಿನೇಶ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಬಸವಣ್ಣನವರ ವಚನ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕು. ಇದರಿಂದ ನಮ್ಮ ನಮ್ಮಲ್ಲಿ ಜಗಳಗಳು ಬರುವುದಿಲ್ಲ. ಯುದ್ಧಗಳು ಸೇರಿದಂತೆ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗುವುದಿಲ್ಲ. ಆಗ ಸಮಾಜದಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಭಿಪ್ರಾಯಪಟ್ಟರು.ಮಂಗಳವಾರ ನಗರದ ಪಿ.ಜೆ. ಬಡಾವಣೆಯ ವನಿತಾ ಸಮಾಜ ಬಳಿ ಬಸವ ಜಯಂತಿ ಅಂಗವಾಗಿ ವಿರಕ್ತ ಮಠ ಬಸವ ಕೇಂದ್ರದಿಂದ ಆಯೋಜಿಸಿದ ಬಸವ ಪ್ರಭಾತ್ ಪೇರಿ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಬಸವ ತತ್ವಗಳ ಬಗ್ಗೆ ಮಕ್ಕಳಿಗೆ, ಯುವಜನತೆಗೆ ತಿಳಿ ಹೇಳುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ವಿರಕ್ತಮಠದಿಂದ ಬಸವ ಜಯಂತಿ ಅಂಗವಾಗಿ ಪ್ರತಿ ವರ್ಷ ಜನಜಾಗೃತಿ ಬಸವ ಪ್ರಭಾತ್ ಪೇರಿ ಮೂಲಕ ಬಸವಣ್ಣನವರ ತತ್ವ- ಆದರ್ಶಗಳನ್ನು ಮನೆ ಮನಗಳಿಗೆ ತಲುಪಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ದೂಡಾ ಸದಸ್ಯೆ ವಾಣಿ ಬಕ್ಕೇಶ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ.ಉಳುವಯ್ಯ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ಸಂಕಲ್ಪ ಫೌಂಡೇಷನ್ ನ ಜಿ.ಮಹಾಂತೇಶ, ವೀರಶೈವ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಎನ್.ಬಕ್ಕೇಶ್, ವನಿತಾ ಯೋಗ ಕೇಂದ್ರದ ಕೊಟ್ರೇಶ ಉತ್ತಂಗಿ, ಕೆ.ಕರಿಬಸಪ್ಪ, ಬಾದಾಮಿ ಜಯಣ್ಣ, ಉಮೇಶ, ಪುಟಾಣ್‌ಕರ್, ಕುಮಾರ ಸ್ವಾಮಿ, ರಾಜು ಬದ್ದಿ, ಸುಬ್ಬಣ್ಣ, ವೀರಣ್ಣ, ಮುರುಗೇಶ, ನಾರಾಯಣ, ನಾಗರಾಜ, ಸತೀಶ, ವೀರನಗೌಡ್ರು, ಚನ್ನಬಸವ ಶೀಲವಂತ್, ಕುದರಿ ಉಮೇಶ, ಶ್ರೀಮಠದ ಸದ್ಭಕ್ತರು, ಇತರರು ಇದ್ದರು.
ಪ್ರಭಾತ್ ಪೇರಿಯು ಎವಿಕೆ ರಸ್ತೆ, ರಾಂ ಅಂಡ್ ಕೋ ಸರ್ಕಲ್, ಚರ್ಚ್ ರಸ್ತೆ ಮುಖಾಂತರ ಎಸ್.ನಿಜಲಿಂಗಪ್ಪ ಬಡಾವಣೆಯ ಅಮೃತಾನಂದಮಯಿ ಶಾಲೆ ಆವರಣದಲ್ಲಿ ಮುಕ್ತಾಯವಾಯಿತು.- - -
(ಬಾಕ್ಸ್) * ಬಸವ ತತ್ವದಲ್ಲಿ ಮನಸ್ಸು ಅರಳಿಸುವ ಶಕ್ತಿ: ಶ್ರೀಗಳುವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನಸ್ಸನ್ನು ಅರಳಿಸುವ ಶಕ್ತಿ ಬಸವ ತತ್ವದಲ್ಲಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿರುವಂತಹ ಕೆಲಸಗಳು ಸೂರ್ಯ-ಚಂದ್ರ ಇರುವವರೆಗೂ ಅಚ್ಚಳಿಯದೇ ಉಳಿಯುತ್ತವೆ. ಬರೀ ಕರ್ನಾಟಕ, ಭಾರತವಷ್ಟೇ ಅಲ್ಲದೇ ಆಸ್ಟ್ರೇಲಿಯಾ, ಅಮೇರಿಕಾ ಸೇರಿದಂತೆ ಅನೇಕ ದೇಶಗಳಲ್ಲಿಯೂ ಕೂಡಾ ಬಸವ ಜಯಂತಿಯನ್ನು ಆಚರಿಸುತ್ತಿದ್ದಾರೆ. ನಮ್ಮ ಬದುಕು ಉದ್ಧಾರವಾಗಬೇಕಾದರೆ ನಾವು ಬಸವಣ್ಣ ಹೇಳಿದಂತೆ ಕಾಯಕವನ್ನು ಮಾಡಬೇಕು. ಕಾಯಕದಿಂದ ಬಂದಂತಹ ಹಣದಲ್ಲಿ ಅಲ್ಪವನ್ನಾದರೂ ಬಡವರು, ನಿರ್ಗತಿಕರು, ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ನುಡಿದರು.
- - - -29ಕೆಡಿವಿಜಿ32, 33:
ದಾವಣಗೆರೆಯಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಬಸವ ಪ್ರಭಾತ್ ಪೇರಿಯನ್ನು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು.