ದೇವಾಲಯಗಳಿಂದ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ: ಕೆ.ಎಂ.ಉದಯ್

KannadaprabhaNewsNetwork | Published : Jan 3, 2025 12:31 AM

ಸಾರಾಂಶ

ಪ್ರತಿ ಗ್ರಾಮಗಳಲ್ಲಿ ದೇವಾಲಯ ಇವೆ. ದೇವರ ಉತ್ಸವಕ್ಕೆ ಎಲ್ಲರು ಒಟ್ಟಾಗಿ ಸೇರಿ ಆಚರಿಸುತ್ತಾರೆ. ಗ್ರಾಮಸ್ಥರು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳಿಂದ ದೂರ ಉಳಿದು ದೇವರನ್ನು ಪ್ರಾರ್ಥಸಿದರೆ ಗ್ರಾಮಕ್ಕೆ ಒಳಿತಾಗಲಿದೆ. ದೇವಾಲಯಗಳಿಂದ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಮತ್ತು ಸಮೃದ್ಧಿ ಲಭಸಲಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ದೇವಾಲಯಗಳಿಂದ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಮತ್ತು ಸಮೃದ್ಧಿ ಲಭಸಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ಶ್ರೀಮಾರಮ್ಮ ಶ್ರೀಪಟ್ಟಲದಮ್ಮ ಮತ್ತು ಶ್ರೀಮದ್ದೆನಟ್ಟಿಯಮ್ಮನವರ ಅಭಿವೃದ್ಧಿ ಸೇವಾ ಟ್ರಸ್ಟ್‌ನಿಂದ ನಿರ್ಮಾಣವಾಗಿರುವ ಶ್ರೀಮದನಟ್ಟಿ ದೇವಾಲಯದ ಪ್ರತಿಷ್ಠಾನದ ಮಹೋತ್ಸವದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಅಭಿನಂಧನೆ ಸ್ವೀಕರಿಸಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ದೇವಾಲಯ ಇವೆ. ದೇವರ ಉತ್ಸವಕ್ಕೆ ಎಲ್ಲರು ಒಟ್ಟಾಗಿ ಸೇರಿ ಆಚರಿಸುತ್ತಾರೆ. ಗ್ರಾಮಸ್ಥರು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳಿಂದ ದೂರ ಉಳಿದು ದೇವರನ್ನು ಪ್ರಾರ್ಥಸಿದರೆ ಗ್ರಾಮಕ್ಕೆ ಒಳಿತಾಗಲಿದೆ ಎಂದರು.

ಗ್ರಾಮದ ದೇವಾಲಯ ಕಳೆದ ಎರಡು ತಿಂಗಳ ಹಿಂದೆ ಲೋಕಾರ್ಪಣೆಗೊಂಡಿದೆ. ದೇವತೆಗೆ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕ್ಷೇತ್ರದ ಜನತೆಗೆ ಮದನಟ್ಟಿಯಮ್ಮ ಒಳಿತು ಮಾಡಲಿ ಎಂದು ಕೋರಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಅರ್ಚಕರಾದ ಪೂಜಾರಿ ಶಿವನಂಜೇಗೌಡ, ಸಮಿತಿ ಅಧ್ಯಕ್ಷ ಎಲ್.ಎನ್. ನಂಜೇಗೌಡ, ಕಾರ್ಯದರ್ಶಿ ಎಲ್.ಕೆ.ಚಿಕ್ಕಮಂಚೇಗೌಡ, ಖಜಾಂಚಿ ಕೃಷ್ಣೇಗೌಡ, ಮುಖಮಡರಾದ ಎಂ. ಮಂಚೇಗೌಡ, ಚಿಕ್ಕೇಗೌಡ ಸೇರಿದಂತೆ ಮತ್ತಿತರಿದ್ದರು.

ನಾಳೆ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ: ಕೆ.ರಾಜೇಂದ್ರ ಪ್ರಸಾದ್

ಮಂಡ್ಯ:

ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದಿಂದ ನಗರದಲ್ಲಿ ಜ.4 ರಂದು 7ನೇ ವರ್ಷದ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕೆ.ರಾಜೇಂದ್ರ ಪ್ರಸಾದ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸುವರು. ಗಾಂಧಿ ಸ್ಮಾರಕ ನಿಧಿಯ ಕಾರ್ಯಾಧ್ಯಕ್ಷ ಎನ್.ವಿಶುಕುಮಾರ್ ಅವರು ಲೇಖಕ ಸಿದ್ದನಗೌಡ ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತರ ಕುರಿತು ಕನ್ನಡ ಪ್ರಾಧ್ಯಾಪಕಿ ಹಾಗೂ ವಿಮರ್ಶಕಿ ಎಂ.ಎಸ್.ಆಶಾದೇವಿ ಮಾತನಾಡಲಿದ್ದಾರೆ ಎಂದರು.

ಪ್ರತಿಷ್ಠಾನದ ಟ್ರಸ್ಟಿ ಕೆ.ಬೋರಯ್ಯ ಮಾತನಾಡಿ, ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರ ಕೊನೆಯ ಪುಸ್ತಕ ‘ಎಲ್ಲಾ ಶ್ರೀಮಾನ್‌ಗಳು 420 ಗಳೇ’ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಮುದ್ದೇಗೌಡ, ದಲಿತ ಮುಖಂಡ ಎಂ.ವಿ.ಕೃಷ್ಣ ಇದ್ದರು.

Share this article