ಶಾಂತಿ ಸೌಹಾರ್ದತೆ ಸಮಾಜ ನಿರ್ಮಾಣ: ಶಾಸಕ ಪೊನ್ನಣ್ಣ ಕರೆ

KannadaprabhaNewsNetwork |  
Published : Apr 21, 2026, 02:45 AM IST
20-ಎನ್ಪಿ ಕೆ-2.ಎಮ್ಮೆಮಾಡು  ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಮಖಾಂ ಉರೂಸ್ ಅಂಗವಾಗಿ ಆಯೋಜಿಸಲಾಗಿದ್ದಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿದರು. 20-ಎನ್ಪಿ ಕೆ-3.ಎಮ್ಮೆಮಾಡು  ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಮಖಾಂ ಉರೂಸ್ ಅಂಗವಾಗಿ ಆಯೋಜಿಸಲಾಗಿದ್ದಸರ್ವಧರ್ಮ ಸಮ್ಮೇಳನದ ಸಭೆ. | Kannada Prabha

ಸಾರಾಂಶ

ಎಲ್ಲಾ ಧರ್ಮಗಳು ಶಾಂತಿ ಪ್ರೀತಿ ಸೌಹಾರ್ದತೆ ಪ್ರತಿಪಾದಿಸುತ್ತವೆ. ಶಾಂತಿ ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ನಾಪೋಕ್ಲು: ಎಲ್ಲಾ ಧರ್ಮಗಳು ಶಾಂತಿ ಪ್ರೀತಿ ಸೌಹಾರ್ದತೆ ಪ್ರತಿಪಾದಿಸುತ್ತವೆ. ಶಾಂತಿ ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ಎಮ್ಮೆಮಾಡು ಹಝ್ರತ್ ಸೂಫಿ ಶಹೀದ್ ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಮಖಾಂ ಉರೂಸ್ ಅಂಗವಾಗಿ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಶಾಂತಿ ಪ್ರತಿಪಾದಿಸಿದ ಸೂಫಿ ಸಂತರ ನಾಡಿನಲ್ಲಿ ಉರುಸ್ ಸಮಾರಂಭ ಆಯೋಜಿಸಲಾಗುತ್ತಿದೆ. ಯಾವ ಧರ್ಮವು ದ್ವೇಷ ಪ್ರತಿಪಾದಿಸಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಾಗದು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಮಾನತೆ ತರುವ ಕೆಲಸ ಆಗಬೇಕಿದೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಎಲ್ಲರೂ ಬಾಳಬೇಕು ಎಂದರು.

ಸಂವಿಧಾನದ ಆಶಯಗಳನ್ನು ಮನಃಪೂರ್ವಕವಾಗಿ ಒಪ್ಪಿ ಸ್ವೀಕಾರ ಮಾಡಬೇಕು ಸಮಾಜದಲ್ಲಿ ಅಭಿವೃದ್ಧಿಯು ಆಗಬೇಕಿದೆ ಎಂದರು.

ಕೇವಲ ಮಾತುಗಳಿಗೆ, ಗೋಷ್ಠಿಗೆ, ಕಾರ್ಯಕ್ರಮಗಳಿಗೆ ಸಂವಿಧಾನದ ತತ್ವಗಳು ಸೀಮಿತ ಆಗಬಾರದು. ಸಂವಿಧಾನದ ಆಶಯಗಳನ್ನು ಬದಲಾಗಿರಬೇಕು ಎಂದರು. ರಾಜ್ಯದೆಲ್ಲೆಡೆ ಅಭಿವೃದ್ಧಿ ಕೆಲಸಗಳಾಗುತ್ತಿವೆ ರಾಜ್ಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಮಾಡಿಕೊಟ್ಟಿದ್ದಾರೆ. ಯಾವುದೇ ರೀತಿಯ ತಾರತಮ್ಯವನ್ನು ಮಾಡದೆ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಸಯ್ಯಿದ್ ಅಶ್ರಫ್ ತಂಗಳ್ ಆದೂರು ಅಧ್ಯಕ್ಷತೆ ವಹಿಸಿದ್ದರು. ಸರ್ವಧರ್ಮ ಸಮ್ಮೇಳನದ ಉದ್ಘಾಟನೆಯನ್ನು ಎ ಪಿ ಹಂಝ ಸಖಾಫಿ ಮೇಲ್ಮುರಿ ನೆರವೇರಿಸಿದರು. ಭಾಷಣಕಾರರಾಗಿ ಸುಫಿಯಾನ್ ಸಖಾಫಿ ಗಂಗಾವತಿ ಮತ್ತು ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಎಮ್ಮೆಮಾಡು , ರಾಝಿಕ್ ಫೈಝಿ ಸೇರಿದಂತೆ ಇನ್ನಿತರರು ಮಾತನಾಡಿದರು.

ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ, ಎರ್ಮು ಹಾಜಿ , ಮೊಹಮ್ಮದ್ ಹಾಜಿ ಕುಂಜಿಲ, ಅಬ್ದುಲ್ ರೆಹಮನ್, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ನಾಪೋಕ್ಲು, ಯಾಕೂಬ್, ಹಂಝ ಪಡಿಯಾಣಿ, ಕರೀಂ ಆಜು, ಅಶ್ರಫ್ ಬಿ.ಯು. ಹಾಗೂ ಜಮಾಯಿತಿನ ಹಾಲಿ ಹಾಗೂ ಚಂಬಾರಂಡ ಮಾಹಿನೆ ಸೇರಿದಂತೆ ಹಾಲಿ ಮತ್ತು ಮಾಜಿ ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಜಮಾಅತ್ ಕಾರ್ಯದರ್ಶಿ ಸಯ್ಯದ್ ಝಕರಿಯ ಸಅದಿ ಸ್ವಾಗತಿಸಿದರು. ಸುಲೈಮಾನ್ ಸಖಾಫಿ ವಂದಿಸಿದರು. ನಂತರ ಅನ್ನದಾನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪ್ಪೂರು ನದಿಕೊರೆತ ಪ್ರದೇಶಕ್ಕೆ ಶಾಸಕ ಯಶ್ ಪಾಲ್ ಭೇಟಿ
ಅಗ್ನಿ ಅವಘಡಗಳಿಗೆ ಸುರಕ್ಷತಾ ಕ್ರಮ ತಿಳಿದುಕೊಳ್ಳುವುದು ಅವಶ್ಯಕ: ಲಕ್ಷ್ಮಿಕುಮಾರ್