ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ನಾವು ಪರಸ್ಪರ ಆ ದೇಶಕ್ಕೆ ಸಂದೇಶ ಕಳುಹಿಸುತ್ತಿದ್ದು, ಅಲ್ಲಿ ಸಿಲುಕಿರುವವರ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗದರ್ಶನ ನೀಡಿದೆ. ನಾವೆಲ್ಲರೂ ಇಂದು ಅಲ್ಲಿರುವವರಿಗೆ ಗಾಬರಿಯಾಗಬೇಡಿ ಎಂದು ಮನವಿ ಮಾಡೋಣ. ಭಾರತಕ್ಕೆ ಇದರಿಂದ ಒಂದು ದೊಡ್ಡ ಗಂಡಾಂತರ ಬಂದಿದೆ. ಕೇಂದ್ರ ಸರ್ಕಾರ ಬೇರೆ ದೇಶ ಹಾಗೂ ಅಮೇರಿಕಾಕ್ಕೂ ಈ ಬಗ್ಗೆ ಕಟ್ಟುನಿಟ್ಟಿನ ಸಂದೇಶ ತಲುಪಬೇಕಿದೆ. ಅಮೇರಿಕಾ ಈ ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆ ಮಾಡಬೇಕಿದೆ ಎಂದರು.(ಬಾಕ್ಸ್)
ನಿಮ್ಮ ಪರಿಶ್ರಮಕ್ಕೆ ಫಲ ಸಿಗ್ಗುತ್ತಾ? ಪ್ರಶ್ನೆಗೆ ಡಿಕೆಶಿ ಮಾರ್ಮಿಕ ಉತ್ತರರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸರ್ ನಿಮ್ಮ ಪರಿಶ್ರಮಕ್ಕೆ ಫಲ ಸಿಗುತ್ತಾ ಎಂಬ ಪ್ರಶ್ನೆಕೇಳಿದರು. ಇದಕ್ಕೆ ನಗುತ್ತ ಉತ್ತರಿಸಿದ ಡಿಕೆಶಿ ಏನು ಪರಿಶ್ರಮ ಎಂದು ನಗುತ್ತಾ, ನಾನು ಇಲ್ಲಿಗೆ ಬಂದಿದ್ದೇನೆ ಅಲ್ವಾ, ಮುಂದೆ ಮಾತನಾಡೋಣ ಎಂದು ನಗುತ್ತಾ ತೆರಳಿದರು.(ಬಾಕ್ಸ್)ಹೆಲಿಪ್ಯಾಡ್‌ನಲ್ಲಿ ಹೆಚ್ಚಿದ ಜನ: ಡಿಕೆಶಿ ಗರಂ ರಂಭಾಪುರಿ ಪೀಠಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಲಿಕ್ಯಾಪ್ಟರ್‌ನಿಂದ ಕೆಳಗಿಳಿದು ಬಂದವರೆ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತುವರಿದಿದ್ದ ಮಾಧ್ಯಮ ಸಿಬ್ಬಂದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ಸಿಟ್ಟಾದ ಪ್ರಸಂಗ ನಡೆಯಿತು. ಜನರ ದಂಡು ಕಂಡು ನಿಮಗೇನಾದರೂ ಮಾನ-ಮರ್ಯಾದೆ ಇದೆಯೇನ್ರಿ? ಎಂದು ಗದರಿಸಿ ಹತ್ತಿರದಲ್ಲಿದ್ದ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರಿಗೆ ಹೆಲಿಕಾಪ್ಟರ್ ಫ್ಯಾನ್ ಇನ್ನೂ ತಿರುಗುತ್ತಾ ಇದೆ. ಆದರೂ ಇಷ್ಟೊಂದು ಜನರನ್ನು ಹತ್ತಿರ ಬಿಟ್ಟಿ ದ್ದೀರಾ? ಸ್ವಲ್ಪ ಸಿಬ್ಬಂದಿ ಹಾಕಲು ಆಗಲ್ವ ಎಂದು ಗುಡುಗಿದರು. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಇದಕ್ಕೆ ಯಾರು ಜವಾಬ್ದಾರಿ ಹೊರುತ್ತೀರಿ ಎಂದು ಪೊಲೀಸರನ್ನು ಪ್ರಶ್ನಿಸಿದರು.(ಬಾಕ್ಸ್)
ಬಾಳೆಹೊನ್ನೂರು ರಂಭಾಪುರಿ ಪೀಠದ ಕಾರ್ಯಕ್ರಮಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಹೆಜ್ಜೆ ಹಾಕಿದರು.