ಕನ್ನಡಪ್ರಭ ವಾರ್ತೆ ಐಗಳಿ
ಸ್ಥಳೀಯ ಹನುಮಾನ ದೇವಾಲಯದ ಕಳಸಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲಿ ಹನುಮಾನ ದೇವಾಲಯಗಳು ಇವೆ. ಭಕ್ತರ ಸಂಖ್ಯೆಯೂ ಸಹ ಹೆಚ್ಚಾಗಿದೆ. ಐಗಳಿ ಗ್ರಾಮ ಭಾವೈಕ್ಯತೆಗೆ ಹೆಸರಾಗಿದ್ದು, ದೇವರು ಭಕ್ತರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.
ಆದರ್ಶ ಶಿಕ್ಷಕ ಅಪ್ಪಾಸಾಬ ತೆಲಸಂಗ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಮಾಜಿ ಸಚಿವೆ ಶಶಿಕಲಾ ಜೋಲ್ಲೆ ₹5 ಲಕ್ಷ ಅನುದಾನ ನೀಡಿದ್ದರಿಂದ ಹನುಮಾನ ದೇವಾಲಯ ಶಿಖರ ಸುಂದರವಾಗಿ ನಿರ್ಮಾಣವಾಯಿತು ಎಂದರು. ಗ್ರಾಮದ ವಿವಿಧ ಸಂಘ-ಸಂಸ್ಥೆ ಹಾಗೂ ವೈಯಕ್ತಿಕವಾಗಿ ಸಹಾಯ, ಪ್ರಸಾದ ವ್ಯವಸ್ಥೆ ಹಾಗೂ ಕಳಸ ನೀಡಿದವರಿಗೂ ಗೌರವಿಸಿ ಸತ್ಕರಿಸಲಾಯಿತು.ಕನ್ನಾಳ ಬಸವಲಿಂಗ ಸ್ವಾಮೀಜಿ, ಅಪ್ಪಯ್ಯ ಹಿರೇಮಠ, ಪೃಥ್ವಿರಾಜ ಹಿರೇಮಠ, ಬಸಯ್ಯ ಮಠಪತಿ, ಶಂಕರಯ್ಯ ಮಠಪತಿ ರವರು ನವಗೃಹ ಹಾಗೂ ಅಷ್ಟಲಕ್ಷ್ಮೀ ವಿಶೇಷ ಪೂಜೆ ನೆರವೇರಿಸಿದರು. ಸುಮಾರು 500 ಜನ ಕುಂಭ ಹೊತ್ತು ಬಸವೇಶ್ವರ ದೇವಸ್ಥಾನ, ಕನಕದಾಸ ವೃತ್ತ, ಮಾಳಿ ಓಣಿ, ಬಸವೇಶ್ವರ ವೃತ್ತ, ಮುಖ್ಯ ಬಜಾರ ಮೂಲಕ ದೇವಾಲಯವರೆಗೆ ಕುಂಭೋತ್ಸವ ಮೆರಗು ಮೂಡಿತು.
ಮೆರವಣಿಗೆಯಲ್ಲಿ ದಿ ಪ್ರಿನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಮ-ಲಕ್ಷ್ಮಣ ಸೀತಾ ವೇಷ ಧರಿಸಿದ್ದು ಹಾಗೂ ಟ್ರ್ಯಾಕ್ಟರ್ ಮಾಲೀಕರು ಕುಂಭ ಹೊತ್ತ ಮಹಿಳೆಯರಿಗೆ ಬಿಸಿಲಿನಲ್ಲಿ ತಂಪು ಪಾನಿಯ ವ್ಯವಸ್ಥೆ ಕಲ್ಪಿಸಿದ್ದರು.