ರಾಮನಾಥಪುರ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾದ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಧಾರ್ಮಿಕ ಚಿಂತನೆಯಿದ್ದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ರೇವಣ್ಣ ತಿಳಿಸಿದರು. ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಪರಂಪರೆಯನ್ನು ಇಂದಿನ ದಿನಗಳಲ್ಲಿ ಇಂತಹ ದೇವಾಲಯಗಳನ್ನು ನಿರ್ಮಾಣ ಮಾಡಿ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿರುವುದು ಜಾಗೃತಿ ಅಚರಣೆಗಳನ್ನು ಮಾಡಿ ಗ್ರಾಮೀಣ ಜನರ ಶಾಂತಿ ನೆಮ್ಮದಿಯಿಂದ ಬಾಳಲು ಸಹಕಾರಿಯಾಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಭಾರತದ ಸನಾತನ ಸಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನಮ್ಮ ಪರಂಪರೆ ಮತ್ತು ದೇವಾಲಯಗಳು ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರು ಎಚ್.ಡಿ. ರೇವಣ್ಣ ತಿಳಿಸಿದರು.ರಾಮನಾಥಪುರ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾದ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಧಾರ್ಮಿಕ ಚಿಂತನೆಯಿದ್ದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ರೇವಣ್ಣ ತಿಳಿಸಿದರು. ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಪರಂಪರೆಯನ್ನು ಇಂದಿನ ದಿನಗಳಲ್ಲಿ ಇಂತಹ ದೇವಾಲಯಗಳನ್ನು ನಿರ್ಮಾಣ ಮಾಡಿ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿರುವುದು ಜಾಗೃತಿ ಅಚರಣೆಗಳನ್ನು ಮಾಡಿ ಗ್ರಾಮೀಣ ಜನರ ಶಾಂತಿ ನೆಮ್ಮದಿಯಿಂದ ಬಾಳಲು ಸಹಕಾರಿಯಾಗುತ್ತದೆ. ಜೊತೆಗೆ ದೇವಾಲಯಗಳನ್ನು ನಿರ್ಮಾಣ ಮಾಡುವುದು ಮುಖ್ಯವಲ್ಲ ಪ್ರತಿನಿತ್ಯ ದೇವಾಲಯದ ಪೂಜೆಯನ್ನು ಮಾಡುವುದು ಮುಖ್ಯ ಎಂದು ಎ. ಮಂಜು ತಿಳಿಸಿದರು. ಈ ಸಂದರ್ಭದಲ್ಲಿ ತೇಜೂರು ಶ್ರೀ ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಬೆಟ್ಟದಪುರದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ಶೆಟ್ಟಿಗೊಂಡನಹಳ್ಳಿ ಮಠದ ಶ್ರೀ ಬಾಲಕೃಷ್ಣನಂದ ಸ್ವಾಮೀಜಿ, ಕೂಡ್ಲೂರು ಮಠದ ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಕೆರಗೂಡು ಬಸವರಾಜು, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಸನ ಹೊನ್ನವಳ್ಳಿ ಸತೀಶ್, ಹಳ್ಳಕಾರ್ ಸಮಾಜದ ಮುಖಂಡರು ಬೆಂಗಳೂರು ಕೆ.ಎಂ. ನಾಗರಾಜು, ಎಂ.ಇ. ಕೃಷ್ಣಪ್ಪ, ಎಂ.ಎಲ್ ಗೋವಿಂದರಾಜು, ಎಂ.ಎಚ್. ಕೃಷ್ಣಮೂರ್ತಿ, ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ರಾಜ್ಯಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ತಾಲೂಕು ಮಹಾಸಭಾ ಅಧ್ಯಕ್ಷರು ಬೆಮ್ಮತ್ತಿ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಡಿಕೇರಿ ಡಿಎಚ್‌ಒ ಸತೀಶ್, ಸರಗೂರು ಚೌಡೇಗೌಡ ಬಂದು ಬಳಗದವರು ಗ್ರಾಮಸ್ಥರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.