ಇತ್ತೀಚಿನ ದಿನಮಾನಗಳಲ್ಲಿ ಯುವಜನತೆ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸದೃಢ ಆರೋಗ್ಯದಿಂದ ನೆಮ್ಮದಿ ಸಾಧ್ಯ. ಯುವ ಪೀಳಿಗೆ ದುಶ್ಚಟ ತೊರೆಯುವ ಮೂಲಕ ಸುಭದ್ರ ಸಮಾಜದ ಸದೃಢ ಪ್ರಜೆಯಾಗಬೇಕು ಎಂದು ಪಿಎಸ್‌ಐ ಆರ್ ಟಿ ರಿತ್ತಿ ಹೇಳಿದರು.
ನರೇಗಲ್ಲ: ಇತ್ತೀಚಿನ ದಿನಮಾನಗಳಲ್ಲಿ ಯುವಜನತೆ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸದೃಢ ಆರೋಗ್ಯದಿಂದ ನೆಮ್ಮದಿ ಸಾಧ್ಯ. ಯುವ ಪೀಳಿಗೆ ದುಶ್ಚಟ ತೊರೆಯುವ ಮೂಲಕ ಸುಭದ್ರ ಸಮಾಜದ ಸದೃಢ ಪ್ರಜೆಯಾಗಬೇಕು ಎಂದು ಪಿಎಸ್‌ಐ ಆರ್.ಟಿ. ರಿತ್ತಿ ಹೇಳಿದರು.
ಅವರು ಸ್ಥಳೀಯ ದುರ್ಗಾ ಸರ್ಕಲ್ ಹತ್ತಿರ ಕಾಲೇಜು ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟಿದ್ದ ಮಾನವ ಸರಪಳಿಯಲ್ಲಿ ಭಾಗವಹಿಸಿ ಮಾದಕ ದ್ರವ್ಯ ಸೇವನೆ ಮುಕ್ತಗೊಳಿಸಬೇಕೆಂಬ ಸಂದೇಶ ಸಾರಿ ಮಾತನಾಡಿದರು.
ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಯುವ ಜನತೆ ಮಾದಕ ದ್ರವ್ಯ ವ್ಯಸನಕ್ಕೆ ದಾಸರಾಗುತ್ತಿದ್ದು, ಕಾಲ ಗತಿಸಿದಂತೆ ಅದು ಹೆಚ್ಚಾಗುತ್ತಿದೆ. ಸರ್ಕಾರ ಮುಂಜಾಗೃತಾ ಕ್ರಮ ಕೈಗೊಂಡರು ಬಳಕೆದಾರರು ಮಾತ್ರ ಅನ್ಯ ಮಾರ್ಗಗಳ ಮೂಲಕ ಅವುಗಳ ಸೇವನೆಗೆ ಮುಂದಾಗಿದ್ದು, ಇದು ಸಮಾಜದಲ್ಲಿನ ಬಹುದೊಡ್ಡ ಪಿಡುಗು.
ಸಾರ್ವಜನಿಕ ಸ್ಥಳಗಳಲ್ಲಿ ಅವುಗಳ ಸೇವನೆಯಿಂದ ದೂರವಿರಲು ಸೂಚಿಸಲಾಗಿದ್ದು, ಜನತೆ ಮಾತ್ರ ಎಚ್ಚೆತ್ತುಕೊಳ್ಳದೇ ಅದರ ದಾಸರಾಗಿಬಿಟ್ಟಿದ್ದಾರೆ. ಇದು ನಿಲ್ಲಬೇಕು. ಇಲ್ಲವಾದರೆ ಮುಂದಿನ ಪೀಳಿಗೆ ಇದನ್ನು ಗಣನೀಯವಾಗಿ ಅನುಸರಿಸುವ ಸಾಧ್ಯತೆ ಹೆಚ್ಚಾಗಲಿದ್ದು, ಇಂದಿನಿಂದಲೇ ಜನತೆ ಅವುಗಳಿಂದ ದೂರವಿರುವ ಮೂಲಕ ಸದೃಢ ಆರೋಗ್ಯ ಕಾಯ್ದುಕೊಳ್ಳಿ ಎಂದರು.
ಈ ವೇಳೆ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಇ.ಆರ್. ಲಗಳೂರ, ಬಸವರಾಜ ಪಲ್ಲೇದ, ಎಂ.ಎಫ್. ತಹಸೀಲ್ದಾರ ಸಾರ್ವಜನಿಕರನ್ನುದ್ದೇಶಿಸಿ ಮಾದಕ ದ್ರವ್ಯ ಸೇವನೆಯಿಂದ ದೂರವಿರುವಂತೆ ಸಲಹೆ ನೀಡಿದರು.
ರ್ಯಾಲಿಯು ಸರ್ಕಾರಿ ಪದವಿ ಮಹಾವಿದ್ಯಾಲಯದಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಾ ಜಾಥಾ ಮೂಡಿಸಿ ದುರ್ಗಾ ಸರ್ಕಲ್ ಹತ್ತಿರ ಮಾನವ ಸರಪಳಿ ನಿರ್ಮಸಿ ಸಾರ್ವಜನಿಕರಿಗೆ ಮಾದಕ ದ್ರವ್ಯ ಸೇವನೆಯಿಂದ ದೂರವಿರುವಂತೆ ಸಂದೇಶ ಸಾರಿ ನಂತರ ಮೂಲ ಸ್ಥಳಕ್ಕೆ ಜಾಥಾದೊಂದಿಗೆ ತೆರಳಿ ಅಂತ್ಯಗೊಳಿಸಲಾಯಿತು.
ಪ್ರಾಧ್ಯಾಪಕ ಡಾ.ಕೆ.ಎನ್. ಕಟ್ಟಿಮನಿ, ಅನೀಲ ಪಾರಶಟ್ಟಿ, ವಿ.ಕೆ. ಸಂಗನಾಳ, ವಿ.ಸಿ. ಇಲ್ಲೂರ, ಅಂಜನಮೂರ್ತಿ ಎಸ್. ಬಿ. ಕೋರೆ, ಸುನಂದಾ ಮುಂಜಿ, ಬಿ.ಎಸ್. ಮಡಿವಾಳರ, ಕಿರಣ ರಂಜನಗಿ, ಪೊಲೀಸ್ ಸಿಬ್ಬಂದಿ ಪ್ರವೀಣ ಅಳ್ಳಳ್ಳಿ, ಮಾರ್ತಾಂಡ ಉಪ್ಪಾರ, ಮುತ್ತು ಹಡಪದ, ವಿಜಯ ಗೋದಿಗನೂರ, ವಸಂತ ರಾಠೋಡ, ಸಂತೋಷ ಘಾಟಗೆ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.