ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:ಒತ್ತಡದ ಜೀವನದಲ್ಲಿ ಪ್ರವಚನ-ಪುರಾಣಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಪ್ರಶಾಂತತೆ ಸಿಗುವ ಜೊತೆಗೆ ಮನಸ್ಸನ್ನು ಶುದ್ಧಗೊಳಿಸುವದಕ್ಕೆ ಪೂರಕ ವಾತಾವರಣ ಸೃಷ್ಟಿಸಿದಂತಾಗಲಿದೆ ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರವಚನದ ಮಂಗಲ ಕಾರ್ಯ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತ್ರೆ-ಉತ್ಸವಗಳು ಪ್ರತಿ ಕುಟುಂಬದ ಸದಸ್ಯರೊಂದಿಗೆ ಸಂಬಂಧಿಕರನ್ನು ಪರಸ್ಪರ ಭೇಟಿ ಮಾಡಲು ಸಹಕಾರಿಯಾಗಿವೆ. ಈ ಉತ್ಸವಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತವೆ. ನಿರಂತರವಾಗಿ ಇಂತಹ ಉತ್ಸವಗಳು ನಡೆಯುವಂತಾಗಬೇಕು ಎಂದರು.ಘಟಪ್ರಭದ ಚನ್ನಬಸವ ದೇವರು ಮಾತನಾಡಿ, ಆಧ್ಯಾತ್ಮಿಕತೆಯಿಂದ ಮುಕ್ತಿ ಮಾರ್ಗ ಕಾಣಬೇಕು. ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಆಧ್ಯಾತ್ಮಿಕತೆಯಿಂದ ಸಾರ್ಥಕತೆ ಮಾಡಿಕೊಳ್ಳಬೇಕು. ದೂರದರ್ಶನದಿಂದ ಹೊರಬಂದು ಧರ್ಮದರ್ಶನಕ್ಕೆ ಬಂದರೆ ಸುಖ-ನೆಮ್ಮದಿ ಕಾಣಬಹುದು ಎಂದು ಹೇಳಿದರು.ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಜಾತ್ರಾ ಸಮಿತಿಯ ಸದಸ್ಯರ, ಈ ಭಾಗದ ಜನರ ನಿಸ್ವಾರ್ಥ ಸೇವೆಯಿಂದ ಜಾತ್ರಾಮಹೋತ್ಸವ ಯಶಸ್ವಿಯಾಗುತ್ತಿದೆ. ಪಡಶೆಟ್ಟಿ ಬಾಂಧವರು ಗೌರಿ-ಶಂಕರ ದೇವರ ಮೇಲಿಟ್ಟಿರುವ ಭಕ್ತಿ ಮೆಚ್ಚುವಂತಹದ್ದು. ದೇವರ ಮೇಲೆ ಭಕ್ತಿ ಇದ್ದರೆ ದೇವರ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂದರು.ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವ ವರ್ಷದಿಂದ ವರ್ಷಕ್ಕೆ ಎಲ್ಲ ಜನರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಯುತ್ತಿದ್ದು, ಪ್ರತಿ ವರ್ಷ ಹೀಗೆ ನಡೆಯಲಿ ಎಂದು ಆಶಿಸಿದರು.ಪ್ರವಚನಕಾರ ರಾಚಯ್ಯ ಶಾಸ್ತ್ರೀಜಿ, ಮುಖಂಡರಾದ ಸಂಗಮೇಶ ಓಲೇಕಾರ, ರವಿ ರಾಠೋಡ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಬಿ.ಕೆ.ಕಲ್ಲೂರ, ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಪ್ರವೀಣ ಪೂಜಾರಿ, ಮುಖಂಡರಾದ ಶೇಖರಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಶ್ರವಣಕುಮಾರ ಅಗರವಾಲ, ನಾಗರಾಜ ಪಟ್ಟಣಶೆಟ್ಟಿ, ಪತ್ರಕರ್ತರಾದ ಪ್ರಕಾಶ ಬೆಣ್ಣೂರ, ಬಸವರಾಜ ನಂದಿಹಾಳ, ಜಾತ್ರಾ ಕಮಿಟಿಯ ಶ್ರೀಶೈಲ ಮಠಪತಿ, ಈರಣ್ಣ ಪಡಶೆಟ್ಟಿ, ನಿಂಗಪ್ಪ ಕುಳಗೇರಿ, ಶಾಂತಪ್ಪ ಪಡಶೆಟ್ಟಿ, ಸಂಗಪ್ಪ ನಾಯ್ಕೋಡಿ ಇತರರು ಇದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ, ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳದ ನೂತನ ನಿರ್ದೇಶಕ ಬಾಲಚಂದ್ರ ಮುಂಜಾನೆ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕ್ರತ ಲೋಕನಾಥ ಅಗರವಾಲ, ಪ್ರವಚನಕಾರ ರಾಚಯ್ಯ ಶಾಸ್ತ್ರೀಜಿ, ಸಂಗೀತ ಕಲಾವಿದರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈ.ಎನ್.ಮಿಣಜಗಿ ಸ್ವಾಗತಿಸಿದರು. ಪಿ.ಎಸ್.ಬಾಗೇವಾಡಿ ನಿರೂಪಿಸಿದರು. ಶ್ರೀಕಾಂತ ಪಡಶೆಟ್ಟಿ ವಂದಿಸಿದರು. ಈ ವೇಳೆ ಗೌರಿ-ಶಂಕರ ದೇವರಿಗೆ ಮನೆಯಿಂದ ಮಾಡಿಕೊಂಡು ತಂದಿದ್ದ ಹೂರಣ ಕಡುಬು, ಅನ್ನ-ಸಾಂಬಾರ ಪ್ರಸಾದವನ್ನು ಭಕ್ತರು ಸವಿದರು.