ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಬಿಎಂಟಿ- ಓಟಿ ಆರಂಭ

KannadaprabhaNewsNetwork |  
Published : Feb 25, 2026, 03:00 AM IST
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಕ್ಯಾನ್ಸರ್ ಆಪರೇಶನ್ ಥಿಯೇಟರ್ ಉದ್ಘಾಟಿಸಲಾಯಿತು | Kannada Prabha

ಸಾರಾಂಶ

ಕರ್ನಾಟಕದ ಪ್ರಮುಖ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳಲ್ಲೊಂದಾಗಿರುವ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಕೇಂದ್ರದಲ್ಲಿ ಹೊಸದಾಗಿ ಸ್ಥಾಪಿಸಲಾದ ಮಕ್ಕಳ ಕ್ಯಾನ್ಸರ್ ಅಸ್ಥಿಮಜ್ಜೆ ಕಸಿ ಘಟಕ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಥಿಯೇಟರ್‌ ನ್ನು ಮಾಹೆಯ ಮುಖ್ಯ ಕಾರ್‍ಯಾರಣೆ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್ ಉದ್ಘಾಟಿಸಿದರು.

ಮಣಿಪಾಲ: ಕರ್ನಾಟಕದ ಪ್ರಮುಖ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳಲ್ಲೊಂದಾಗಿರುವ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಕೇಂದ್ರದಲ್ಲಿ ಹೊಸದಾಗಿ ಸ್ಥಾಪಿಸಲಾದ ಮಕ್ಕಳ ಕ್ಯಾನ್ಸರ್ ಅಸ್ಥಿಮಜ್ಜೆ ಕಸಿ ಘಟಕ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಥಿಯೇಟರ್‌ ನ್ನು ಮಾಹೆಯ ಮುಖ್ಯ ಕಾರ್‍ಯಾರಣೆ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್ ಉದ್ಘಾಟಿಸಿದರು.

ಹೊಸ ಕ್ಯಾನ್ಸರ್ ಆಪರೇಷನ್ ಥಿಯೇಟರ್ ಮತ್ತು ಮಕ್ಕಳ ಆಂಕೊಲಜಿ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಯೂನಿಟ್‌ನೊಂದಿಗೆ ಕಸ್ತೂರ್ಬಾ ಆಸ್ಪತ್ರೆಯು ಸಮಗ್ರ ಕ್ಯಾನ್ಸರ್ ಆರೈಕೆಯಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ. ಎಲ್ಲ ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ. ಇದು ನಿರಂತರ ಉತ್ತಮ ಗುಣಮಟ್ಟದ ಮತ್ತು ರೋಗಿ ಕೇಂದ್ರಿತ ಆರೈಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಈ ಸಂದರ್ಭ ಮಾಹೆ ಮಣಿಪಾಲ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್‍ಯಾಚರಣೆ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನವೀನ ಕುಮಾರ್ ಎ.ಎನ್. ಮತ್ತು ಮಕ್ಕಳ ಆಂಕೊಲಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ. ಉಪಸ್ಥಿತರಿದ್ದರು.

ಈ ಹೊಸ ಮಕ್ಕಳ ಆಂಕೊಲಜಿ ಬಿಎಂಟಿ ಘಟಕವು ಸುಧಾರಿತ ಮೂಲ ಸೌಕರ್ಯ, ವಿಶೇಷ ಐಸೊಲೇಷನ್ ಕೊಠಡಿಗಳು ಮತ್ತು ಅಸ್ಥಿ ಮಜ್ಜೆಯ ಕಸಿಗೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೋಂಕು ನಿಯಂತ್ರಣ ಕ್ರಮಗಳನ್ನು ಹೊಂದಿದೆ. ಹೊಸ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ಆಪರೇಷನ್ ಥಿಯೇಟರನ್ನು ಹೆಚ್ಚು ಸುರಕ್ಷತೆ ಮತ್ತು ನಿಖರತೆಯೊಂದಿಗೆ ಸಂಕೀರ್ಣ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲು ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2 ವರ್ಷದೊಳಗೆ ಪುತ್ತೂರು ದೇವಳ ಬ್ರಹ್ಮಕಲಶ ಗುರಿ: ಅಶೋಕ್‌ ರೈ
ದೇಶಕ್ಕಾಗಿ ರಕ್ತ ಬಲಿದಾನ ನೀಡಿದವರು ಬಿಗ್‌ ಬಾಸ್‌: ದೋ. ಕೇಶವಮೂರ್ತಿ