ಶೇ.15ರವರೆಗೆ ನಕ್ಷೆ ಉಲ್ಲಂಘಿಸಿದ ಕಟ್ಟಡಗಳ ಸಕ್ರಮಕ್ಕೆ ದಂಡ ಸ್ಕೀಂ

KannadaprabhaNewsNetwork |  
Published : Nov 01, 2025, 02:00 AM IST
Bengaluru City

ಸಾರಾಂಶ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆದು ಬಳಿಕ ಪರವಾನಗಿ ಷರತ್ತು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳಿಗೆ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶಿಸಿದೆ.

 ಬೆಂಗಳೂರು :  ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆದು ಬಳಿಕ ಪರವಾನಗಿ ಷರತ್ತು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳಿಗೆ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶಿಸಿದೆ.

ನಿಗದಿತ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ಮಂಜೂರು

ಕಟ್ಟಡ ಪರವಾನಗಿ ಪಡೆದು ಸೆಟ್‌ಬ್ಯಾಕ್‌ಗಳಲ್ಲಿ ಶೇ.15ರ ಮಿತಿಯೊಳಗೆ ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ಕಟ್ಟಡಗಳಿಗೆ ನಗರ ಸ್ಥಳೀಯ ಸಂಸ್ಥೆವಾರು ನಿಗದಿತ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ಮಂಜೂರು ಮಾಡಲು ಸೂಚಿಸಲಾಗಿದೆ. ಅದರಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡಕ್ಕೆ ಪ್ರತಿ ಚದರ ಮೀಟರ್‌ಗೆ 1 ಸಾವಿರ ರು. ವಾಣಿಜ್ಯ ಕಟ್ಟಡಕ್ಕೆ 1,500 ರು., ಪುರಸಭೆ ವ್ಯಾಪ್ತಿಯಲ್ಲಿ ಕ್ರಮವಾಗಿ 1,200 ರು. ಮತ್ತು 1,800 ರು, ನಗರ ಸಭೆಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 1,500 ರು. ಮತ್ತು 2,250 ರು., ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 2 ಸಾವಿರ ರು. ಮತ್ತು 3 ಸಾವಿರ ರು. ದಂಡ ನಿಗದಿಗೊಳಿಸಲಾಗಿದೆ.

ಕಟ್ಟಡ ಪರವಾನಗಿ ಪಡೆದು ಪ್ಲೋರ್‌ ಏರಿಯಾ ರೇಶ್ಯೂ(ಎಫ್‌ಎಆರ್‌) ಮತ್ತು ಕಾರ್‌ ಪಾರ್ಕಿಂಗ್‌ ಪ್ರದೇಶಗಳ ಉಲ್ಲಂಘನೆ ಪ್ರಕರಣಗಳಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರು ಪಾರ್ಕಿಂಗ್‌ ಉಲ್ಲಂಘನೆಗೆ 5 ಸಾವಿರ ರು. ಮತ್ತು ಎಫ್‌ಎಆರ್‌ ಉಲ್ಲಂಘನೆ(ಚದರ ಮೀಟರ್‌) ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡಗಳಿಗೆ 1 ಸಾವಿರ ರು. ಮತ್ತು ವಾಣಿಜ್ಯ ಕಟ್ಟಡಗಳಿಗೆ 1,500 ರು, ಪುರಸಭೆ ವ್ಯಾಪ್ತಿಯಲ್ಲಿ ಕಾರ್‌ ಪಾರ್ಕಿಂಗ್‌ ಉಲ್ಲಂಘನೆಗೆ 5 ಸಾವಿರ ರು, ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡಗಳಿಗೆ 1,200 ರು. ಮತ್ತು ವಾಣಿಜ್ಯ ಕಟ್ಟಡಗಳಿಗೆ 1,800 ರು, ನಗರ ಸಭೆಗಳ ವ್ಯಾಪ್ತಿಯಲ್ಲಿ ಎಫ್‌ಎಆರ್‌ ಉಲ್ಲಂಘನೆಗೆ 1,500 ರು. ಮತ್ತು ವಾಣಿಜ್ಯ ಕಟ್ಟಡಗಳಿಗೆ 2,250 ರು. ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎಫ್‌ಎಆರ್‌ ಉಲ್ಲಂಘನೆಗೆ 2 ಸಾವಿರ ರು. ಮತ್ತು ವಾಣಿಜ್ಯ ಕಟ್ಟಡಗಳಿಗೆ 3 ಸಾವಿರ ರು. ದಂಡ ವಿಧಿಸಿ ಸರ್ಕಾರ ಆದೇಶಿದೆ.

ದಂಡ ಎಷ್ಟು?

ಪಟ್ಟಣ ಪಂಚಾಯಿತಿ ವಸತಿ, ಕೈಗಾರಿಕೆ, ಇತರೆ ಕಟ್ಟಡ ವಾಣಿಜ್ಯ ಉದ್ದೇಶದ ಕಟ್ಟಡ

₹1000 ₹1500

ಪುರಸಭೆ

₹1200 ₹1800

ನಗರಸಭೆ

₹1500 ₹2250

ಮಹಾನಗರಪಾಲಿಕೆ

₹2000 ₹3000

PREV
Read more Articles on

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!