ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಗಣಪತಿ ಪೆಂಡಾಲ್ ಮುಂಭಾಗ ಹೂವಿನಿಂದ ಅಲಂಕೃತಗೊಂಡಿದ್ದ ಮಂಟಪದಲ್ಲಿ ಗಣಪತಿ ಮತ್ತು ಗೌರಿಯನ್ನು ಕೂರಿಸಲಾಗಿತ್ತು. ಬೆಳಿಗ್ಗೆ ಸರಿಯಾಗಿ 11.45ಕ್ಕೆ ಚಾಲನೆ ನೀಡಿದ ಶಾಸಕರು ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರದ ಪೆಂಡಾಲ್ ಗಣಪತಿಯನ್ನು ಬಹಳ ವಿಜೃಂಭಣೆಯಿಂದ ವಿಸರ್ಜನಾ ಮೆರವಣಿಗೆ ನಡೆಸಲಾಗುತ್ತಿದೆ. ಶ್ರೀ ಗಣಪತಿ ಸೇವಾ ಸಂಸ್ಥೆಯಿಂದ ಪ್ರತಿವರ್ಷ ಆಕರ್ಷಕವಾಗಿ ಗಣಪತಿ ಮೆರವಣಿಗೆಯನ್ನು ರಾಜಬೀದಿಗಳಲ್ಲಿ ಸಾಗುತ್ತಿದೆ. ಗಣೇಶ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಡಾ. ಎಚ್. ನಾಗರಾಜು ಮಾತನಾಡಿ, ಶ್ರೀ ಗಣಪತಿ ಉತ್ಸವ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಮೆರವಣಿಗೆಯು ಗಣಪತಿ ಪೆಂಡಾಲ್‌ನಿಂದ ಹೊರಟು ಶಿವನಂಜಪ್ಪ ವೃತ್ತ, ಗಾಂಧಿ ಬಜಾರ್, ಹಾಸನಾಂಬ ವೃತ್ತ, ಸಂತೆ ಪೇಟೆ, ಹೊಸ ಲೈನ್ ರಸ್ತೆ, ಅರಳೇಪೇಟೆ ರಸ್ತೆ, ಪಾರ್ಕ್ ರಸ್ತೆ, ಸ್ಲೇಟರ್ಸ್ ವೃತ್ತ, ದೊಡ್ಡಿ ರೋಡ್, ಮಹಾವೀರ ವೃತ್ತ, ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ನಂದಿ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಚಮನ ಕುಣಿತ, ಬ್ಯಾಂಡ್ ಸೆಟ್, ಕೀಲು ಕುದುರೆ, ಬೆದರು ಬೊಂಬೆ ಪ್ರದರ್ಶನ, ಹುಲಿ ವೇಶ,ಕುರುಬನ ವೇಶ, ಬೃಹತ್ ಹನುಮಂತ ಮತ್ತು ಶ್ರೀಚನ್ನಕೇಶವಬ ಪ್ರತಿಮೆ, ಉದ್ದ ಮನುಷ್ಯ, ಮಹಿಳೆಯರಿಂದ ಡೋಳು ಕುಣಿತ, ಕೊಡಗಿನ ನೃತ್ಯ, ಬೆಂಕಿಯಲ್ಲಿ ಸಾಹಸ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿ ಗಮನ ಸೆಳೆದವು.ಸಾರ್ವಜನಿಕರು ಮೆರವಣಿಗೆ ಉದ್ದಕ್ಕೂ ಕುಣಿದು ಕುಪ್ಪಳಿಸಿದರು, ಇನ್ನು ಪೆಂಡಾಲ್ ಗಣಪತಿ ಉತ್ಸವದ ಅಂಗವಾಗಿ ನಗರದ 19ನೇ ವಾರ್ಡಿನ ಅರಳೇಪೇಟೆ ನಿವಾಸಿಗಳು, ಅಂಗಡಿ ಮಾಲೀಕರಿಂದ ಅನ್ನದಾನ, ಸಹ್ಯಾದ್ರಿ ವೃತದಲ್ಲಿ ಸೇರಿದಂತೆ ಹಲವಾರು ಕಡೆ ಅನ್ನಸಂತರ್ಪಣೆ ನಡೆಸಲಾಗಿದೆ ಎಂದು ಹೇಳಿದರು. ಸಂಜೆ 7 ಗಂಟೆಯ ನಂತರ ನಗರ ದೇವಿಗೆರೆಯಲ್ಲಿ ವಿಸರ್ಜನೆ ಮಾಡುವುದಾಗಿ ಹೇಳಿದರು.