ಮತಗಳ್ಳತನದ ಮೂಲಕ ಬಿಜೆಪಿಗೆ ಅಧಿಕಾರ

KannadaprabhaNewsNetwork |  
Published : Sep 29, 2025, 01:05 AM IST

ಸಾರಾಂಶ

ತಮಿಳುನಾಡಿನಲ್ಲಿ ಚಿತ್ರನಟ ವಿಜಯ ಅವರ ಕಾರ್ಯಕ್ರಮದಲ್ಲಿ ಕಾಲ್ತುಳಿತದಲ್ಲಿ 39 ಜನರ ಸಾವಾಗಿದೆ. ಈ ದುರಂತವಾಗಬಾರದಿತ್ತು. ಕಾಲ್ತುಳಿತ ಪ್ರಕರಣದಲ್ಲಿ ಒಂದು ಮಗು ಸೇರಿದಂತೆ ೩೯ ಜನರು ಮೃತಪಟ್ಟಿರುವುದು ದುರಂತದ ಸಂಗತಿಯಾಗಿದೆ.

ಕೊಪ್ಪಳ: ಮತಗಳ್ಳತನದಿಂದ ದೇಶದಲ್ಲಿ ಬಿಜೆಪಿಗರಿಗೆ ಕಳ್ಳರು ಬಂದರು ಎನ್ನುವಂತಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.

ಕೊಪ್ಪಳದಲ್ಲಿ ಜರುಗಿದ ಕಾಂಗ್ರೆಸ್ ಸಹಿ ಅಭಿಯಾನ ನಂತರ ಮಾತನಾಡಿದ ಅವರು, ಬಿಜೆಪಿಯವರು ಮತಗಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಹಾಗಾಗಿ ಅವರು ಕಳ್ಳರಾಗಿದ್ದಾರೆ ಎಂದರು.

ತಮಿಳುನಾಡಿನಲ್ಲಿ ಚಿತ್ರನಟ ವಿಜಯ ಅವರ ಕಾರ್ಯಕ್ರಮದಲ್ಲಿ ಕಾಲ್ತುಳಿತದಲ್ಲಿ 39 ಜನರ ಸಾವಾಗಿದೆ. ಈ ದುರಂತವಾಗಬಾರದಿತ್ತು. ಕಾಲ್ತುಳಿತ ಪ್ರಕರಣದಲ್ಲಿ ಒಂದು ಮಗು ಸೇರಿದಂತೆ ೩೯ ಜನರು ಮೃತಪಟ್ಟಿರುವುದು ದುರಂತದ ಸಂಗತಿಯಾಗಿದೆ. ಈ ಘಟನೆಯಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದರು.

ಅಲ್ಲಿಯ ಸರ್ಕಾರ ಈಗಾಗಲೇ ಪರಿಹಾರ ಘೊಷಣೆ ಮಾಡಿದೆ. ಮುಖ್ಯಮಂತ್ರಿ ಸ್ಟಾಲಿನ ಮುತುವರ್ಜಿ ವಹಿಸಿ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿ ಕೊಡುತ್ತಿದ್ದಾರೆ. ವಿಜಯ ರ‍್ಯಾಲಿ ಕಾರ್ಯಕ್ರಮ ಮಾಡಲಿ, ಪೂರ್ವ ಸಿದ್ಧತೆಗಳಿಂದ ಮಾಡಬೇಕಿತ್ತು. ಈ ರೀತಿ ಅಮಾಯಕರ ಜೀವ ಹೋಗುವಂತೆ ಕಾರ್ಯಕ್ರಮ ಆಯೋಜನೆ ಮಾಡಬಾರದಿತ್ತು. ಅಲ್ಲದೆ, ಮೃತಪಟ್ಟಂತ ಕುಟುಂಬಗಳಿಗೆ ಭೇಟಿ ನೀಡಿ ಸ್ವಾಂತನ ಹೇಳದಿರುವುದು ಸರಿಯಲ್ಲ ಎಂದರು.

ಕಾರ್ಖಾನೆಯನ್ನು ನಾನೇ ವಿರೋಧ ಮಾಡಿ ಖುದ್ದು ಸಿಎಂ ಬಳಿ ನಿಯೋಗ ತೆಗೆದುಕೊಂಡು ಹೋಗಿದ್ದೇನೆ. ಈ ವೇಳೆ ದಡೇಸ್ಗೂರು ಕೂಡ ಬಂದಿದ್ದ. ಆದರೆ, ಸುಖಾಸುಮ್ಮನೆ ನಮ್ಮ ಮೇಲೆ ಕಮಿಷನ್ ಆರೋಪ ಮಾಡುವುದು ಸರಿಯಲ್ಲ. ಅಲ್ಲದೆ, ಅಂದು ಬಿಜೆಪಿ ಜಿಲ್ಲಾಧ್ಯಕ್ಷ ದಡೇಸ್ಗೂರು ಆರೋಪ ಮಾಡುವಾಗ ಪಕ್ಕದಲ್ಲಿಯೇ ಇದ್ದ ಹಾಲಪ್ಪ ಆಚಾರ, ಹೇಮಲತಾ ನಾಯಕ್, ಶರಣು ತಳ್ಳಿಕೇರಿ ಏಕೆ..? ಎದ್ದು ಹೋದರು. ಆ ಸಂದರ್ಭದಲ್ಲಿನ ವಿಡಿಯೋ ಗಮನಿಸಿ ನೋಡಿ ಶರಣು ತಳ್ಳಿಕೇರಿ ಏಕೆ ನಗುತ್ತಿದ್ದಾನೆ..? ಅಂದರೆ ದಡೇಸ್ಗೂರು ಮಾಡುವ ಆರೋಪದಲ್ಲಿ ಹುರುಳಿಲ್ಲ ಎನ್ನುವುದು ಬಿಜೆಪಿಗರಿಗೂ ಗೊತ್ತಿದೆ ಎಂದರು.

ಬಲ್ಡೋಟಾ ಕಂಪನಿ ಕಾರ್ಖಾನೆ ವಿಷಯದಲ್ಲಿ ಜನರ ಪರವಾಗಿದ್ದೇವೆ ಎಂದರು.

ಸಮೀಕ್ಷೆಯಲ್ಲಿ ಎರಡು ತೊಂದರೆಯಾಗಿತ್ತು. ಸಿಎಂ, ಡಿಸಿಗಳ ಸಭೆಯ ನಂತರ ಸರಿಪಡಿಸಲಾಗಿದೆ. ಈಗಾಗಲೇ 56 ಲಕ್ಷ ಜನರ ಸಮೀಕ್ಷೆ ಮಾಡಲಾಗಿದೆ. ಪ್ರಹ್ಲಾದ ಜೋಶಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಅವರು ಏನೇನೋ ಹೇಳಿಕೆ ನೀಡಿದ್ದಾರೆ. 9 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸಮೀಕ್ಷೆಯಲ್ಲಿ ಭಾಗಿಯಾಗಿವೆ. ಸಮೀಕ್ಷೆಗೆ ಪ್ರಹ್ಲಾದ್ ಜೋಶಿಯವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಅನ್ನೋದಕ್ಕೆ ಮೊದಲ ಉದಾಹರಣೆ ಪ್ರಹ್ಲಾದ್ ಜೋಶಿಯವರೇ. ಹೈಕೋರ್ಟ್‌ ಹೇಳಿದ ಮೇಲೆ ಸಮೀಕ್ಷೆ ಮಾಡ್ತಾಯಿದ್ದೀವಿ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡೋವಾಗ ನಾನು ಭಾಗಿಯಾಗಲ್ಲ ಅನ್ನೋಕಾಗತ್ತಾ...? ಪ್ರಹ್ಲಾದ್ ಜೋಶಿಯವರು ಸಣ್ಣತನ ಪ್ರದರ್ಶನ ಮಾಡಿದಂತಾಗುತ್ತದೆ ಎಂದರು.

ಗವಿಶ್ರೀ ರಾಜಕಾರಣಕ್ಕೆ ಬಳಕೆ ಬೇಡ: ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮಿಗಳು ನಮಗೆ ನಡೆದಾಡುವ ದೇವರಿದ್ದಂತೆ, ಅವರನ್ನು ನಾವು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ