ಕೋಲಾರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ೧೮ ಮಂದಿ ಭಾಜನ

KannadaprabhaNewsNetwork |  
Published : Sep 06, 2024, 01:12 AM IST
೫ಕೆಎಲ್‌ಆರ್-೧೩-೧ಕೋಲಾರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕರಾದ ಜಿ.ಮುನಿಸ್ವಾಮಿ, ವರಲಕ್ಷ್ಮಮ್ಮ, ಎಸ್.ರಮೇಶಬಾಬು, ಹೆಚ್.ಆರ್.ಜ್ಯೋತಿಪ್ರಭಾ, ಸಿ.ಎನ್.ರಮೇಶ್,  ವಿ.ಮುನಿಸ್ವಾಮಿ ಭಾಜನರಾಗಿದ್ದು, ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಕೋಲಾರ ತಾಲೂಕಿನ ಬಾಲಕಿಯರ ಪಿಯು ಕಾಲೇಜಿನ ಎನ್.ಎಸ್.ಭಾಗ್ಯ, ಬಂಗಾರಪೇಟೆ ತಾಲೂಕಿನ ದೊಡ್ಡಚಿನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜಿ.ಟಿ.ರಾಮಚಂದ್ರಪ್ಪ, ಕೆಜಿಎಫ್ ತಾಲೂಕು ಸುಂದರಪಾಳ್ಯ ಸರ್ಕಾರಿ ಪ್ರೌಢಶಾಲೆಯ ಎನ್.ವಿ.ಪರಮೇಶ್, ಮಾಲೂರು ತಾಲೂಕು ಕುಡಿಯನೂರು ಪ್ರೌಢಶಾಲೆಯ ಹೇಮಾವತಿ, ಮುಳಬಾಗಿಲು ತಾಲೂಕು ತಾಯಲೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಡಾ.ಮುಜೀಬ್‌ಖಾನ್, ಶ್ರೀನಿವಾಸಪುರ ತಾಲೂಕಿನ ಪಾತಪಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆರ್.ಲಕ್ಷ್ಮಯ್ಯ ಭಾಜನರಾಗಿದ್ದು, ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರ

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ೧೮ ಶಿಕ್ಷಕರನ್ನು ನಗದು ಪುರಸ್ಕಾರದೊಂದಿಗೆ ಶಾಸಕ ಕೊತ್ತೂರು ಮಂಜುನಾಥ್ ಸನ್ಮಾನಿಸಿದರು.

ಪ್ರೌಢ ಶಾಲಾ ವಿಭಾಗದ ಸಾಧಕ ಶಿಕ್ಷಕರು:

ಕೋಲಾರ ತಾಲೂಕಿನ ಬಾಲಕಿಯರ ಪಿಯು ಕಾಲೇಜಿನ ಎನ್.ಎಸ್.ಭಾಗ್ಯ, ಬಂಗಾರಪೇಟೆ ತಾಲೂಕಿನ ದೊಡ್ಡಚಿನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜಿ.ಟಿ.ರಾಮಚಂದ್ರಪ್ಪ, ಕೆಜಿಎಫ್ ತಾಲೂಕು ಸುಂದರಪಾಳ್ಯ ಸರ್ಕಾರಿ ಪ್ರೌಢಶಾಲೆಯ ಎನ್.ವಿ.ಪರಮೇಶ್, ಮಾಲೂರು ತಾಲೂಕು ಕುಡಿಯನೂರು ಪ್ರೌಢಶಾಲೆಯ ಹೇಮಾವತಿ, ಮುಳಬಾಗಿಲು ತಾಲೂಕು ತಾಯಲೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಡಾ.ಮುಜೀಬ್‌ಖಾನ್, ಶ್ರೀನಿವಾಸಪುರ ತಾಲೂಕಿನ ಪಾತಪಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆರ್.ಲಕ್ಷ್ಮಯ್ಯ ಭಾಜನರಾಗಿದ್ದು, ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಹಿರಿಯ ಪ್ರಾಥಮಿಕ ಶಾಲಾ ಸಾಧಕ ಶಿಕ್ಷಕರು:

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲೂಕು ದೋಣಿಮಡಗು ಶಾಲೆಯ ಬಡ್ತಿ ಮುಖ್ಯಶಿಕ್ಷಕ ಜಿ.ಮುನಿಸ್ವಾಮಿ, ಕೆಜಿಎಫ್ ತಾಲೂಕಿನ ದೊಡ್ಡಕಾರಿ ಗ್ರಾಮದ ಸರ್ಕಾರಿ ವರಲಕ್ಷ್ಮಮ್ಮ, ಕೋಲಾರ ತಾಲೂಕಿನ ಅಂಕತಟ್ಟಿ ಶಾಲೆಯ ಶಿಕ್ಷಕ ಎಸ್.ರಮೇಶಬಾಬು, ಮಾಲೂರು ತಾಲೂಕಿನ ಸಂತೇಹಳ್ಳಿ ಶಾಲೆ ಬಡ್ತಿ ಮುಖ್ಯ ಶಿಕ್ಷಕಿ ಎಚ್.ಆರ್.ಜ್ಯೋತಿಪ್ರಭಾ, ಮುಳಬಾಗಿಲು ತಾಲೂಕು ಕೊಲದೇವಿ ಶಾಲೆಯ ಶಿಕ್ಷಕ ಸಿ.ಎನ್.ರಮೇಶ್, ಶ್ರೀನಿವಾಸಪುರ ತಾಲೂಕು ಯದರೂರು ಶಾಲೆ ಸಹಶಿಕ್ಷಕ ವಿ.ಮುನಿಸ್ವಾಮಿ ಭಾಜನರಾಗಿದ್ದು, ಅವರನ್ನು ಸನ್ಮಾನಿಸಲಾಯಿತು.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕರು:

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲೂಕು ರಾಮಸಂದ್ರ ಶಾಲೆಯ ಆನಂದ್, ಕೆಜಿಎಫ್ ತಾಲೂಕಿನ ಮರವೂರು ಶಾಲೆ ಪ್ರಭಾರಿ ಮುಖ್ಯಶಿಕ್ಷಕ ಬಿ.ನಾರಾಯಣಪ್ಪ, ಕೋಲಾರ ತಾಲೂಕಿನ ಕೊಳಗಂಜನಹಳ್ಳಿ ಶಾಲೆಯ ಶಿಕ್ಷಕಿ ಸಿ.ಮುನಿಯಪ್ಪ, ಮಾಲೂರು ತಾಲೂಕು ಚಿಕ್ಕಶಿವಾರ ಶಾಲೆಯ ಕೆ.ವಿ.ಪ್ರಮೀಳಾ, ಮುಳಬಾಗಿಲು ತಾಲೂಕಿನ ಗೊಟ್ಟುಕುಂಟೆ ಶಾಲೆಯ ವಿ.ಉಮಾ, ಶ್ರೀನಿವಾಪುರ ತಾಲೂಕು ಕೆಂಪರೆಡ್ಡಿವಾರಿಪಲ್ಲಿ ಶಾಲೆಯ ಶಿಕ್ಷಕ ವೈ.ಆರ್.ಲಕ್ಷ್ಮೀನಾರಾಯಣ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಡಿಎ ಮೈತ್ರಿ ಕೂಟದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಪತ್ರಕರ್ತರಿಗೆ ಸ್ಪಂದಿಸುತ್ತಿದ್ದ ಶಾಮನೂರು ಸದಾ ಸ್ಮರಣೀಯ