ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ಇಬ್ರಾಹಿಂಪೂರ ಗ್ರಾಮದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಸಾಯಿ ಮಂದಿರದ 2ನೇ ಜಾತ್ರಾ ಮಹೋತ್ಸವದ ಅಂಗವಾಗಿ, ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನಗೆ ಬಾಲ್ಯದಲ್ಲಿಯೇ ನಮ್ಮ ತಂದೆ-ತಾಯಿ, ಪ್ರೀತಿಯಿಂದ ಬೆಳೆಸಿ ಅವರ ಸದಾಶಯದಂತೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ನನ್ನ ಸುದೀರ್ಘ ಪಯಣದಲ್ಲಿ ಏಳು-ಬೀಳುಗಳನ್ನು ಕಾಣುವ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಆಧುನಿಕ ತಂತ್ರಜ್ಞಾನ ಸ್ಪರ್ಶ ನೀಡುವ ಮೂಲಕ ಹೊಸ ಕಾಯಕಲ್ಪ ನೀಡಿದ್ದೇನೆ. ಸಮಯ ಹಾಗೂ ಪರಿಶ್ರಮದ ಕೆಲಸ ನಂಬಿ ಇನ್ನೂ ಸಿನಿಮಾ ರಂಗದಲ್ಲಿ ಜೀವಂತವಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.ಇಂದು ವರನಟ ಡಾ. ರಾಜಕುಮಾರ ಅವರ ಹುಟ್ಟುಹಬ್ಬ, ನಾನು ಮೊದಲು ರಾಜಕುಮಾರ ಜೊತೆ ನಟಿಸುವ ಮೂಲಕ ಸಿನಿಮಾಗಳಲ್ಲಿ ನಟನಾಗಿ ಬೆಳೆದಿದ್ದೇನೆ ಎಂದರು.
ವೇದಿಕೆ ಮೇಲೆ ತಿಂಥಣಿಯ ಕನಕ ಗುರು ಪೀಠದ ಪೀಠಾಧಿಪತಿ ಸಿದ್ದರಾಮನಂದಪುರಿ ಮಹಾಸ್ವಾಮಿಜಿ, ಹುಲಿಜಂತಿಯ ಮಾಳಿಂಗರಾಯ ಮಹಾರಾಜರು, ಗುರುಮಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮಿಜಿ, ಮಾಲಹಳ್ಳಿಯ ಕೆಂಚರಾಯ ಪೂಜಾರಿ, ಗೊಲ್ಲಪಲ್ಲಿಯ ಶ್ರೀಗಳಾದ ವರದಾನೇಶ್ವರ, ಚಿಗರಳ್ಳಿಯ ಸಿದ್ದ ಕಬೀರಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, ಬಿಜೆಪಿ ಮುಖಂಡರಾದ ನಿತೀನ ಗುತ್ತೇದಾರ, ಲಲಿತಾ ಅನಪೂರ, ಡಾ. ಎಸ್.ಬಿ. ಕಾಮರಡ್ಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾರಾಜ ದಿಗ್ಗಿ, ಕಾಯದರ್ಶಿ ಸಿದ್ದಪ್ಪಾಜಿ, ಭೀಮಾಶಂಕರ ದೋರನಹಳ್ಳಿ, ನಿಜಗುಣ, ಲಕ್ಷ್ಮಿಕಾಂತ ಪಾಟೀಲ್ ಮದ್ರಿಕಿ, ಮಲ್ಲಣಗೌಡ ಹಗರಟಗಿ, ಜಹಿರುದ್ದೀನ್ ಸವೇರಾ, ಭೀಮಾಶಂಕರ ಇಬ್ರಾಹಿಂಪೂರ, ಖಾಜಾ ಮೈನುದ್ದಿನ್ ನಾಯ್ಕಲ್, ಹೊಸದುರ್ಗ ದಿಲೀಪಕುಮಾರ ಸೇರಿದಂತೆ ಹಲವು ಮಠಾಧೀಶರು, ಮುಖಂಡರು ಇದ್ದರು. ಕಲಾವಿದರಿಗೆ ವೇದಿಕೆ ಕಲ್ಪಿಸಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಾವಂತ ಕಲಾವಿದರಿದ್ದಾರೆ, ಮಾನವ ಸಂಪನ್ಮೂಲಕ್ಕೆ ಯಾವುದೆ ಕೊರತೆಯಿಲ್ಲ. ಆದರೆ, ಅವರಿಗೆ ಸೂಕ್ತ ಸಹಾಯ, ಪ್ರೋತ್ಸಾಹ ನೀಡಿ, ವೇದಿಕೆ ಕಲ್ಪಿಸಿ ಕೊಡಬೇಕು. ಅಂದಾಗ ಮಾತ್ರ ಅವರು ಕೂಡ ತಮ್ಮ ಕಲೆ ಪ್ರದರ್ಶನ ಮಾಡಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.