ಜನರಲ್ಲಿ ಹಣಕ್ಕೆ ಕೊರತೆಯಿಲ್ಲ, ಆದರೆ ಸಂಸ್ಕಾರಕ್ಕಿದೆ

KannadaprabhaNewsNetwork |  
Published : May 25, 2025, 11:46 PM ISTUpdated : May 25, 2025, 11:47 PM IST
೨೩ ಟಿವಿಕೆ ೩ - ತುರುವೇಕೆರೆ ತಾಲೂಕಿನ ಚಿಮ್ಮನಹಳ್ಳಿ ಮುನಿಶ್ವರಸ್ವಾಮಿ ಮಹಾಸಂಸ್ಥಾನ ದಾಸೋಹ ಮಠ, ಮುನೀಶ್ವರ ಸ್ವಾಮಿ ಛಾರಿಟಿ ಮತ್ತು ಶೈಕ್ಷಣಿಕ ಟ್ರಸ್ಟ್, ಮುನೀಶ್ವರ ಗುರುಕುಲ ವಿದ್ಯಾಮಂದಿರ ದಶಮಾನೋತ್ಸವ ಮುನಿಶ್ರೀ ದೀಪ್ತಿ ರತ್ನ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ, ಅಪರ್ಣಾದೇವಿ ಪುಷ್ಕರಣೆ ಮತ್ತು ವಿದ್ಯಾರ್ಥಿನಿಲಯ ಶಿಲಾನ್ಯಾಸ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಈಗ ಜನರಲ್ಲಿ ಹಣಕ್ಕೇನೂ ಕೊರತೆ ಇಲ್ಲ. ಆದರೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ ಎಂದು ಬೆಂಗಳೂರಿನ ಅಮೃತ ಸಿಂಚನ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹರೀಶ್ ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಈಗ ಜನರಲ್ಲಿ ಹಣಕ್ಕೇನೂ ಕೊರತೆ ಇಲ್ಲ. ಆದರೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ ಎಂದು ಬೆಂಗಳೂರಿನ ಅಮೃತ ಸಿಂಚನ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹರೀಶ್ ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ಚಿಮ್ಮನಹಳ್ಳಿ ಮುನೀಶ್ವರಸ್ವಾಮಿ ಮಹಾಸಂಸ್ಥಾನ ದಾಸೋಹ ಮಠ, ಮುನೀಶ್ವರ ಸ್ವಾಮಿ ಚಾರಿಟಿ ಮತ್ತು ಶೈಕ್ಷಣಿಕ ಟ್ರಸ್ಟ್, ಮುನೀಶ್ವರ ಗುರುಕುಲ ವಿದ್ಯಾಮಂದಿರದ ದಶಮಾನೋತ್ಸವದ ಅಂಗವಾಗಿ ಮುನಿಶ್ರೀ ದೀಪ್ತಿರತ್ನ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ, ಅಪರ್ಣಾದೇವಿ ಪುಷ್ಕರಣೆ ಮತ್ತು ವಿದ್ಯಾರ್ಥಿನಿಲಯ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಭಾರತೀಯ ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ತನ್ನದೇ ಆದ ವಿಶೇಷ ಸ್ಥಾನಮಾನ ಇದೆ. ಆದರೆ ಆಧುನಿಕ ಜಗತ್ತಿನ ನಾಗರೀಕತೆಗೆ ಮಾರು ಹೋಗಿ ನಮ್ಮ ಮೂಲ ನೆಲೆಯ ಬೇರು ಅಲುಗಾಡುತ್ತಿದೆ. ಬ್ರಿಟಿಷರು ಭಾರತಕ್ಕೆ ಆಗಮಿಸಿ ಮಕಾಲೆ ಶಿಕ್ಷಣದಿಂದಾಗಿ ಸಮಾಜದಲ್ಲಿ ಒಡೆದು ಆಳುವಂತಹ ಶಿಕ್ಷಣವನ್ನು ಕಲಿಯುವಂತಾಗಿದೆ. ನಮ್ಮ ಹಿಂದಿನ ಗುರುಕುಲದ ಶಿಕ್ಷಣದಲ್ಲಿ ಎಲ್ಲರನ್ನು ಒಟ್ಟಾಗಿ ಸೇರಿಸುವಂತಹ ಶಿಕ್ಷಣ ನೀಡುತ್ತಿದ್ದರು. ಮುಂದಿನ ಪೀಳಿಗೆಗೆ ಸಂಸ್ಕಾರಯುತ ಮೌಲ್ಯಯುತ ಶಿಕ್ಷಣವನ್ನು ನೀಡಬೇಕಿದೆ ಎಂದರು. ದಿವ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದ ಮಾಗಡಿ ತಾಲೂಕಿನ ಪಾಲನಹಳ್ಳಿಯ ಶ್ರೀ ಶನೈಶ್ಚರಸ್ವಾಮಿ ಮಠದ ಮಠಾಧ್ಯಕ್ಷರಾದ ಡಾ.ಸಿದ್ದರಾಜು ಸ್ವಾಮೀಜಿ, ನಿವೃತ್ತ ಅಧಿಕಾರಿಯಾಗಿರುವ ಸಿ.ಎ.ಶಿವಪ್ಪ ಮತ್ತು ಅವರ ಕುಟುಂಬದವರು ನಗರದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆಯದೆ ಕುಗ್ರಾಮವಾಗಿರುವ ಚಿಮ್ಮನಹಳ್ಳಿಯಲ್ಲಿ ಮುನೀಶ್ವರ ಶಿಕ್ಷಣ ಟ್ರಸ್ಟ್ ತೆರೆಯುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆದಿರುವುದು ಇತರೆಯವರಿಗೆ ಮಾದರಿಯಾಗಿದೆ. ಈ ಶಿಕ್ಷಣ ಸಂಸ್ಥೆ ಮತ್ತಷ್ಟು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಅಮೃತ ಸಿಂಚನ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಮುಖ್ಯ ಮಾಹಿತಿ ಅಧಿಕಾರಿ ಮಧುಕಿರಣ್, ಸಾರಿಗೆ ಅಧಿಕಾರಿ ಚಿನ್ನಸ್ವಾಮಿ, ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್, ಸೋಮಶೇಖರ್ ದಾಸ್, ಗುತ್ತಿಗೆದಾರರಾದ ಮುರುಳೀಧರ್, ಮಹಾಲಿಂಗಪ್ಪ, ಸಿ.ಎ.ರಂಗಯ್ಯ, ಗಂಗಣ್ಣ, ಎಸ್.ಡಿ.ಪ್ರಜ್ವಲ್, ರಂಗಸ್ವಾಮಿ, ಎಂ.ವಿ.ನಾಗಣ್ಣ ಮುನೀಶ್ವರ ಟ್ರಸ್ಟ್ ಪದಾಧಿಕಾರಿಗಳು ಇದ್ದರು. ಈ ವೇಳೆ ಬೆಂಗಳೂರಿನ ಆಧ್ಯಾತ್ಮಿಕ ಚಿಂತಕರು ಹಾಗೂ ಮೋದಿ ವಿಚಾರ್ ಮಂಚ್‌ನ ವಿಜಯ್ ಪದ್ಮನಾಭ, ಮೈಸೂರು ಶಂಕರ ವಿಲಾಸ ಸಂಸೃತ ಪಾಠಶಾಲೆ ಪ್ರಾಂಶುಪಾಲ ಪ್ರೊ. ವಿದ್ವಾನ್ ಶ್ರೀನಿವಾಸಮೂರ್ತಿ ಹಾಗೂ ತುಮಕೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ಕೆ.ಸಿ.ನರಸಿಂಹಮೂರ್ತಿ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಮುಖ್ಯ ಲೆಕ್ಕಾಧಿಕಾರಿ ಎಂ.ಆರ್.ಜಯರಾಮ್ ರವರಿಗೆ ಮುನಿಶ್ರೀ ದೀಪ್ತಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ೬೫ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮುನಿಶ್ವರ ಕ್ಷೇತ್ರ ಸಂಸ್ಥಾಪಕ ಶಿವಪ್ಪರನ್ನು ಶಾಲಾ ಸಿಬ್ಬಂದಿ ಹಾಗೂ ವಿವಿಧ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದ ನಂತರ ತುಮಕೂರಿನ ಮಾರುತಿ ಕಲಾಸಂಘದಿಂದ ದಕ್ಷಯಜ್ಞ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು