ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದ ತಾಲೂಕು ಕಚೇರಿಯ ತಹಸೀಲ್ದಾರ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ತಾಲೂಕು ಕಚೇರಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜೀತ ಪದ್ಧತಿ ನಿರ್ಮೂಲನ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀತ ಪದ್ಧತಿ ಪ್ರಕರಣ ಇಳಿಕೆಒಂದು ಕಾಲದಲ್ಲಿ ಜೀತ ಪದ್ಧತಿ ಹೆಚ್ಚಾಗಿತ್ತು. ಒಬ್ಬ ಮನುಷ್ಯನ ದೈಹಿಕ ಶಕ್ತಿಯನ್ನು ದುರುಪಯೋಗಪಡಿಸಿಕೊಂಡು ದೊಡ್ಡವರು ಹಾಗೂ ಮಕ್ಕಳನ್ನು ಆರ್ಥಿಕವಾಗಿ ಒಂದು ಮೊತ್ತಕ್ಕೆ ಜೀತಕ್ಕೆ ಇಟ್ಟುಕೊಂಡು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದರು. ಪ್ರಸ್ತುತ ಸಮಾಜದಲ್ಲಿ ಕಾನೂನಿನ ಜಾಗೃತಿ ಹೆಚ್ಚಾದಂತೆ ಜೀತ ಪದ್ಧತಿ ಕಾಲಕ್ರಮೇಣ ಕಡಿಮೆಯಾಗುತ್ತಾ ಬಂದಿದೆ ಎಂದರು.
ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುವುದು, ೧೪ ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ದುಡಿಸಿ ಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಮಾಜದಲ್ಲಿ ಕಾನೂನು ಸದ್ಬಳಕೆ ಆಗಬೇಕು ಹೊರತು ದುರ್ಬಳಕೆಯಾಗಬಾರದು, ಜೀತ ಪದ್ಧತಿ ಕಡಿಮೆ ಭಿಕ್ಷಾಟನೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಅರಿವು ಪಡೆದು ಸುಸಂಸ್ಕೃತರಾಗಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.