ಕನ್ನಡಪ್ರಭ ವಾರ್ತೆ ಹೊಸನಗರ
ಪಟ್ಟಣದ ಈಡಿಗ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಅಭಿವೃದ್ಧಿ ಯೋಜನೆಗಳು ಮಧ್ಯವರ್ತಿಗಳ ಪಾಲು ಆಗದಂತೆ ನೋಡಿಕೊಳ್ಳಬೇಕು. ಅರ್ಹ ಫಲಾನುಭವಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.
ಸಮಸ್ಯೆ ಪರಿಹಾರ:ರಾಜ್ಯ ಸರ್ಕಾರಿ ನೌಕರರ ಹಕ್ಕು ಹಾಗೂ ಅವರ ವೇತನ ಕುರಿತ ವರದಿಯನ್ನು ಸರ್ಕಾರದ ಗಮನ ಸೆಳೆದು ಶೀಘ್ರದಲ್ಲಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಇಲ್ಲಿನ ಗುರುಭವನ ನವೀಕರಣ, ಪಟ್ಟಣದಲ್ಲಿ ನೌಕರರ ಸಂಘಕ್ಕೆ ನಿವೇಶನ ಹಾಗೂ ಕಟ್ಟಡ ಮಂಜೂರಾತಿ ಬಗ್ಗೆ ಅವರು ಶೀಘ್ರದಲ್ಲಿ ಸರ್ಕಾರಿ ಮಟ್ಟದಲ್ಲಿ ಮಾತನಾಡುವ ಆಶ್ವಾಸನೆ ನೀಡಿದರು. ನೌಕರರ ಸಂಘದಲ್ಲಿ ಮಹಿಳಾ ಮೀಸಲಾತಿ ಕಡಿಮೆ ಇದ್ದಂತೆ ಇದೆ. ಮಹಿಳಾ ನೌಕರರ ರಕ್ಷಣೆ, ಹಿತಾಸಕ್ತಿಗಾಗಿ ಮಹಿಳೆಯರಿಗೆ ತಮ್ಮ ಸಂಘದಲ್ಲಿ ಶೇ.35ರಷ್ಟು ಮೀಸಲಾತಿ ನೀಡುವಂತೆ ಅವರು ಕೋರಿದರು.
ಇದೇ ವೇಳೆಯಲ್ಲಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿಕಟ ಪೂರ್ವ ಅಧ್ಯಕ್ಷರಿಗೆ, ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
- - -
ಹೊಸನಗರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಸಮ್ಮೇಳನವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.