
ನಗರದ ಹೊರವಲಯದ ಶ್ರೀ ಬಸವ ತತ್ವ ಪೀಠದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ
ಸಮಸಮಾಜವನ್ನು ನಿರ್ಮಾಣ ಮಾಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಅದರಲ್ಲಿ ಯಶಸ್ವಿಯಾದವರು ಬಸವಣ್ಣನವರು. ಇಂದು ಮಠಗಳು ಜನ ಸಾಮಾನ್ಯರ ಬದುಕು ಕಟ್ಟಿಕೊಡುವ ಮೂಲಕ ಜನಪರ ಕೆಲಸ ಮಾಡುತ್ತಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಹೊರವಲಯದ ಶ್ರೀ ಬಸವ ತತ್ವ ಪೀಠದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಅಲ್ಲಲ್ಲಿ ಜಾತಿ ಜಾತಿ ಹೆಸರಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಗೊಂದಲಕ್ಕೂ ಮುನ್ನ ಬಸವಣ್ಣನವರ ಸಮಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.ಹಿಂದೆ ನಮ್ಮ ದೇಶದಲ್ಲಿ ಅವಿದ್ಯಾವಂತರ ಸಂಖ್ಯೆ ಹೆಚ್ಚಿದ್ದಾಗ ಅಪರಾಧಗಳ ಸಂಖ್ಯೆ ಕಡಿಮೆ ಇತ್ತು. ಆದರೆ ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆಲ್ಲಾ ಅಪರಾಧಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಬಗ್ಗೆ ಪ್ರತಿ ಕುಟುಂಬ ಚಿಂತನೆ ನಡೆಸ ಬೇಕಾಗಿದೆ. ಇದನ್ನೆಲ್ಲಾ ನೋಡಿದಾಗ ನಾವು ಇಂದು ವಿದ್ಯಾವಂತರಾಗುತ್ತಿದ್ದೇಯೇ ಹೊರತು ಸುಸಂಸ್ಕೃತರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬಸವತತ್ವ ಪೀಠದಲ್ಲಿ ಶುಕ್ರವಾರದಿಂದ ಎರಡು ದಿನಗಳು ಆರಂಭವಾದ ಚಂದ್ರಶೇಖರ ಮಹಾಸ್ವಾಮಿಗಳ 171ನೇ ಜಯಂತಿ ಹಾಗೂ 30 ಸಂಸ್ಮರಣೆ ಮತ್ತು ಬಸವತತ್ವ ಸಮಾವೇಶ ಮತ್ತು ಪೀಠದ ಸುವರ್ಣ ಮಹೋತ್ಸವದ ಅಂಗವಾಗಿ ಎಐಟಿ ವೃತ್ತ ದಲ್ಲಿ ವಿವಿಧ ಜಾನಪದ ಕಲಾತಂಡಗಳಾದ ವೀರಗಾಸೆ, ನಂದಿಕೋಲು ಕುಣಿತ, ಸ್ಥಳೀಯ ವಾದ್ಯಗಳು ಭಾಗವಹಿಸಿ ಮೆರವಣಿಗೆ ನಡೆಸಲಾಯಿತು.
ಸದ್ಭಕ್ತರು ಬಸವಣ್ಣನವರ ವಸ್ತುಗಳನ್ನು ಹೆಗಲ ಮೇಲೆ ಹಾಕಿಕೊಂಡು ವಾದ್ಯಗಳ ಲಯಕ್ಕೆ ತಕ್ಕಂತೆ ನೃತ್ಯ ಮಾಡುವ ಮೂಲಕ ಧಾರ್ಮಿಕತೆ ಆಚರಣೆಗೆ ಮೆರಗು ನೀಡುವಂತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಂಜೆ ಸಾಮೂಹಿಕ ಗಾಯನ ಮತ್ತು ಬಸವತತ್ವ ಸಮಾವೇಶ ಜರುಗಿತು.
...ಬಾಕ್ಸ್...