ಹುಬ್ಬಳ್ಳಿ:
ಜನಸಾಮಾನ್ಯರಿಗೆ ಅತ್ಯಂತ ದುಬಾರಿಯಾಗಿರುವ ಹೃದಯ ಶಸ್ತ್ರಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಸಿಗುವಂತಾಗಬೇಕು. ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುವಂತಾಗಿ ವೈದ್ಯಕೀಯ ಕ್ಷೇತ್ರದ ಸೇವಾ ಹಾದಿಯಲ್ಲಿ ಬಾಲಾಜಿ ಆಸ್ಪತ್ರೆ ಇನ್ನಷ್ಟು ಮೈಲಿಗಲ್ಲು ಸಾಧಿಸಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಬಾಲಾಜಿ ಆಸ್ಪತ್ರೆಯಲ್ಲಿ ನಾರಾಯಣ ಹೆಲ್ತ್ ಸಹಭಾಗಿತ್ವದಲ್ಲಿ ಆರಂಭಿಸಿರುವ ಅತ್ಯಾಧುನಿಕ ಸೌಲಭ್ಯದ ಸುಸಜ್ಜಿತ ಹೃದ್ರೋಗ ಘಟಕವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ್ ಮಾತನಾಡಿ, ನರರೋಗದ ಜತೆಗೆ ಹೃದ್ರೋಗಿಗಳಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್‌ನ ಸಹಭಾಗಿತ್ವದಲ್ಲಿ ಆರಂಭಿಸಿರುವ ಈ ಹೃದ್ರೋಗ ಘಟಕದಲ್ಲಿ ಸುಸಜ್ಜಿತ ಕ್ಯಾಥಲಾಬ್, ಇಸಿಜಿ, ಇಕೋ, ಟಿಎಂಟಿ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಹೃದ್ರೋಗ ತಡೆಗಟ್ಟುವಿಕೆ ಮತ್ತು ರೋಗ ನಿರ್ಣಯದಿಂದ ಹಿಡಿದು ಸಂಕೀರ್ಣ ಶಸ್ತ್ರಚಿಕಿತ್ಸೆ ಒದಗಿಸಲು ನಮ್ಮ ಆಸ್ಪತ್ರೆ ಸನ್ನದ್ಧವಾಗಿದೆ ಎಂದು ತಿಳಿಸಿದರು.ಈ ವೇಳೆ ನಾರಾಯಣ ಹೆಲ್ತ್‌ನ ಕಾರ್ಡಿಯೋಲಜಿ ಮುಖ್ಯಸ್ಥ ಡಾ. ವಿವೇಕಾನಂದ ಗಜಪತಿ, ಹೃದ್ರೋಗ ತಜ್ಞ ಡಾ. ರವಿ ಜೈನಪುರ, ಕಾರ್ಡಿಯಾಕ್ ಅರವಳಿಕೆ ತಜ್ಞ ಡಾ. ಗಣೇಶ್ ನಾಯ್ಕ್ ಬಾಲಾಜಿ ಆಸ್ಪತ್ರೆ ವೈದ್ಯ ಡಾ. ಎನ್. ಆಕಾಶ್, ಡಾ. ಅಬೀದ್ ಹುಸೇನ್, ಡಾ. ಜನಮೇಜಯ, ಡಾ. ಆನಂದ್ ಕೊಪ್ಪದ, ಡಾ. ನಿತಿನ್ ಕಡಕೋಳ, ಡಾ. ಇತಿ ಸಿಂಗ್, ಡಾ. ಅಭಯಾoಬಿಕ ಇನ್ನಿತರರು ಉಪಸ್ಥಿತರಿದ್ದರು. ಹೃದ್ರೋಗ ಘಟಕದಲ್ಲಿ ದೊರೆಯುವ ಸೌಲಭ್ಯ
ಕೋರೋನರಿ ಅಂಜಿಯೋಗ್ರಾಮ್ (C.A.G), ಪರ್ಕುಟೇನೀಯಸ್ ಟ್ರಾನ್ಸ್ ಲೂಮಿನಲ್ ಕೋರೋನರಿ ಎಂಜಿಯೋಪ್ಲಾಸ್ಟಿ (PTCA), ಟೆಂಪರೋರಿ ಪೇಸ್ ಮೇಕರ್ ಇಪ್ಲ್ಯಾಂಟೇಶನ್ (TPI), ಪರ್ಮನೆಂಟ್ ಪೇಸ್ ಮೇಕರ್ ಇಪ್ಲ್ಯಾಂಟೇಶನ್ (PPI) ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿದೆ.