ಕನ್ನಡಪ್ರಭ ವಾರ್ತೆ ಟೇಕಲ್
ಒಕ್ಕಲಿಗ ಸಮುದಾಯದವರು ಭೇದಭಾವ ಮರೆತು ಒಗ್ಗೂಡಿದರೆ ಮಾತ್ರ ಅವರಿಗೆ ಸರ್ಕಾರದಿಂದ ಬರುವ ಸೌಲಭ್ಯ, ಸಂಪನ್ಮೂಲ ಪಡೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡರು ಙೇಳಿದರು.ಅವರು ಟೇಕಲ್‌ನ ಕೆ.ಜಿ.ಹಳ್ಳಿಯ ವಕ್ಕಲಿಗರ ಜಾಗೃತಿ ಸಂಘ(ರಿ) ವತಿಯಿಂದ ೫೧೫ನೇ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗೂ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡುತ್ತಿದ್ದರು.
ಸಂಘಕ್ಕೆ ನಿವೇಶನ ಕಲ್ಪಿಸಲು ಯತ್ನಈ ಸಂಘದವರು ಕಟ್ಟಡ ಕಟ್ಟಲು ನಿವೇಶನಕ್ಕೆ ಬೇಡಿಕೆ ಇಟ್ಟಿದ್ದು ಅದನ್ನು ಶೀಘ್ರದಲ್ಲಿ ಅದರ ಬಗೆ ಸರ್ಕಾರದಲ್ಲಿ ಚರ್ಚಿಸಿ ಅನುಕೂಲ ಕಲ್ಪಿಸಲು ಪ್ರಯತ್ನಿಸುತ್ತೇನೆ. ಸತತ ೪ ವರ್ಷಗಳಿಂದ ವಿವಿಧ ರೀತಿಯಾದ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಭಾಗದ ಜನರು ಇವರ ಕಾರ್ಯದ ಬಗ್ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ನಾನು ಮುಂದೆಯು ಸಹ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ಸಿದ್ದನಿದ್ದೇನೆ ಎಂದರು. ಒಕ್ಕಲಿಗರ ಜಾಗೃತಿ ಸಂಘದ ಅಧ್ಯಕ್ಷರಾದ ಬೆಟ್ಟಹಳ್ಳಿ ನಾರಾಯಣಸ್ವಾಮಿರವರು ಮಾತನಾಡಿ, ನಮ್ಮ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಸರ್ಕಾರ ಉಚಿತ ನಿವೇಶನ ನೀಡಿದರೆ ನಮ್ಮ ಸಂಘದಿಂದ ಮತ್ತು ಸಾರ್ವಜನಿಕರ ಸಹಕಾರದಿಂದ ಕಟ್ಟಡ ನಿರ್ಮಿಸಿಕೊಳ್ಳಲು ಸಿದ್ದರಿದ್ದೇವೆ. ಸಮುದಾಯದ ಮುಖಂಡರುಗಳು ಟೇಕಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲು ಬೇಡಿಕೆ ಇಟ್ಟಿದ್ದು ಅವರ ಬೇಡಿಕೆಗೆ ಪ್ರಯತ್ನ ಪಡುತ್ತೇನೆ ಎಂದರು.ಇದಕ್ಕೂ ಮುಂಚೆ ಸಂಘದ ಕಛೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಶಾಸಕರು ಕೆ.ವೈ.ನಂಜೇಗೌಡರು ಸಂಘದ ಅಧ್ಯಕ್ಷ ಬೆಟ್ಟಹಳ್ಳಿ ನಾರಾಯಣಸ್ವಾಮಿ ಹಾಗೂ ಸಮುದಾಯದ ಮುಖಂಡರುಗಳ ಜೊತೆಗೂಡಿ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಕೆ.ಎಸ್.ವೆಂಕಟೇಶಗೌಡ, ಹೆಚ್.ಎಂ.ರಮೇಶ್‌ಗೌಡ, ಪ್ರಗತಿಶ್ರೀನಿವಾಸ್, ಬಿ.ಜಿ.ಸತೀಶಬಾಬು, ಆನೇಪುರ ಹನುಮಂತಪ್ಪ, ಎನ್.ಗೋಪಾಲಪ್ಪ, ಬಿ.ಜಿ.ಮುನಿಸ್ವಾಮಿಗೌಡ, ಬನಹಳ್ಳಿ ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಮಂಜುನಾಥ, ಹುಣಸಿಕೋಟೆ ಶ್ರೀನಿವಾಸ್, ಶಶಿಧರ (ಬದ್ರಿ), ಪಿಎಸಿಎಸ್ ಅಧ್ಯಕ್ಷ ಡಿ.ಆರ್.ರವೀಂದ್ರ, ಸಂಘದ ಅಧ್ಯಕ್ಷ ಬೆಟ್ಟಹಳ್ಳಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಕೆ.ಎನ್.ನಂಜುಂಡಪ್ಪ, ಪ್ರಧಾನ ಕಾರ್ಯದರ್ಶಿ ವೈ.ಸಿ.ರಾಮಕೃಷ್ಣ, ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.