ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರೋಟರಿ ಕ್ಲಬ್ ವಿಷನ್ ವತಿಯಿಂದ ತಾಲೂಕಿನ ಶ್ರವಣಬೆಳಗೊಳದ ಸರ್ಕಾರಿ ಪಿ.ಯು. ಕಾಲೇಜಿನ ಮುಂಭಾಗ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಒಂದು ಸೂಚನಾ ಫಲಕವನ್ನು ಅಳವಡಿಸಲಾಯಿತು.ಈ ಸೂಚನಾ ಫಲಕವನ್ನು ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರಘುಪತಿ ಉದ್ಘಾಟನೆಯನ್ನು ಮಾಡಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ರಸ್ತೆ ನಿಯಮವನ್ನು ಉಲ್ಲಂಘಿಸುತ್ತ ಈ ಹಲವಾರು ಜನ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಅವರ ಕುಟುಂಬಗಳು ಬೀದಿಗೆ ಬೀಳುತ್ತಿರುತ್ತವೆ. ಮತ್ತು ೧೮ ವರ್ಷ ದಾಟುವ ಮೊದಲು ಯಾರೂ ಸಹ ವಾಹನಗಳನ್ನು ಚಲಾವಣೆ ಮಾಡಬಾರದು. ಕಡ್ಡಾಯವಾಗಿ ಹೆಲ್ಮೆಟ್ ಅನ್ನು ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಇದೇ ಸಂದರ್ಭದಲ್ಲಿ ಶ್ರವಣಬೆಳಗೊಳದ ಸರ್ಕಾರಿ ಪಿಯು ಕಾಲೇಜಿಗೆ ೩೫,೦೦೦ ಬೆಲೆಬಾಳುವ ಒಂದು ಶುದ್ಧ ನೀರಿನ ಘಟಕವನ್ನು ನೀಡಲಾಯಿತು. ಉದ್ಘಾಟನೆಯನ್ನು ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್ ಆದಂತಹ ಸಿ ಎ ದೇವಾನಂದ ಅವರು ಉದ್ಘಾಟನೆಯನ್ನು ಮಾಡಿ ಇತ್ತೀಚಿನ ದಿನಗಳಲ್ಲಿ ನೀರಿನ ಅವಶ್ಯಕತೆ ತುಂಬಾ ಇದೆ. ನಾವು ಶುದ್ಧ ನೀರನ್ನು ಬಳಸದೆ ನೀರನ್ನು ಶುದ್ಧಗೊಳಿಸಿ ಎಲ್ಲರೂ ಕಾಯಿಲೆಗೆ ಈಡಾಗುತ್ತಿದ್ದಾರೆ. ಸಮಾಜಕ್ಕೆ ಶುದ್ಧ ಪರಿಸರವನ್ನು ಉಳಿಸುವ ಅವಶ್ಯಕತೆ ಇದ್ದು, ಶುದ್ಧ ಪರಿಸರವನ್ನು ಉಳಿಸಿದ್ದಲ್ಲಿ ಶುದ್ಧವಾದ ಗಾಳಿ ನೀರು ನಮಗೆ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.ರೋಟರಿ ಕ್ಲಬ್ ಅಧ್ಯಕ್ಷರಾದ ಬಿ. ವಿ. ವಿಜಯ ಅವರು ಮಾತನಾಡಿ, ರೋಟರಿ ಕ್ಲಬ್ ಚನರಾಯಪಟ್ಟಣ ವಿಷನ್ ತಾಲೂಕಿನಲ್ಲಿ ಪರಿಸರದ ಬಗ್ಗೆ ಮತ್ತು ಸರ್ಕಾರಿ ಶಾಲೆಗಳಿಗೆ ಕೆಲವೊಂದು ಉಪಯುಕ್ತ ವಿದ್ಯಾಭ್ಯಾಸಕ್ಕೆ ಬೇಕಾಗುವ ಸಲಕರಣೆಗಳನ್ನು ನೀಡುತ್ತಾ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿರುತ್ತದೆ ಎಂದು ತಿಳಿಸಿದರು.
ಕಾರ್ಯದರ್ಶಿಗಳಾದ ಡಾ. ಕುಮದಾ ಎಸ್, ಎಸ್. ಖಜಾಂಚಿಗಳಾದ ನಟರಾಜ್, ಜಿಲ್ಲಾ ಉಪ ಗೌರ್ನರ್ ನಿರ್ಮಲ್ ಕುಮಾರ್ ಜೈನ್, ಜಯ ರಾಘವೇಂದ್ರ ಶಿವನಂಜೆಗೌಡ, ಮಮತಾಷೆಹೆಚ್. ಆರ್., ಕಿಶೋರ್ ಕುಮಾರ್, ರೂಪಾವತಿ, ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ಹಾಜರಿದ್ದರು.