ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1980ರಿಂದ ಇದು ಚರ್ಚೆಯಾಗುತ್ತಲೆ ಇದೆ. ಇದನ್ನು ಇಷ್ಟು ದೀರ್ಘದವರೆಗೆ ಮುಂದುವರೆಸಬಾರದಿತ್ತು. ಇದೀಗ ಕೇಂದ್ರದಿಂದ ನಡೆಯಲಿರುವ ಜಾತಿ-ಗಣತಿ ಒಳಗಾಗಿ ಇದನ್ನು ವೀರಶೈವ ಲಿಂಗಾಯತ ಮಹಾಸಭಾದವರು ಬಗೆಹರಿಸಬೇಕು. ಸಮಾಜದ ಹಿತದೃಷ್ಟಿಯಿಂದ ವೀರಶೈವ ಲಿಂಗಾಯತ ಮಹಾಸಭೆ ಈ ಕೆಲಸ ಮಾಡಬೇಕು. ಬೇರೆ ಬೇರೆ ವರ್ಗದವರಲ್ಲಿ ಮತದಾನವನ್ನು ಏರ್ಪಡಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
12ನೇ ಶತಮಾನದಲ್ಲಿ ಮೊದಲ ಕಾಲಘಟ್ಟದಲ್ಲಿ ಹಾಗೂ 16ನೇ ಶತಮಾನದಲ್ಲಿ ಎರಡನೇ ಕಾಲಘಟ್ಟದಲ್ಲಿ ಈ ಸಮಸ್ಯೆ ಇತ್ತು. ಇದೀಗ ಮೂರನೇ ಕಾಲಘಟ್ಟದಲ್ಲಿ 1975ರ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ. ಈಗಲಾದರೂ ವೀರಶೈವ- ಲಿಂಗಾಯತ ಮಹಾಸಭಾ ಇದನ್ನು ಬಗೆಹರಿಸಬೇಕು. ವೀರಶೈವ ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ ಇದು ಸ್ವತಂತ್ರ ಧರ್ಮ, ಹಾಗಂತ ಇದು ಹಿಂದೂ ವಿರೋಧಿಯಲ್ಲ. ಹಿಂದೂ ಧರ್ಮದ ಬಹುಸಂಖ್ಯಾತ ಜನರು ಶಿವನ ಭಕ್ತರಾಗಿದ್ದಾರೆ. ವೀರಶೈವ ಲಿಂಗಾಯತರು ಶಿವನ ಭಕ್ತರು. ಹಿಂದೂ ಧರ್ಮವಲ್ಲ, ಅದು ಹಿಂದೂ ಸಂಸ್ಕೃತಿ ಇದೆ. ಆರ್ಯ ಮತ್ತು ದ್ರಾವಿಡ ಧರ್ಮಗಳ ಸಂಸ್ಕೃತಿಯ ಸಂಗಮವೇ ಈ ಹಿಂದೂ ಸಂಸ್ಕೃತಿ ಎಂದು ವಿವರಿಸಿದರು.ವಿಶ್ವಗುರು ಬಸವಣ್ಣನವರ ಸಾಮಾಜಿಕ, ಧಾರ್ಮಿಕ ಆದರ್ಶಗಳನ್ನು ಯಾರೂ ಪಾಲನೆ ಮಾಡುತ್ತಿಲ್ಲ. ಬಸವಣ್ಣನವರ ಆದರ್ಶಗಳು ವೈಯಕ್ತಿಕ ಲಾಭಕ್ಕಾಗಿ, ರಾಜಕೀಯವಾಗಿ ಬಳಕೆ ಆಗುತ್ತಿರುವುದು ನೋವಿನ ಸಂಗತಿ. ಬಸವಣ್ಣನವರ ಆದರ್ಶಗಳನ್ನು ಪಾಲನೆ ಮಾಡಲು ಆಗುತ್ತದಾ?, ಅದನ್ನು ಪಾಲನೆ ಮಾಡಿದರೆ ಅವರು ಮಹಾನ ಪುರುಷರಾಗುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಸ್.ಪಾಟೀಲ, ಆರ್.ಎಸ್.ಪಾಟೀಲ, ಪ್ರಭು ಬೆಳ್ಳಿ ಉಪಸ್ಥಿತರಿದ್ದರು.