ವಿಕಲಚೇತನರು ಸ್ವಾಭಿಮಾನಿಗಳು

KannadaprabhaNewsNetwork | Published : Dec 5, 2024 12:30 AM

ಸಾರಾಂಶ

ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ ವ್ಯಕ್ತಿಗಳಲ್ಲಿ ಅಗೋಚರವಾದ ಶಕ್ತಿ ಇದ್ದು, ಅದರಿಂದಾಗಿ ಪರರ ಸಹಾಯವಿಲ್ಲದೇ ತಮ್ಮ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಂಡು ಸ್ವಾಭಿಮಾನಿಗಳಾಗಿದ್ದಾರೆ ಎಂದು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ ವ್ಯಕ್ತಿಗಳಲ್ಲಿ ಅಗೋಚರವಾದ ಶಕ್ತಿ ಇದ್ದು, ಅದರಿಂದಾಗಿ ಪರರ ಸಹಾಯವಿಲ್ಲದೇ ತಮ್ಮ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಂಡು ಸ್ವಾಭಿಮಾನಿಗಳಾಗಿದ್ದಾರೆ ಎಂದು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಹೇಳಿದರು.

ನವನಗರದ ಕಲಾ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲವೊಂದು ಕಾರಣಗಳಿಂದ ಅಂಗವೈಕಲ್ಯದಿಂದ ಹುಟ್ಟಿದ್ದರೂ ಸಹ ದೇವರು ಅವರಿಗೆ ವಿಶೇಷ ಶಕ್ತಿಯನ್ನು ಕೊಟ್ಟಿರುತ್ತಾನೆ ಎಂದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ನಮ್ಮ ದೇಶದಲ್ಲಿ ವಿಕಲಚೇತನರ ಸಂಖ್ಯೆ ನೋಡಿದಾದ ₹2.86 ಕೋಟಿ ಹಾಗೂ ರಾಜ್ಯದಲ್ಲಿ 13.24 ಲಕ್ಷ ಜನಸಂಖ್ಯೆ ಇದೆ. ಸ್ವಾಭಿಮಾನದ ಸಂಖ್ಯೆತವಾಗಿ ವಿಕಲಚೇತನ ಎಂಬ ಪದವನ್ನು ಬಳಸಲಾಗುತ್ತಿದ್ದು, ಸಾಮಾನ್ಯ ಜನರಂತೆ ನಾವು ಕೂಡಾ ಸ್ವಾವಲಂಬಿಗಳಾಗಿ ಬದುಕು ಸಾಗಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಭಗವಂತ ಎಲ್ಲರಿಗೂ ಒಂದೊಂದು ರೀತಿಯ ಶಕ್ತಿ ಕೊಟ್ಟಿರುತ್ತಾನೆ. ಅದೇ ರೀತಿಯ ವಿಕಲಾಂಗವಾಗಿದ್ದರೂ ಅದಕ್ಕೆ ಪೂರಕವಾಗಿ ಮತ್ತೊಂದು ವಿಶೇಷ ಶಕ್ತಿ ಸಹ ಕೊಟ್ಟಿರುತ್ತಾನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಕ್ರೀಡೆಗಳಲ್ಲಿ ವಿಚೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಕಲಚೇತನರನ್ನು ಸನ್ಮಾನಿಸಲಾಯಿತು. ಪೂರ್ಣನಂದ ಸ್ವಾಮಿಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ.ಕೆ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಡೂಗನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಮಹಾಂತೇಶ, ನಿವೃತ್ತಿ ಅಧಿಕಾರಿ ಎಸ್.ಎಸ್.ಬೆಳಗಲಿ, ವಿಕಲಚೇತನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಾದ ರಾಜು ತೇರದಾಳ, ಪರಶುರಾಮ ತೆಗ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದಿಂದ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು.ಸಾಧಕರಿಗೆ ಸನ್ಮಾನ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಕಲಚೇತನ ಹಾಗೂ ವಿಶೇಷ ಚೇತನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು. ಅಬ್ದುಲ್ ಸಂಗಮದ (ಕ್ರೀಡಾಕ್ಷೇತ್ರ), ಪರಶುರಾಮ ತೋಟಗೇರ (ವಿಕಲಚೇತನ ಕ್ಷೇತ್ರ), ವೀರನಗೌಡ ರೋಣದ (ಕೃಷಿ), ದುರಗಪ್ಪ ಮಾದರ (ವಿಕಲಚೇತನ), ಸುರೇಶ ಕೋಟಿ (ಕ್ರೀಡೆ), ಕೋನವ್ವ ಭಗವತಿ (ವಿಕಲಚೇತನ), ರೆಹಮಾನ್‌ ಬೂವಾಜಿ (ಸಮಾಜ), ಗಂಗಾಧರ ಬಡಿಗೇರ (ವಿಕಲಚೆತನ), ಹುಸೇನಸಾಬ್‌ ಮುದಗಲ್ಲ (ಸಮಾಜ), ವೀರಭದ್ರಯ್ಯ ಮಠ (ವಿಕಲಚೇತನ), ಶೇಖರ ಕಾಖಂಡಕಿ (ಕ್ರೀಡೆ), ರೂಪಾ ಹಿಪ್ಪರಗಿ (ವಿಕಲಚೇತನ), ರಮೇಶ ಧನಗರ (ಕ್ರೀಡೆ), ಶಂಕರ ತಳಗೇರಿ (ವಿಕಲಚೇತನ), ಉದಯ ಮಾಲಾಪೂರ (ಸಮಾಜ), ಮಹಾದೇವಿ ಅಕ್ಕೋಳ (ವಿಕಲಚೇತನ), ರುದ್ರಪ್ಪ ರಡರಟ್ಟಿ, ಸುಭಾಷ ಹಾದಿಮನಿ (ವಿಕಲಚೇತನ), ಶಶಿಧರ ಜಿಗಜಿನ್ನಿ (ಸಂಗೀತ), ಅಶ್ವಿನಿ ನಡಕಟ್ಟಿನ (ಸಾಹಿತ್ಯ), ರಂಗನಗೌಡ ಗೌಡರ (ಸಮಾಜ), ಈರಣ್ಣ ಶೇಖಾ, ಕಲಾವತಿ ಪರಮಶೆಟ್ಟಿ, ಸುನಿತಾ ಹೊಸಮನಿ, ಸಿದ್ದನಗೌಡ ಪಾಟೀಲ, ರಾಜೇಶ್ವರಿ ಗಾಳಿ, ಶಿವಾನಂದ ಅಂಗಡಿ (ವಿಶೇಷ ಚೇತನ).

ಯಾವುದೇ ಒಂದು ಕೊರತೆ ಇದೆ ಎಂದರೇ ಅದರ ಜತೆಗೆ ಇನ್ನೊಂದು ಶಕ್ತಿ ಇರುತ್ತದೆ. ಒಂದು ಕೈ ಇಲ್ಲವಾದರೇ ಎರಡು ಕೈಗಳ ಶಕ್ತಿ ಒಂದೇ ಕೈಗೆ ದೇವರು ಕೊಟ್ಟಿರುತ್ತಾನೆ. ದೌರ್ಬಲ್ಯಕ್ಕೆ ಮತ್ತೊಂದು ಶಕ್ತಿ ಇದ್ದೆ ಇರುತ್ತದೆ. ಇದಕ್ಕೆ ನಿರ್ದಶನ ಗದುಗಿನ ಗಾನಯೋಗಿಗಳಾದ ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳು ಹುಟ್ಟುಕುರುಡು ಆಗಿದ್ದರೂ ಅವರ ಸಾಧನೆಗೈಯುವುದಲ್ಲದೇ ನಾಡಿನ ಅನೇಕ ಅಂದ ಕಲಾವಿದರನ್ನು ನಾಡಿಗೆ ನೀಡುವ ಕಾರ್ಯ ಮಾಡಿದ್ದಾರೆ.

-ಎಚ್.ವೈ.ಮೇಟಿ, ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷರು.

Share this article