ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪಶ್ಚಿಮ ವಾಹಿನಿಯ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಅಧ್ಯಕ್ಷೆ ಎನ್.ಸರಸ್ವತಿ ಅವರ ಮನೆಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಮಾತನಾಡಿ, ಅಂಗವಿಕಲತೆ ಶಾಪವಲ್ಲ. ಅಂಗವಿಕಲರು ವಿಶ್ವದಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಅವರಂತೆ ಸಾಧನೆಯತ್ತ ವಿಕಲಚೇತನರು ಮುನ್ನಡೆಯಬೇಕು ಎಂದರು.
ಶ್ರೀರಂಗನಾಯಕಿ ಸಮಾಜ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ, ಆದರ್ಶ ಒಬ್ಬ ವಿಕಲಚೇತನ ವ್ಯಕ್ತಿ ಎಂದು ಅನ್ನಿಸುವುದಿಲ್ಲ. ಮನೆಗೆ ಬಂದ ಎಲ್ಲರನ್ನೂ ಬಹಳ ಆತ್ಮೀಯದಿಂದ ಮಾತನಾಡಿಸುತ್ತಾನೆ. ಸರಸ್ವತಿ ಅವರ ಸಹ ಸಮಾಜ ಸೇವೆ ಜೊತೆಗೆ ಅವರ ಮಗನಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ, ಸ್ನಾನ ಎಲ್ಲವನ್ನು ಮಾಡಿಸುವ ಮೂಲಕ ಬಹಳ ಅಚ್ಚುಕಟ್ಟಾಗಿ ನೋಡಿಕೊಂಡು, ಸಾಕುತ್ತಿದ್ದಾರೆ ಇವರಿಬ್ಬರಿಗೂ ದೇವರು ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.ಸಮಾಜ ಸೇವಕಿ ಲಯನ್ ಎನ್.ಸರಸ್ವತಿ ಮಾತನಾಡಿ, ವೇದಿಕೆ ಸದಸ್ಯರು ನನ್ನ ಮಗನಿಗೆ ಅಭಿನಂದಿಸಿ ಗೌರವಿಸುತ್ತಿರುವುದು ಖುಷಿ ಕೊಟ್ಟಿದೆ. ಪ್ರಪಂಚದಾದ್ಯತ ನನ್ನ ಮಗನಂತ ಎಷ್ಟೋ ಮಂದಿ ವಿಕಲಚೇತನರಿದ್ದಾರೆ. ಸಮಾಜ ಅವರ ಬಗ್ಗೆ ಅನುಕಂಪ ತೋರುವ ಬದಲು ಅವಕಾಶ ಕಲ್ಪಿಸುವಂತಾಗಲಿ ಎಂದರು.