ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ತಾಲೂಕು ಆಡಳಿತ ಭವನದ ಆವರಣದಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 666 ಮಂದಿ ತಮ್ಮ ಹಕ್ಕು ಚಲಾಯಿಸಿದರು.
ನಂಜನಗೂಡು ತಾಲೂಕಿನಲ್ಲಿ 479 ಪುರುಷ ಹಾಗೂ 271 ಮಹಿಳಾ ಮತದಾರರು ಸೇರಿದಂತೆ ಒಟ್ಟು 750 ಮಂದಿ ಮತದಾರರಿದ್ದು, ಈ ಪೈಕಿ 433 ಮಂದಿ ಪುರುಷರು ಹಾಗೂ 233 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 666 ಮಂದಿ ಮತಚಲಾವಣೆಯಲ್ಲಿ ಭಾಗಿಯಾಗಿದ್ದರು.ಇನ್ನು ಮತದಾನ ಕೇಂದ್ರದ ಹೊರಗೆ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರ ಬೆಂಬಲಿಗರು ಮತಯಾಚನೆ ಮಾಡುವ ಮೂಲಕ ಮತದಾರರ ಮನವೊಲಿಸಲು ಕೊನೆ ಕ್ಷಣದ ಪ್ರಯತ್ನ ನಡೆಸಿದರು.