ಪಿಆರ್‌ಒ., ಎಪಿಆರ್‌ಒಗಳ ತರಬೇತಿ ಸ್ಥಳಕ್ಕೆ ಜಿಲ್ಲಾ ಚುನಾವಣಾಧಿಕಾರಿ ಭೇಟಿಕನ್ನಡಪ್ರಭ ವಾರ್ತೆ ಕೊಪ್ಪಳ
ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಪಿಆರ್‌ಒ., ಎಪಿಆರ್‌ಒಗಳ ತರಬೇತಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು,. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ. ಚುನಾವಣೆ ಕರ್ತವ್ಯದಲ್ಲಿ ಪಿಆರ್‌ಒ., ಎಪಿಆರ್‌ಒಗಳ ಪಾತ್ರವೂ ಪ್ರಮುಖವಾಗಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಓದಿಕೊಳ್ಳಬೇಕು. ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಚುನಾವಣಾ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು, ಯಾವುದೇ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ ಎಂದರು.ತರಬೇತಿ ಕಾರ್ಯ ಹಾಗೂ ಮತಯಂತ್ರಗಳ ಭದ್ರತಾ ಕೊಠಡಿ ಪರಿಶೀಲನೆ:ಗಂಗಾವತಿಯ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆ ಆವರಣದಲ್ಲಿ ನಡೆದ ಪಿಆರ್‌ಒ., ಎಪಿಆರ್‌ಒಗಳ ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಮತಯಂತ್ರಗಳ ಭದ್ರತಾ ಕೋಠಡಿ ಸಹ ಪರಿಶೀಲಿಸಿದರು.
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಚುನಾವಣಾ ಸಿಬ್ಬಂದಿಯ ಊಟದ ವ್ಯವಸ್ಥೆಯನ್ನು ನಲಿನ್ ಅತುಲ್ ಖುದ್ದಾಗಿ ಪರಿಶೀಲಿಸಿದರು.
ಪ್ರಿಸೈಡಿಂಗ್ ಅಧಿಕಾರಿ ಕೈಪಿಡಿ ಕೊರತೆ:
ಪ್ರಿಸೈಡಿಂಗ್ ಅಧಿಕಾರಿಗಳ ಕೈಪಿಡಿಯನ್ನು ಪ್ರತಿಯೊಬ್ಬರಿಗೂ ನೀಡಬೇಕು. ಪ್ರತಿ ಬಾರಿಯೂ ಪ್ರತಿಯೊಬ್ಬರಿಗೂ ನೀಡಲಾಗುತ್ತದೆ. ಆದರೆ, ಈ ಬಾರಿ ಕೆಲವೇ ಕೆಲವರಿಗೆ ನೀಡಿದ್ದು, ಹಲವರಿಗೆ ಸಿಕ್ಕಿಯೇ ಇಲ್ಲ. ಈ ಕುರಿತು ಅಧಿಕಾರಿಗಳು ಯಾರು ಸಹ ಸರಿಯಾದ ಉತ್ತರ ನೀಡಿಲ್ಲ. ಆದರೆ, ಕೈಪಿಡಿ ಸಿಗದೆ ಇರುವವರಿಗೆ ಪಿಡಿಎಫ್ ಹಾಕುತ್ತೇವೆ, ಅದನ್ನೇ ನೋಡಿಕೊಳ್ಳಿ ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ. ಹಾಗಾದರೆ ಇವುಗಳನ್ನು ಮುದ್ರಿಸಿದ್ದಾದರೂ ಎಷ್ಟು, ಕಡಿಮೆ ಬಿದ್ದಿದ್ದು ಯಾಕೆ, ತರಬೇತಿಗೆ ಎಷ್ಟು ಪ್ರಿಸೈಡಿಂಗ್ ಅಧಿಕಾರಿಗಳು ಬರುತ್ತಾರೆ ಎನ್ನುವುದು ಗೊತ್ತಿರಲಿಲ್ಲ. ಅಥವಾ ಪಿಡಿಎಫ್ ನೀಡಲೇಬೇಕು ಎಂದಾಗಿದ್ದರೇ ಎಲ್ಲರಿಗೂ ಪಿಡಿಎಫ್ ಪ್ರತಿಯನ್ನೇ ನೀಡಬಹುದಾಗಿತ್ತಲ್ಲ ಎನ್ನುವ ಪ್ರಶ್ನೆಗೆ ಜಿಲ್ಲಾ ಚುನಾವಣಾಧಿಕಾರಿಗಳೇ ಉತ್ತರಿಸಬೇಕಾಗಿದೆ.