ಮುಗಳಖೋಡ ಮಠಕ್ಕೆ ಶೆಟ್ಟರ, ಜೊಲ್ಲೆ ದಂಪತಿ ಭೇಟಿ

KannadaprabhaNewsNetwork |  
Published : Apr 09, 2024, 12:47 AM IST
ಜೊಲ್ಲೆ | Kannada Prabha

ಸಾರಾಂಶ

ಮುಗಳಖೋಡ: ಪಟ್ಟಣದ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಶ್ರೀಮಠಕ್ಕೆ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ ಹಾಗೂ ಅವರ ಪುತ್ರಿ ಶ್ರೀಮಠಕ್ಕೆ ಭೇಟಿ ನೀಡಿ ಯಲ್ಲಾಲಿಂಗ ಪ್ರಭುವಿನ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮುಗಳಖೋಡ: ಪಟ್ಟಣದ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಶ್ರೀಮಠಕ್ಕೆ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ ಹಾಗೂ ಅವರ ಪುತ್ರಿ ಶ್ರೀಮಠಕ್ಕೆ ಭೇಟಿ ನೀಡಿ ಯಲ್ಲಾಲಿಂಗ ಪ್ರಭುವಿನ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾ.ಶ್ರೀ ಮುರುಘರಾಜೇಂದ್ರ ಮಹಾ ಶಿವಯೋಗಿಗಳಿಂದ ಆಶೀರ್ವಾದ ಪಡೆದರು. ಶ್ರೀ ಮುರುಘರಾಜೇಂದ್ರ ಮಹಾ ಶಿವಯೋಗಿಗಳಿಗೆ ಫಲಪುಷ್ಪ ಸಮರ್ಪಿಸಿ ಭಕ್ತಿಯಿಂದ ಗೌರವ ಸಲ್ಲಿಸಿದರು.

ಈ ವೇಳ‍ೆ ಆರ್‌ಎಸ್‌ಎಸ್ ಮುಖಂಡ ರಮೇಶ ಖೇತಗೌಡರ, ಮಾರುತಿ ಗೋಕಾಕ, ರಾಯಗೌಡ ಖೇತಗೌಡ, ಸಿದ್ದರಾಮ ಯಾರಡತ್ತಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಖಣದಾಳೆ, ಲತಾ ಹುದ್ದಾರ, ಸಂಕಲ್ಪ ಶೆಟ್ಟರ, ಶ್ರದ್ಧಾ ಶೆಟ್ಟರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ನವಲಿಹಾಳ, ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಮಲ್ಲಿಕಾರ್ಜುನ ಖಾನಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಲಾ ಪಣದಿ, ಒಬಿಸಿ ಘಟಕ ಅಧ್ಯಕ್ಷ ಭೀಮಸಿ ಬನಶಂಕರಿ, ಎಸ್ಸಿ ಮೋರ್ಚಾ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಯುವ ಮೋರ್ಚಾ ಅಧ್ಯಕ್ಷ ರಾಮನಗೌಡ ಪಾಟೀಲ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ