ಧಾರವಾಡ:
ಆಶುಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆ, ಜಾನಪದ ಗೀತೆ, ಚಿತ್ರಕಲೆ , ಧಾರ್ಮಿಕ ಪಠಣ ಸಂಸ್ಕೃತ, ಕವನ ವಾಚನ , ರಂಗೋಲಿ, ಕವ್ವಾಲಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಕ್ರಮವಾಗಿ ಚೈತ್ರಾ ವಾಲೀಕಾರ, ಚಿನ್ನು ಗೋಲಣ್ಣವರ, ಸವಿತಾ ಮುಶೆಲ್ಲನವರ, ಸಂಜನಾ ಬೇಟಗೇರಿ, ಸ್ವಸ್ತಿಕ ಕಂಚನಳ್ಳಿ, ಪ್ರಿಯಾ ಬೆಟಗೇರಿ, ಸೌಜನ್ಯ ಯಡಳ್ಳಿ, ರೇಣುಕಾ ಗೋರೋಜನವರ, ತನುಜಾ ಬಾಳಿಕಾಯಿ ಹಾಗೂ ಸಂಗಡಿಗರು ಪಡೆದಿದ್ದಾರೆ.
ಕನ್ನಡ ಭಾಷಣ, ಧಾರ್ಮಿಕ ಪಠಣ ಅರೇಬಿಕ್, ಮಿಮಿಕ್ರಿ, ಗಜಲ್, ಭಾವಗೀತೆ ಸ್ಪರ್ಧೆಗಳಲ್ಲಿ ಕ್ರಮವಾಗಿ ಸರಸ್ವತಿ ಹಿರೇಮಠ, ಶಾಂಭವಿ ಕಾಲವಾಡ, ನಿಂಗಪ್ಪ ಕಪ್ಪಣ್ಣವರ, ಸಂಗೀತಾ ಹುರುಳಿ, ಚೇತನಾ ಸಂಕೀನ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲಿಷ್ ಭಾಷಣ , ಹಿಂದಿ ಭಾಷಣ ಸ್ಪರ್ಧೆಗಳಲ್ಲಿ ಕ್ರಮವಾಗಿ ಲಕ್ಷ್ಮೀ ಬೇಲೂರ, ಕಲ್ಲವ್ವ ಕಲಕೇರಿ ತೃತೀಯ ಸ್ಥಾನ ಪಡೆದಿದ್ದಾರೆ. ಮಕ್ಕಳ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು, ಸಿಬ್ಬಂದಿ, ಗ್ರಾಮಸ್ಥರು ಅಭಿನಂದಿಸಿದ್ದಾರೆ.