ಗಣಪತಿ ದೇವಸ್ಥಾನ ನಿರ್ಮಿಸಲು ಅನುಮತಿ

KannadaprabhaNewsNetwork | Published : Dec 26, 2023 1:32 AM

ಸಾರಾಂಶ

ಗಣೇಶ ಮೂರ್ತಿ ಮತ್ತು ಗಣೇಶ ದೇವಾಲಯ ನಿರ್ಮಾಣಕ್ಕೆ ಅನುಮತಿ ಕೊಡಿಸಿದ ಪೊಲೀಸರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಸಿಎನ್ ದುರ್ಗಾ ಹೋಬಳಿಯ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಿಹಳ್ಳಿ ಗ್ರಾಮದಲ್ಲಿ ಕಳೆದ 35 ವಷರ್ಗಳಿಂದ ಗಣಪತಿ ನಿರ್ಮಿಸುತ್ತಿದ್ದರು. ಆದರೆ, ಕಳೆದ 2 ವಷರ್ದಿಂದ ಗಣೇಶನ ಮೂರ್ತಿ ನಿರ್ಮಿಸುತ್ತಿದ್ದ ಜಾಗದ ಪಕ್ಕದ ಮನೆಯವರಿಂದ ‘ನಮ್ಮ ಮನೆಯ ಪಕ್ಕದಲ್ಲಿ ವಿನಾಯಕನ ಮೂರ್ತಿ ನಿರ್ಮಾಣ ಮಾಡಬೇಡಿ’ ಎಂದು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಊರಿನ ಗ್ರಾಮಸ್ಥರು ಹಾಗೂ ವಿರೋಧಿಸಿದ ಮನೆಯವರು ಕೊರಟಗೆರೆ ಠಾಣಾ ಮೆಟ್ಟಿಲೇರಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಬ್‌ ಇನ್ಸ್‌ಪೆಕ್ಟರ್ ಚೇತನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಗ್ರಾಮಸ್ಥರ ಜೊತೆಗೆ ದಾಖಲೆಗಳನ್ನು ಪರಿಶೀಲಿಸಿ ಗಣಪತಿ ದೇವಸ್ಥಾನ ನಿರ್ಮಿಸಲು ಅನುಮತಿ ಕಲ್ಪಿಸಿದ್ದಾರೆ.

ಮಾಜಿ ಅಧ್ಯಕ್ಷೆ ರತ್ನಮ್ಮ ರಮೇಶ್ ಮಾತನಾಡಿ, ಕಳೆದ ಎರಡು ವಷರ್ಗಳ ಹಿಂದೆ ಗಣಪತಿ ದೇವಸ್ಥಾನ ನಿರ್ಮಾಣಕ್ಕೆ ವಿಘ್ನ ವಿನಾಶಕ ಗೆಳೆಯರ ಬಳಗ ಎಂಬ ಸಂಘದಿಂದ ದೇವಸ್ಥಾನ ಕಟ್ಟಲು ಮುಂದಾದಾಗ ಪಕ್ಕದ ಮನೆಯವರಿಂದ ವಿರೋಧ ವ್ಯಕ್ತಪಡಿಸಿದ್ದರು. ದೇವಾಲಯದ ಜಾಗವು ಯಾವುದೇ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿರುವುದಿಲ್ಲ. ವಿಘ್ನ ವಿನಾಯಕ ಗೆಳೆಯರ ಬಳಗದ ಕಮಿಟಿಯ ಹೆಸರಿನಲ್ಲಿ ಗ್ರಾಮ ಪಂಚಾಯಿತಿಯ ಖಾತೆಯಲ್ಲಿ ರಿಜಿಸ್ಟರ್ ಆಗಿರುತ್ತದೆ.

ಒಂದು ಮನೆಯ ವಿರೋಧದಿಂದ ಗಣೇಶನ ಮೂರ್ತಿ ನಿರ್ಮಿಸದೆ ಕಳೆದ ವರ್ಷ ಅಕ್ಕ-ಪಕ್ಕದ ಗ್ರಾಮಗಳಿಗೆ ತೆರಳಿ ನೋಡಿಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ, ಇಂದು ಸ್ಥಳಕ್ಕೆ ಭೇಟಿ ನೀಡಿದ ಸಬ್‌ಇನ್ಸ್‌ಪೆಕ್ಟರ್‌ ಚೇತನ್ ಗೌಡ ಹಾಗೂ ಸಿಬ್ಬಂದಿ ವಿರೋಧಿಗಳಿಗೆ ತಿಳುವಳಿಕೆ ನೀಡಿ ನಮ್ಮ ಗ್ರಾಮಸ್ಥರಿಗೆ ನ್ಯಾಯ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಇಂದೆಯೇ ಗುದ್ದಲಿ ಪೂಜೆ ಮಾಡಿ ಅಡಿ ಪಾಯ ಹಾಕುತ್ತಿದ್ದೇವೆ. ಪೊಲೀಸ್ ಇಲಾಖೆಯವರಿಗೆ ನಮ್ಮ ಗ್ರಾಮಸ್ಥರಿಂದ ಅಭಿನಂದನೆಗಳು ಎಂದು ತಿಳಿಸಿದರು.

ಹಿಂದಿನ ಕಾಲದ ನಮ್ಮ ಪೂರ್ವಿಕರು ಆಚರಿಸುತ್ತಿದ್ದಂತಹ ಹಬ್ಬ-ಹರಿ ದಿನಗಳನ್ನು ತುಂಬಾ ಸಡಗರದಿಂದ ಆಚರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇಂತಹ ಸನ್ನಿವೇಶಗಳನ್ನು ಕಂಡರೆ ತುಂಬಾ ಮನಸ್ಸಿಗೆ ಬೇಸರದ ವಿಷಯ ಎಂದು ವಿಘ್ನ ವಿನಾಶಕ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಕೆಂಪಯ್ಯ ಮಾತನಾಡಿದರು.

ಈ ಸಂದರ್ಭದಲ್ಲಿ ವಿಘ್ನ ವಿನಾಶಕ ಗೆಳೆಯರ ಬಳಗದ ಉಪಾಧ್ಯಕ್ಷ ಗಿರೀಶ್, ಗ್ರಾ.ಪಂ ಅಧ್ಯಕ್ಷೇ ಗೀತಾ ಮಂಜುನಾಥ್, ಉಪಾಧ್ಯಕ್ಷೆ ಸರಸ್ವತಮ್ಮ ಮಂಜುನಾಥ್, ಸದಸ್ಯರಾದ ರವಿಕುಮಾರ್, ನವೀನ್ ಕುಮಾರ್, ಮಂಜು ಕೆ.ಎಲ್.ಎಂ., ದ್ರಾಕ್ಷಣಮ್ಮ, ಮಹೇಶ್ ಮತ್ತು ಪೊಲೀಸ್ ಇಲಾಖಾ ಅಧಿಕಾರಿಗಳಾದ ಪ್ರದೀಪ್ ಕುಮಾರ್, ದಯಾನಂದ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Share this article